ಬೆಳ್ತಂಗಡಿ: ಗುರುವಾಯನಕೆರೆ ಮೂಡುಬಿದಿರೆ ರಸ್ತೆಯಲ್ಲಿ ₹1 ಕೋಟಿ ವೆಚ್ಚದ ನಗರಾಲಂಕಾರ ದೀಪವನ್ನು ಬರೋಡ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾರ ಲೋಕಾರ್ಪಣೆಗೊಳಿಸಿದರು.
ಬೆಳ್ತಂಗಡಿ: ಗುರುವಾಯನಕೆರೆ ಮೂಡುಬಿದಿರೆ ರಸ್ತೆಯಲ್ಲಿ ₹1 ಕೋಟಿ ವೆಚ್ಚದ ನಗರಾಲಂಕಾರ ದೀಪವನ್ನು ಬರೋಡ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾರ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಅಭಿವೃದ್ಧಿಯ ಸಂಕಲ್ಪ ಹೊತ್ತು ಶಾಸಕ ಹರೀಶ್ ಪೂಂಜ ತಾಲೂಕಿಗೆ ಸಾವಿರಾರು ಕೋಟಿ ಅನುದಾನದ ತಂದಿರುವುದಲ್ಲದೇ ಕುವೆಟ್ಟು ಗ್ರಾಮದ ಅಭಿವೃದ್ಧಿಗೆ ಅತೀ ಹೆಚ್ಚು ಅನುದಾನ ನೀಡಿ ಗುರುವಾಯನಕೆರೆ-ಮೂಡುಬಿದಿರೆ ರಸ್ತೆಯ ಶಕ್ತಿನಗರದಲ್ಲಿ ರಸ್ತೆ ಸೌಂದರ್ಯಕ್ಕಾಗಿ ದೀಪಾಲಂಕಾರ ವ್ಯವಸ್ಥೆ ಮಾಡಿದ್ದಾರೆ. ಅವರನ್ನು ಕುವೆಟ್ಟು ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಶಾಸಕ ಹರೀಶ್ ಪೂಂಜ ಮಾತನಾಡಿ, ಕುವೆಟ್ಟು ಗ್ರಾಮ ಪಂಚಾಯಿತಿ ಸದಸ್ಯರ ಬೇಡಿಕೆಗೆ ಸ್ಪಂದಿಸಿ ಉತ್ತಮ ರೀತಿಯ ದೀಪದ ವ್ಯವಸ್ಥೆ ಕಲ್ಪಿಸಿ ಶಕ್ತಿನಗರಕ್ಮೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ ಎಂದರು. ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿ ನಗರಗಳು ಅಲಂಕಾರಗೊಂಡಾಗ ಆ ಪ್ರದೇಶದ ಮೌಲ್ಯ ಹೆಚ್ಚಾಗಲು ಅನುಕೂಲ. ಶಾಸಕರ ಮುತುವರ್ಜಿಯಿಂದ ಅನೇಕ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಬೆಳ್ತಂಗಡಿ ಪಟ್ಟಣ ಪೇಟೆಯಲ್ಲಿ ಇದೇ ರೀತಿಯ ವಿದ್ಯುತ್ ಅಲಂಕಾರ ಮಾಡಿಕೊಡಬೇಕು ಎಂದು ಶಾಸಕರಲ್ಲಿ ವಿನಂತಿಸಿದರು.ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಸೂರಜ್ ಹಾನಿಂಜ, ಗುರುವಾಯನಕೆರೆ ಸಿಎ ಬ್ಯಾಂಕ್ ಅದ್ಯಕ್ಷ ಮುಗುಳಿ ನಾರಾಯಣ ರಾವ್, ಜಿ.ಪಂ ಮಾಜಿ ಸದಸ್ಯೆ ಮಮತಾ ಎಂ ಶೆಟ್ಟಿ, ಕುವೆಟ್ಟು ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಕುಲಾಲ್, ಸದಸ್ಯರಾದ ನಿತೀಶ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಆಶಾಲತಾ, ಹೇಮಂತ್ ಶೆಟ್ಟಿ, ನಿತೀನ್ ಬರಾಯ ಇದ್ದರು.