ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶತಕಲಶಾಭಿಶೇಕ

| Published : Apr 24 2024, 02:20 AM IST

ಸಾರಾಂಶ

ದೇವರಿಗೆ ಪಂಚಾಮೃತ ಸೀಯಾಳ ಅಭಿಶೇಕ ಬಳಿಕ ಶತಕಲಶಗಳ ಅಭಿಶೇಕ, ಕನಕಾಭಿಶೇಕ, ಗಂಗಾ ಭಾಗೀರಥಿ ಅಭಿಶೇಕ, ಮಂಗಳಾರತಿ ಸಿಂಹಾಸನದಲ್ಲಿ ಮಹಾ ಮಂಗಳಾರತಿ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿಯ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ದೇವರುಗಳಿಗೆ ಶತಕಲಶಾಭಿಶೇಕವು ಜರುಗಿತು. ಮುಂಜಾನೆ ಮಹಾ ಪ್ರಾರ್ಥನೆಯ ಬಳಿಕ ಸಿಂಹಾಸನದಲ್ಲಿರುವ ಎಲ್ಲ ದೇವರುಗಳನ್ನು ಸ್ಥಾನೀಯ ಮಂಟಪಕ್ಕೆ ತಂದು ಕಲಶ ಪೂಜೆ ಅಧಿವಾಸಾಧಿ ಉಪಕ್ರಮಗಳು ಹಾಗೂ ಅರ್ಚನೆ ನಡೆಯಿತು.

ಬಳಿಕ ದೇವರಿಗೆ ಪಂಚಾಮೃತ ಸೀಯಾಳ ಅಭಿಶೇಕ ಬಳಿಕ ಶತಕಲಶಗಳ ಅಭಿಶೇಕ, ಕನಕಾಭಿಶೇಕ, ಗಂಗಾ ಭಾಗೀರಥಿ ಅಭಿಶೇಕ, ಮಂಗಳಾರತಿ ಸಿಂಹಾಸನದಲ್ಲಿ ಮಹಾ ಮಂಗಳಾರತಿ, ಅಷ್ಟ ಮಂಗಲ ನಿರೀಕ್ಷೆ, ಪಟ್ಟ ಕಾಣಿಕೆ, ಮಹಾ ನೈವೇದ್ಯ, ಮಂಗಳಾರತಿ, ಭೂರೀ ಸಮಾರಾಧನೆ, ರಾತ್ರಿ ಪೂಜೆ ದೀಪಾರಾಧನೆ, ರಥೋತ್ಸವ, ದೇವ ದರ್ಶನ ಸಹಿತ ನಿತ್ಯೋತ್ಸವ, ಚಂದ್ರ ಮಂಡಲ ಉತ್ಸವ ಬಳಿಕ ವಸಂತ ಪೂಜೆಯೊಂದಿಗೆ ಉತ್ಸವ ಸಂಪನ್ನಗೊಂಡಿತು. ಈ ಸಂದರ್ಭ ಶ್ರೀ ಕ್ಷೇತ್ರದ ದೇವದರ್ಶನ ಪಾತ್ರಿ ಸತ್ಯನಾರಾಯಣ ನಾಯಕ್, ಅರ್ಚಕ ವೃಂದ, ಮೊಕ್ತೇಸರರು, ಆಡಳಿತ ಸಮಿತಿ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.