ಸಾರಾಂಶ
ಶಿಗ್ಗಾಂವಿ: ಮನದ ಮೈಲಿಗೆ ದೂರಾಗಲು ಶರೀಫರ ತತ್ವಗಳು ಮಾರ್ಗದರ್ಶಿಯಾಗಿವೆ. ಮನುಕುಲದ ಬದುಕು ಮೌಲ್ಯಾಧಾರಿತವಾಗಲು ಸಾಧ್ಯವಿದೆ. ಹೀಗಾಗಿ ಶರೀಫರು ಇಂದಿಗೂ ಸ್ಮರಣೀಯರಾಗಿದ್ದಾರೆ ಎಂದು ಶಿಗ್ಗಾಂವಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಎ.ಸಿ. ವಾಲಿ ಗುರೂಜಿ ಅಭಿಪ್ರಾಯಪಟ್ಟರು.ತಾಲೂಕಿನ ಶಿಶುವಿನಹಾಳ ಗ್ರಾಮದ ಶರೀಫಗಿರಿ ಭಾವೈಕ್ಯ ಮಂದಿರದಲ್ಲಿ ಶರೀಫ ಶಿವಯೋಗಿ ಮತ್ತು ಗುರುಗೋವಿಂದ ಶಿವಯೋಗಿಗಳ ಪಂಚಾಗ್ನಿಮಠ ಟ್ರಸ್ಟ್ ವತಿಯಿಂದ ಗುರುವಾರ ನಡೆದ ಸಂತ ಶಿಶುವಿನಹಾಳದ ಶರೀಫ ಶಿವಯೋಗಿಗಳ ೨೦೬ನೇ ಜಯಂತ್ಯುತ್ಸವ ಹಾಗೂ ೧೩೬ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಶರೀಫರು ನಡೆದಾಡಿದ ಈ ಪುಣ್ಯ ಭೂಮಿಯಲ್ಲಿ ಜನಿಸಿದವರೇ ಪುಣ್ಯವಂತರು. ಈ ನೆಲದ ಮಣ್ಣಿನಲ್ಲಿ ಭಾವೈಕ್ಯ ಇದೆ. ಜಗತ್ತಿಗೆ ಭಾವೈಕ್ಯ ಕೇಂದ್ರವಾಗುವ ಮೂಲಕ ಭಾರತ ವಿಶ್ವಗುರುವಾಗಿ ಹೊರ ಹೊಮ್ಮಲು ಕಾರಣವಾಗಿದೆ. ಶರೀಪರ ತತ್ವಪದಗಳು ಅವರ ಜೀವಂತತೆಗೆ ಕಾರಣವಾಗಿವೆ. ಅದರಿಂದಾಗಿ ಸಾಧಕರ, ಸಂತರು ಸಾವಿನ ನಂತರವು ಜೀವಂತರಾಗಿದ್ದಾರೆ. ಅವರ ತತ್ವ ಸಂದೇಶಗಳು ಮನುಕುಲ ಇರುವವರೆಗೂ ಇರುತ್ತವೆ ಎಂದರು.ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ಇಂದಿನ ಪ್ರತಿಯೊಂದು ಸಮಸ್ಯೆ, ಸವಾಲುಗಳಿಗೆ ಶರೀಫರ ತತ್ವಗಳು ಪರಿಹಾರ ನೀಡುತ್ತಿವೆ. ಹೀಗಾಗಿ ಜನಮನದಲ್ಲಿ ಶಾಶ್ವತವಾಗಿ ನೆಲೆ ಕಂಡಿದ್ದಾರೆ ಎಂದರು.
ಧಾರವಾಡದ ಕೆಸಿಡಿ ಕಾಲೇಜಿನ ಪ್ರಾಧ್ಯಾಪಕ ದಳಪತಿ, ಹುಬ್ಬಳ್ಳಿ ಮಹಾನಗರ ಪಾಲಿಕೆ ಸದಸ್ಯೆ ಸವಿತಾ ಮಾಲೋದಕರ ಮಾತನಾಡಿದರು.ಪಂಚಾಗ್ನಿಮಠ ಟ್ರಸ್ಟ್ ಉಪಾಧ್ಯಕ್ಷ ಎಸ್.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಮೇಶ ಶಿರೂರ ಮುಖಂಡರಾದ ಗೋಪಾಲರಾವ್ ದೇಶಪಾಂಡೆ, ಗ್ರಾಪಂ ಅಧ್ಯಕ್ಷ ಚಾಕಪ್ಪ ಕಟ್ಟಾಣಿ, ಬಸಣ್ಣ ಮಳಲಿ, ಚಂಬಣ್ಣ ಬೆಟದೂರ, ಮುಖ್ಯಶಿಕ್ಷಕ ಸಿ.ಡಿ. ಗಜಕೋಶ, ಎಸ್.ಎಂ. ಬ್ಯಾತನಾಳ, ಎಲ್.ಎಸ್. ಗುರವೈನವರ, ಬಿ.ಕೆ. ಹೊಸಪೇಟಿ ಇತರರು ಇದ್ದರು.