ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದು ಬಹಳ ನೋವಾಗಿದೆ. ಸೋತರೂ ಕಾಂಗ್ರೆಸ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಶೆಟ್ಟರ್ ಅವರಿಗೆ ಏನೂ ಕಡಿಮೆ ಮಾಡಿಲ್ಲ. ವಿಧಾನಸಭಾ ಚುನಾವಣೆ ವೇಳೆ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಬೈದಷ್ಟು ಕಾಂಗ್ರೆಸ್‌ನವರೇ ಬೈದಿಲ್ಲ. ಕೆಟ್ಟ ಪದಗಳಲ್ಲಿ ಬಿಜೆಪಿಯನ್ನು ಜಗದೀಶ್ ಶೆಟ್ಟರ್ ಬೈದಿದ್ದಾರೆ. ವಿಧಾನಸಭಾ ಎಲೆಕ್ಷನ್‌ನಲ್ಲಿ ಬಿಜೆಪಿಯವರು ಟಿಕೆಟ್ ಕೊಡಲಿಲ್ಲ. ಕಾಂಗ್ರೆಸ್ ಟಿಕೆಟ್ ಕೊಟ್ಟಿತು. ಶೆಟ್ಟರ್ ಸ್ಪರ್ಧೆ ಮಾಡಿದರು. ರಾಜ್ಯದಲ್ಲಿ ಯಾರೂ ಸೋತಿಲ್ಲ ಅಷ್ಟು ಹೀನಾಯವಾಗಿ ಸೋತರು.
ಶೆಟ್ಟರ್ ಸೋತ ಬಳಿಕವೂ ಪಕ್ಷ ಅವರನ್ನು ಎಂಎಲ್‌ಸಿ ಮಾಡಿತು. ಎಂಎಲ್‌ಸಿ ಮಾಡಿ ಮೂರು ತಿಂಗಳು ಕಳೆದಿಲ್ಲ, ರಾಜೀನಾಮೆ ಕೊಟ್ಟಿದ್ದಾರೆ. ಅವರು ಪಕ್ಷ ಬಿಟ್ಟಿದ್ದು, ವೈಯಕ್ತಿಕವಾಗಿ ನನಗೆ ನೋವು ತಂದಿದೆ ಎಂದರು.ಬಿಜೆಪಿಯವರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು. ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳುವುದು ಸರಿಯಲ್ಲ. ಅವರು ವಿಧಾನಸಭಾ ಚುನಾವಣೆ ವೇಳೆ ಭಾರೀ ಕೆಟ್ಟದಾಗಿ ವಾಗ್ದಾಳಿ ಮಾಡಿದ್ದಾರೆ ಎಂದು ದೂರಿದರು.ಜಗದೀಶ್ ಶೆಟ್ಟರ್ ಅವರ ರೀತಿಯೇ ಲಕ್ಷ್ಮಣ ಸವದಿ ಅವರು ಬಿಜೆಪಿ ಸೇರ್ಪಡೆ ಮಾಡಲಿದ್ದಾರೆಯೇ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶೆಟ್ಟರ್ ಬಿಜೆಪಿಗೆ ಹೋಗಿದ್ದಾರೆ, ಆದರೆ ಸವದಿ ಹೋಗಲ್ಲ. ಸವದಿ ಬಹಳ ಲೀಡ್‌ನಲ್ಲಿ ಗೆದ್ದು ಶಾಸಕರಾಗಿದ್ದಾರೆ ಎಂದರು.
ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಹೋಗಲ್ಲ. ಆ ವಿಶ್ವಾಸ ನನಗೆ ಇದೆ. ಅವರು ಪಕ್ಷೇತರರಾಗಿಯೇ ಉಳಿಯಲಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸ ಇದೆ ಎಂದರು.Shettar has gone to BJP for a long time Hurt: Zameer Ahmed Khanಹೊಸಪೇಟೆ ಸುದ್ದಿ, ಜಗದೀಶ ಶೆಟ್ಟರ್, ಜಮೀರ್ ಅಹಮ್ಮದ್, Hospet News, Jagadish Shetter, Jameer Ahmed