ಒಕ್ಕಲಿಗರ ಸಂಘಕ್ಕೆ ಅಧ್ಯಕ್ಷರಾಗಿ ಶೇಖರ್ ಆಯ್ಕೆ

| Published : Feb 09 2024, 01:45 AM IST

ಸಾರಾಂಶ

ನೂತನವಾಗಿ ರಚಿತವಾದ ಸಂಘಟನೆಗಳು ಜನಾಂಗಗಳಲ್ಲಿನ ಅಭಿವೃದ್ದಿಗೆ ಸ್ಪಂದಿಸುವಂತಾಗಲಿ, ನೂತನ ಪದಾಧಿಕಾರಿಗಳು ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸ ಮಾಡಿ ಎಂದು ಮಾಜಿ ಶಾಸಕ ಆರ್ ನರೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲನೂತನವಾಗಿ ರಚಿತವಾದ ಸಂಘಟನೆಗಳು ಜನಾಂಗಗಳಲ್ಲಿನ ಅಭಿವೃದ್ದಿಗೆ ಸ್ಪಂದಿಸುವಂತಾಗಲಿ, ನೂತನ ಪದಾಧಿಕಾರಿಗಳು ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸ ಮಾಡಿ ಎಂದು ಮಾಜಿ ಶಾಸಕ ಆರ್ ನರೇಂದ್ರ ಹೇಳಿದರು.

ಕೊಳ್ಳೇಗಾಲದ ಜಿವಿಗೌಡ ಕಾಲೇಜಿನಲ್ಲಿ ಅಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಸಂಘಗಳ ರಚನೆ ವೇಗ ಪಡೆದುಕೊಂಡಂತೆ ಅಭಿವೃದ್ದಿ, ಹೆಚ್ಚಿನ ಸಂಘಟನೆಯತ್ತ ಮುಂದಾಗಬೇಕು, ಸಂಘದ ದ್ಯೇಯೊದ್ದೇಶಗಳನ್ನುಈಡೇರಿಸುವಂತಾಗಬೇಕು, ಯಾವುದೆ ಕಾರಣಕ್ಕೂ ಒಡಕುಂಟಾಗದಂತೆ ಪದಾಧಿಕಾರಿಗಳು ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿ ಅರಿಯಬೇಕು ಎಂದರು.

ಕೊಳ್ಳೇಗಾಲ ನಗರ ಘಟಕದ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಶೇಖರ್, ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಆರ್ ನರೇಂದ್ರ ಆಯ್ಕೆಯಾದರು. ಜಿವಿ ಗೌಡ ಕಾಲೇಜಿನಲ್ಲಿ ಜರುಗಿದ ಸಭೆಯಲ್ಲಿ ಕಾರ್ಯದರ್ಶಿಯಾಗಿ ಸಿದ್ದಲಿಂಗೇಗೌಡ, ಉಪಾಧ್ಯಕ್ಷರಾಗಿ ಮಹೇಶ್, ಪ್ರಕಾಶ್, ಖಜಾಂಚಿಯಾಗಿ ಮಾದೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಸತೀಶ್, ಸಂಘಟನಾ ಕಾರ್ಯದರ್ಶಿಯಾಗಿ ಆರ್ ಸತೀಶ್ ಆಯ್ಕೆಯಾದರು. ಉಳಿದಂತೆ ಕಾರ್ಯಕಾರಿ ಮಂಡಳಿ ನಿರ್ದೇಶಕರಾಗಿ ಪಿ. ರಾಜು, ದೊಡ್ಡ ಕೆಂಪೇಗೌಡ, ಎಂ.ಪ್ರಕಾಶ್, ಕೆಂಪರಾಜು, ಅನಿಲ್ ಕುಮಾರ್, ಬಾಸ್ಕರ್, ಸೋಮಣ್ಣ, ನಾಗರಾಜು, ಉಮೇಶ್, ಎಸ್.ನಾಗರಾಜು, ನಂಜುಂಡೇಗೌಡ, ಸಿದ್ದಪ್ಪಾಜಿಗೌಡ, ಕೆ ಶಶಿಧರ್ ಆಯ್ಕೆಯಾಗಿದರು. ಸಲಹಾ ಸಮಿತಿ ಸದಸ್ಯರಾಗಿ ಎಂ. ಬಾಲಕೖಷ್ಣ, ರಾಚೇಗೌಡ, ಹೊನ್ನಪ್ಪ. ಪುಟ್ಟರಾಜು, ಶಿವಮಲ್ಲೆಗೌಡ,. ರವೀಂದ್ರ ಚಿಕ್ಕಮರಿಗೌಡ, ಸಿದ್ದೆಗೌಡ, ದೊಡ್ಡಲಿಂಗೇಗೌಡ ಆಯ್ಕೆಯಾದರು.

ಈ ಸಂದರ್ಭದಲ್ಲಿ ಪ್ರೊ. ದೊಡ್ಡಲಿಂಗೇಗೌಡ, ಸತ್ತೇಗಾಲ ಪುಟ್ಟರಾಜು, ಬನ್ನಿ ಸಾರಿಗೆ ರಾಚೇಗೌಡ ಇನ್ನಿತರಿದ್ದರು.