ಸಾರಾಂಶ
ಕಾರ್ಯಾಗಾರವನ್ನು ಪುಣೆಯ ಸಿಂಬಯೋಸಿಸ್ ತಾಂತ್ರಿಕ ಸಂಸ್ಥೆಯ ಸಹಪ್ರಾಧ್ಯಾಪಕಿ ಡಾ. ರಾಹೀ ವಾಲಾಂಬೆ ಉದ್ಘಾಟಿಸಿದರು. ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ. ವೇಣುಗೋಪಾಲ ಪಿ.ಎಸ್. ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಇಲ್ಲಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಿಬ್ಬಂದಿ ಅಭಿವೃದ್ಧಿ ಕೇಂದ್ರ (ಎಸ್.ಡಿ.ಸಿ), ಐಇಇಇ ಬೆಂಗಳೂರು ಸೆಕ್ಷನ್ ಹಾಗೂ ವುಮನ್ ಇನ್ ಎಂಜಿನಿಯರಿಂಗ್ ಮಂಗಳೂರು ಉಪವಿಭಾಗದ ಸಹಯೋಗದಲ್ಲಿ ಹಾಗೂ ಕೆನರಾ ಬ್ಯಾಂಕ್ ಸಹಪ್ರಾಯೋಜಕತ್ವದಲ್ಲಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗವು ‘ಶೀ ಲೀಡ್ಸ್: ಡೆವಲಪಿಂಗ್ ಲೀಡರ್‌ಶಿಪ್ ಕಾಂಪಿಟೆನ್ಸೀಸ್ ಫಾರ್ ವುಮನ್ ಅಕಾಡೆಮಿಷಿಯನ್ಸ್’ ಎಂಬ 3 ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಾಗಾರವನ್ನು ಆಯೋಜಿಸಿತು.ಕಾರ್ಯಾಗಾರವನ್ನು ಪುಣೆಯ ಸಿಂಬಯೋಸಿಸ್ ತಾಂತ್ರಿಕ ಸಂಸ್ಥೆಯ ಸಹಪ್ರಾಧ್ಯಾಪಕಿ ಡಾ. ರಾಹೀ ವಾಲಾಂಬೆ ಉದ್ಘಾಟಿಸಿದರು. ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ. ವೇಣುಗೋಪಾಲ ಪಿ.ಎಸ್. ಗೌರವ ಅತಿಥಿಯಾಗಿ ಭಾಗವಹಿಸಿದ್ದರು.ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಿಬ್ಬಂದಿ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಸಾಧನಾ ದೇಶ್‌ಮುಖ್ ಉಪಸ್ಥಿತರಿದ್ದರು. ಸುಮಾರು 60 ಮಂದಿ ಈ ಅಧ್ಯಾಪಕರು, ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಅಶ್ವಿನಿ ಬಿ. ಸ್ವಾಗತಿಸಿದರು. ವಿಭಾಗದ ಪ್ರಾಧ್ಯಾಪಕಿ ಡಾ. ಮಂಜುಳಾ ಗುರುರಾಜ್ ರಾವ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ರಶ್ಮಿ ನವೀನ್ ಗೌರವ ಅತಿಥಿಯನ್ನು ಪರಿಚಯಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಚಿನ್ಮಯಿ ಶೆಟ್ಟಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ದೀಪಾ ಕಾರ್ಯಕ್ರಮ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))