ಕುರುಬರು ಯಾರ ಹಕ್ಕನ್ನೂ ಕಸಿಯಲ್ಲ: ಕಾಗಿನೆಲೆ ಶ್ರೀ

| Published : Oct 11 2025, 12:02 AM IST

ಕುರುಬರು ಯಾರ ಹಕ್ಕನ್ನೂ ಕಸಿಯಲ್ಲ: ಕಾಗಿನೆಲೆ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕುರುಬರಿಗೆ ಸಂವಿಧಾನ ಬದ್ಧವಾಗಿ ಎಸ್.ಟಿ. ಮೀಸಲಾತಿ ಪಡೆಯುವ ಹಕ್ಕಿದೆ, ಅದಕ್ಕಾಗಿಯೇ ಕುಲಶಾಸ್ತ್ರ ಅಧ್ಯಯನವೂ ಆಗಿದೆ. ಬಿಜೆಪಿ ಸರ್ಕಾರವಿದ್ದಾಗ ಕುರುಬರಿಗೆ ಎಸ್.ಟಿ. ಮೀಸಲಾತಿ ಕೊಡುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪವನ್ನು ಕಳಿಸಿತ್ತು. ಈಗ ಕೇಂದ್ರ ಸಕಾರಕ್ಕೆ ಕೆಲವೊಂದು ಮಾಹಿತಿಯನ್ನು ಪೂರಕವಾಗಿ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದ ಕುರುಬರಿಗೆ ಸಂವಿಧಾನ ಬದ್ಧವಾಗಿ ಎಸ್.ಟಿ. ಮೀಸಲಾತಿ ಪಡೆಯುವ ಹಕ್ಕಿದೆ, ಅದಕ್ಕಾಗಿಯೇ ಕುಲಶಾಸ್ತ್ರ ಅಧ್ಯಯನವೂ ಆಗಿದೆ. ಬಿಜೆಪಿ ಸರ್ಕಾರವಿದ್ದಾಗ ಕುರುಬರಿಗೆ ಎಸ್.ಟಿ. ಮೀಸಲಾತಿ ಕೊಡುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪವನ್ನು ಕಳಿಸಿತ್ತು. ಈಗ ಕೇಂದ್ರ ಸಕಾರಕ್ಕೆ ಕೆಲವೊಂದು ಮಾಹಿತಿಯನ್ನು ಪೂರಕವಾಗಿ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಆದ್ದರಿಂದ ಕುರುಬ ಸಮಾಜವು ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ವಾಲ್ಮೀಕಿ ಸಮಾಜ ನಮ್ಮ ಸೋದರ ಸಮಾಜವಾಗಿದ್ದು, ಅವರು ಈಗಾಗಲೇ ಶೇ.7 ರಷ್ಟು ಎಸ್.ಟಿ. ಮೀಸಲಾತಿ ಪಡೆಯುತ್ತಿದ್ದಾರೆ. ಆದ್ದರಿಂದ ನಾವು ಅವರು ಪಡೆಯುತ್ತಿರುವ ಮೀಸಲಾತಿಯ ಪ್ರಮಾಣದಲ್ಲಿ ನಾವು ಪಾಲು ಕೇಳುತ್ತಿಲ್ಲ. ಎಂದು ಸ್ಪಷ್ಟಪಡಿಸಿದರು.

ಈ ವಿಚಾರವಾಗಿ ವಾಲ್ಮೀಕಿ ಸಮುದಾಯದ ಕೆಲವರು ಮಾದ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕುರುಬರಿಗೆ ಎಸ್.ಟಿ. ಮೀಸಲಾತಿ ಕೊಡಬಾರದು ಎಂದು ಖಂಡಿಸಿ ಹೋರಾಟ ಮಾಡುತ್ತಿರುವುದು ತಪ್ಪು. ಅವರಿಗೆ ನಾವು ಸ್ಪಷ್ಟವಾಗಿ ಹೇಳುವುದೇನೆಂದರೆ, ಲೋಕೂರು ಸಮಿತಿಯ ಮಾನದಂಡಗಳಂತೆ ಇರುವ ಕುರುಬ ಸಮುದಾಯದ ಲಕ್ಷಣಗಳನ್ನು ಆಧರಿಸಿ ಕೇಂದ್ರ ಸರ್ಕಾರ ಎಸ್.ಟಿ. ಮೀಸಲಾತಿ ನೀಡಿದರೆ, ನಿಮಗೆ ನೀಡಿರುವ ಶೇ.7ರಷ್ಟು ಮೀಸಲಾತಿಯಲ್ಲಿ ನಾವು ಪಾಲನ್ನು ಪಡೆಯುವುದಿಲ್ಲ ಎಂದು ಹೇಳಿದರು .

ನಾವು ಈಗಾಗಲೇ 2ಎ ಮೀಸಲಾತಿಯಲ್ಲಿನ ಕುರುಬರ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಪಡೆದುಕೊಂಡು ಶೇ. 7 ರಷ್ಟಿರುವ ಮೀಸಲಾತಿಯ ಪ್ರಮಾಣವನ್ನು ಶೇ. 15 ಕ್ಕೆ ಹೆಚ್ಚಿಸಿ ಮೀಸಲಾತಿ ಪಡೆಯುವ ಉದ್ದೇಶವನ್ನು ಹೊಂದಿದ್ದೇವೆ.

ಆದ್ದರಿಂದ ವಾಲ್ಮೀಕಿ ಸೋದರ ಸಮಾಜವು ಯಾವುದೇ ಊಹಾಪೋಹ, ಗೊಂದಲಗಳಿಗೆ ಕಿವಿಗೊಡದೇ, ಸಂವಿಧಾನಬದ್ಧವಾಗಿ ನಮ್ಮ ಹಕ್ಕನ್ನು ಪಡೆಯುತ್ತೇವೆ. ಸಮಾಜದಲ್ಲಿ ಯಾವತ್ತೂ ಸೋದರ ಸಮಾಜಗಳಂತಿರುವ ನಾವು, ನೀವುಗಳು ಸಾಮರಸ್ಯ, ಸೌಹಾರ್ದತೆಯಿಂದ ಇದ್ದು ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳೋಣ ಎಂದು ಮನವಿ ಮಾಡುವುದಾಗಿ ಹೇಳಿದ್ದಾರೆ.

ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹೊನ್ನಾಳಿಯ ಎಚ್.ಬಿ. ಮಂಜಪ್ಪ ಅವರನ್ನು ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಮ್ಮ ಮಠದಲ್ಲಿ ಸನ್ಮಾನಿಸಿ ಗೌರವಿಸಿದ ಸಂದರ್ಭ ಮಾತನಾಡಿದರು.