ಕೊಪ್ಪಳ: ಕನ್ನಡ ಸಾರಸ್ವತ ಲೋಕ ಸಾಹಿತ್ಯದ ವಿವಿಧ ಪ್ರಕಾರಗಳಿಂದ ಬಹಳ ಶ್ರೀಮಂತವಾಗಿದೆ. ಈ ಪರಂಪರೆಗೆ ಮತ್ತಷ್ಟು ಮೆರಗು ತಂದಿರುವ ಸಾಹಿತ್ಯ ಪ್ರಕಾರ ಕನ್ನಡ ಶಾಯಿರಿಗಳು.ಬದುಕಿನ ಸಾರ ಕೆಲವೇ ಸಾಲುಗಳಲ್ಲಿ ತೆರೆದಿಡುವ ಪರಿ ಶಾಯಿರಿಗಿದೆ.ಇದನ್ನು ಓದಿಯೇ ಸವಿಯಬೇಕು. ಕಡಿಮೆ ಶಬ್ದಗಳಲ್ಲಿ ಹೆಚ್ಚು ಅರ್ಥ ನೀಡುವ ಶಾಯಿರಿ ಮನಸ್ಸಿಗೆ ಆನಂದ ನೀಡಿ ಮುಖದಲ್ಲಿ ಮಂದಹಾಸ ತರುತ್ತವೆ ಎಂದು ಸಾಹಿತಿ ಶಿವಪ್ರಸಾದ ಹಾದಿಮನಿ ಹೇಳಿದರು.

ನಗರದ ಶ್ರೀಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಮಂಗಳವಾರ ಆಯೋಜಿಸಲಾಗಿದ್ದ ಶಾಯರಿಕಾರರ ಜತೆ ಸಂವಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತೋಷವಾದಾಗ ಮತ್ತು ಬಹಳ ದುಃಖವಾದಾಗ ಮನಸ್ಸಿನ ಭಾವನೆ ಹೊರ ಹಾಕುವ ಸಾಧನ ಶಾಯಿರಿಗಳು. ಶಾಯಿರಿಗಳಲ್ಲಿ ಭಾವನೆಗಳದೇ ಅಧಿಪತ್ಯವಿರುತ್ತದೆ.ಶಾಯರ್ ಎಂದರೆ ಕವಿ,ಶಾಯರಿ ಎಂದರೆ ಕವಿತೆ. ನವೋದಯ ಸಂದರ್ಭದಲ್ಲಿ ಕನ್ನಡಲ್ಲಿ ಕಂಡು ಬಂದ ಶಾಯಿರಿ ಸಾಹಿತ್ಯದ ವೈಶಿಷ್ಟತೆಗಳಾಗಿವೆ. ಜೀವನದ ಬಹುತೇಕ ಎಲ್ಲ ಮುಖ,ಆಗು ಹೋಗು ಕಾವ್ಯ ರೂಪದಲ್ಲಿ ತೆರೆದಿಟ್ಟ ಇವು ಒಲವಿನ ಬಗ್ಗೆ ಬಹುಪಾಲು ಮೀಸಲಾಗಿಸಿವೆ. ಶಾಯಿರಿ ಹೇಳುವುದು ಒಂದು ಕಲೆಯಾಗಿದೆ. ಎರಡೆರಡು ಸಲ ಮೊದಲಿನ ಸಾಲು ರಹಸ್ಯವನ್ನಿಟ್ಟು ಹೇಳಿದ ನಂತರ ಎರಡನೇ ಸಾಲಿನಲ್ಲಿ ರಹಸ್ಯ ಸ್ಫೋಟವಾಗುವುದು. ಆಗ ವಾವಾ, ಕ್ಯಾ ಬಾತ್ ಹೈ ಎಂಬ ಉದ್ಘಾರ ಕೇಳುಗರಿಂದ ಹೊರಡುತ್ತದೆ. ಶಾಯಿರಿಗಳಲ್ಲಿ ಅದ್ಭುತ ಕಲ್ಪನೆ,ತತ್ವಜ್ಞಾನ ಅಡಕವಾಗಿರುತ್ತದೆ.ಶಾಹಿರಿ ಕೇಳುವುದರಿಂದ ಮತ್ತು ಅಧ್ಯಯನದಿಂದ ನೀವೆಲ್ಲರು ಅನುಭವಿಸಬೇಕು ಎಂದರು.

ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಶರಣಬಸಪ್ಪ ಬಿಳಿಯಲೆ ಮಾತನಾಡಿ, ಸಾಹಿತ್ಯ ಒದುವುದರಿಂದ ಮನಸ್ಸಿನ ಶ್ರೀಮಂತಿಕೆ ಹೆಚ್ಚಾಗುತ್ತದೆ. ಮನಸ್ಸನು ಮುದಗೂಳಿಸುವ ಸಾಹಿತ್ಯ ಶಾಹಿರಿಗಳಾಗಿವೆ ಅವುಗಳನ್ನು ನೀವೆಲ್ಲರು ಓದುವುದರ ಮೂಲಕ ಅನುಭವಿಸಬೇಕು ಎಂದು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಞಾನ ಮತ್ತು ಮನಸ್ಸಿಗೆ ಆನಂದ ನೀಡಿ,ಬದುಕಿನ ಅನುಭವ ಜತೆಗೆ ಬದುಕುವ ಕಲೆ ಕಲಿಸುವ ಶಕ್ತಿ ಸಾಹಿತ್ಯಕ್ಕಿದೆ.ಅಂತಹ ಅನುಭವ ಶಾಹಿರಿ ನೀಡುತ್ತವೆ. ನಾಡಿನ ಶಾಹಿರಿಕಾರರ ಪ್ರೇರಣೆಯಿಂದ ಶಾಯರಿ ಓದುವ, ರಚಿಸುವ ಸೃಜನಶೀಲತೆ ಬೆಳೆಸಿಕೊಳ್ಳಲು ಈ ಕಾರ್ಯಕ್ರಮ ಅಗತ್ಯವಾಗಿವೆ ಎಂದರು. ಹೇಮಲತಾ ಸ್ವಾಗತಿಸಿದರು, ಪ್ರವೀಣ ವಂದಿಸಿದರು.