ಷೇರುದಾರರು ಕಡ್ಡಾಯವಾಗಿ ಸಹಕಾರ ಸಂಘದಲ್ಲಿಯೇ ವ್ಯವಹಾರ ನಡೆಸಬೇಕು: ಶಾಸಕ ಎಚ್.ಟಿ.ಮಂಜು

| Published : Sep 14 2025, 01:04 AM IST

ಷೇರುದಾರರು ಕಡ್ಡಾಯವಾಗಿ ಸಹಕಾರ ಸಂಘದಲ್ಲಿಯೇ ವ್ಯವಹಾರ ನಡೆಸಬೇಕು: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಗತಿ ದಿಕ್ಕಿನಂತ ಸಾಗುತ್ತಿರುವ ಸಂಘದಿಂದ ನಿರುದ್ಯೋಗಿ ಪದವೀಧರರಿಗೆ ಆರ್ಥಿಕವಾಗಿ ಶಕ್ತಿ ಬಂದಿದೆ. ಸ್ವಾಬಲಂಬನೆ ಸಾಧಿಸಿ ಮುನ್ನಡೆಯಲು ದಾರಿ ದೀಪವಾಗಿದೆ. ತಾಲೂಕಿನಲ್ಲಿರುವ ಎಲ್ಲಾ ಪದವೀಧರರು ಕಡ್ಡಾಯವಾಗಿ ಸಂಘಕ್ಕೆ ಶೇರುದಾರರಾಗುವ ಮೂಲಕ ಸಂಘವು ಇನ್ನೂ ಬೆಳೆದು ಹೆಮ್ಮರವಾಗಿ ಪರಿವರ್ತನೆ ಹೊಂದುವ ದಿಕ್ಕಿನಲ್ಲಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಷೇರುದಾರರು ಕಡ್ಡಾಯವಾಗಿ ಸಂಘದಲ್ಲಿಯೇ ಹಣಕಾಸು ವ್ಯವಹಾರ ಮಾಡುವ ಮೂಲಕ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷ್ಣರಾಜಪೇಟೆ ತಾಲೂಕು ಗ್ರಾಜುಯೇಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು.

ಸೊಸೈಟಿಯಲ್ಲಿ ಕೇವಲ 400 ಜನ ಪದವೀಧರರು ಷೇರುದಾರರಾಗಿದ್ದು, ಸೊಸೈಟಿಯು ಏಳೂವರೆ ಲಕ್ಷ ರು.ಗೂ ಹೆಚ್ಚಿನ ಲಾಭಗಳಿಸಿ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಪದವೀಧರ ಬಂಧುಗಳ ಅವಶ್ಯಕತೆಗೆ ಪೂರಕವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ.

ಪ್ರಗತಿ ದಿಕ್ಕಿನಂತ ಸಾಗುತ್ತಿರುವ ಸಂಘದಿಂದ ನಿರುದ್ಯೋಗಿ ಪದವೀಧರರಿಗೆ ಆರ್ಥಿಕವಾಗಿ ಶಕ್ತಿ ಬಂದಿದೆ. ಸ್ವಾಬಲಂಬನೆ ಸಾಧಿಸಿ ಮುನ್ನಡೆಯಲು ದಾರಿ ದೀಪವಾಗಿದೆ. ತಾಲೂಕಿನಲ್ಲಿರುವ ಎಲ್ಲಾ ಪದವೀಧರರು ಕಡ್ಡಾಯವಾಗಿ ಸಂಘಕ್ಕೆ ಶೇರುದಾರರಾಗುವ ಮೂಲಕ ಸಂಘವು ಇನ್ನೂ ಬೆಳೆದು ಹೆಮ್ಮರವಾಗಿ ಪರಿವರ್ತನೆ ಹೊಂದುವ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದರು.

ಸೊಸೈಟಿ ಅಧ್ಯಕ್ಷ ಡಾ.ಅಂಚಿ ಸಣ್ಣಸ್ವಾಮಿಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವೀಧರ ಬಂಧುಗಳಿಗೆ ಆರ್ಥಿಕ ಸ್ವಾವಲಂಬನೆ ನೀಡುವ ಸದುದ್ದೇಶದಿಂದ ಆರಂಭವಾದ ಸೊಸೈಟಿಯು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತ ಪ್ರಗತಿಯ ದಿಕ್ಕಿನತ್ತ ಮುನ್ನಡೆಯುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ಡಿ.ಆರ್.ಮರಿಸ್ವಾಮಿಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷ ಪದ್ಮೇಶ್, ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಶಿಕ್ಷಣ ಇಲಾಖೆ ವಿಶ್ರಾಂತ ಆಯುಕ್ತರಾದ ಕೆ.ಗೋಪಾಲ್, ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ನಾಗರಾಜು, ಮುತ್ತುರಾಜು, ಪುಟ್ಟಸ್ವಾಮಿ, ಸಿ.ನಿರಂಜನ್, ಎಚ್.ಟಿ.ಮಹದೇವ, ಡಿ.ಆರ್. ನಾಗೇಶ್, ಕೆ.ಆರ್.ಮಹೇಶ್, ಅನಿಲ್ ಕುಮಾರ್.ಸಿ.ಎಂ, ಸುಮಾ, ವಿ.ಕೆ. ಸ್ವರೂಪ, ಚಂದ್ರು ಸೇರಿದಂತೆ ನೂರಾರು ಷೇರುದಾರರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಸಂಘದ ಕಾರ್ಯದರ್ಶಿ ಲಕ್ಷ್ಮಿ ಮಂಜೇಗೌಡ ಸಭೆಯಲ್ಲಿ ವರದಿ ಮಂಡಿಸಿದರು. ಇದೇ ವೇಳೆ ಈ ಸ್ಟಾಂಪಿಂಗ್ ಆಪರೇಟರ್ ನಗ್ಮಾ ಭಾನು ಅವರ ಸೀಮಂತ ಕಾರ್ಯವನ್ನು ಸಂಘದ ಷೇರುದಾರರು ಹಾಗೂ ಆಡಳಿತ ಮಂಡಳಿ ಎಲ್ಲಾ ಸದಸ್ಯರು ಮಾಡಿದ್ದು ಗಮನ ಸೆಳೆಯಿತು.