ಸಾರಾಂಶ
ಬಾಗಲಕೋಟೆ: ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಂದ ಕೊಡುಗೆ ಶೂನ್ಯ. ಅವರಿಂದ ಪಕ್ಷಕ್ಕೆ ಲಾಭವಾಗಲಿಲ್ಲ. ಬದಲಾಗಿ ಹಾನಿ ಉಂಟು ಮಾಡ ಹೋಗಿದ್ದಾರೆ. ಅವರ ಧೋರಣೆ ಖಂಡಿಸುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು. ನವನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಯಾಕೆ ಬಿಜೆಪಿ ಬಿಟ್ಟು ಬಂದಿರಿ? ಬಿಡಲು ಏನು ತೊಂದರೆ ಆಗಿತ್ತು? ಆದರೂ ಬಿಜೆಪಿಯಲ್ಲಿ 6 ಬಾರಿ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಸಭಾಪತಿ ಆಗಿ ಕೆಲಸ ಮಾಡಿದ್ರಿ ಬಿಜೆಪಿ ಬಿಟ್ಟು ಬರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಶೆಟ್ಟರ್ ಅವರಿಂದ ಕೊಡುಗೆ ಶೂನ್ಯ. ಅವರಿಂದ ಪಕ್ಷಕ್ಕೆ ಲಾಭವಾಗಲಿಲ್ಲ. ಬದಲಾಗಿ ಹಾನಿ ಉಂಟು ಮಾಡ ಹೋಗಿದ್ದಾರೆ. ಅವರ ಧೋರಣೆ ಖಂಡಿಸುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.ನವನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಯಾಕೆ ಬಿಜೆಪಿ ಬಿಟ್ಟು ಬಂದಿರಿ? ಬಿಡಲು ಏನು ತೊಂದರೆ ಆಗಿತ್ತು? ಆದರೂ ಬಿಜೆಪಿಯಲ್ಲಿ 6 ಬಾರಿ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಸಭಾಪತಿ ಆಗಿ ಕೆಲಸ ಮಾಡಿದ್ರಿ ಬಿಜೆಪಿ ಬಿಟ್ಟು ಬರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್‌ನಲ್ಲಿ ಅವರ ಅಪ್ಪ ಇದ್ದರು. ರಾಜಕಾರಣದಲ್ಲಿ 30 ವರ್ಷ ಇದ್ದಾಗಲೂ ಅವರ ಮೇಲೆ ಹಗರಣ ಇಲ್ಲ. ಪ್ರಚಾರಕ್ಕೆ ಬರುವ ರಾಜಕಾರಣಿ ಅಲ್ಲ, ಆದರೂ ಬಿಜೆಪಿಯಲ್ಲಿ ಅವರಿಗೆ ಪ್ರಮುಖ ಸ್ಥಾನ ಕೊಟ್ಟರೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಬಂದಿರಿ. ಕಾಂಗ್ರೆಸ್ ಹೊಗಳೋದು ಬೇಡ, ನಮ್ಮವರು ಅವಸರ ಮಾಡಿದರು. ಶೆಟ್ಟರ್ ಕಾಂಗ್ರೆಸ್ ಬಂದಿದ್ದು ಲಾಭ ಆಗಿಲ್ಲ, ಕಾಂಗ್ರೆಸ್‌ಗೆ ಅವರ ಕೊಡುಗೆ ಶೂನ್ಯ. ಬಿಜೆಪಿ ಭ್ರಷ್ಟಾಚಾರ, ಆಡಳಿತದ ಬೇಜವಾಬ್ದಾರಿತನದಿಂದ ಹಾಗೂ ಜನ ಬದಲಾವಣೆ ಬಯಸಿ, ಐದು ಗ್ಯಾರಂಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.ನಮ್ಮಲ್ಲಿಯೂ ಲಿಂಗಾಯತ ನಾಯಕರಿದ್ದಾರೆ:
ಹುಬ್ಬಳ್ಳಿ ಧಾರವಾಡದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಅವರಿಂದ ಹಾನಿ ಆಗಿದೆ. ಶೆಟ್ಟರ್ ಧೋರಣೆ ಖಂಡನೀಯ. ನಮ್ಮ ಪಕ್ಷದಲ್ಲಿ ಈಶ್ವರ ಖಂಡ್ರೆ, ಎಂ.ಬಿ. ಪಾಟೀಲರಂಥ ಲಿಂಗಾಯತ ನಾಯಕರು ಇದ್ದಾರೆ. ಹೊರಗಡೆಯಿಂದ ಬಂದವರನ್ನು ಪೂರ್ವಾಪರ ಆಲೋಚನೆ ಮಾಡಿ ಹಾಗೂ ಅವಸರ ಮಾಡದೇ ಆಲೋಚಿಸಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ಮಾತನ್ನು ಸಮರ್ಥನೆ ಮಾಡಿಕೊಂಡರು. ರಾಜಕಾರಣಿಗಳ ಬಗ್ಗೆ ಅಸಡ್ಡೆ ಧೋರಣೆ ತೋರಿಸುವಂತಹ ಕೆಲಸವನ್ನು ಶೆಟ್ಟರ್ ಮಾಡಿದರು. ನಮ್ಮ ಪಕ್ಷದವರು ಹೊಸದಾಗಿ ಬಂದವರಿಗೆ ಮಣೆ ಹಾಕದೆ ಪಕ್ಷದಲ್ಲಿ ದುಡಿದವರಿಗೆ ಆಧ್ಯತೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ನಂಜಯ್ಯ ನಮಠ ಮನವಿ ಮಾಡಿಕೊಂಡರು.ಸಾಮಾನ್ಯ ಕಾರ್ಯಕರ್ತನ ಎದುರು ಸೋಲು:
ಮಾಜಿ ಸಿಎಂ ಆಗಿದ್ದ ಜಗದೀಶ ಶೆಟ್ಟರ್ ಮಹೇಶ ಟೆಂಗಿನಕಾಯಿ ಎಂಬ ಸಾಮಾನ್ಯ ಕಾರ್ಯಕರ್ತನ ಎದುರು ಪರಾಭವಗೊಂಡರು. ಲಿಂಗಾಯತ ಸಮಾಜದವರು ಎಂದು ಸೋತರೂ ಅಂಗಿ ಬದಲಿಸುವುದರೊಳಗೆ ಕಾಂಗ್ರೆಸ್ ವಿಧಾನ ಪರಿಷತ್ ಸ್ಥಾನ ನೀಡಿತ್ತು. ಬಿಜೆಪಿ ಬಿಟ್ಟ ನಂತರ ನಿಮ್ಮ ಉಸಿರಾಟ ಚೆನ್ನಾಗಿಲ್ಲ. ಕಾಂಗ್ರೆಸ್ ನಲ್ಲಿ ಏನು ಉಸಿರುಗಟ್ಟಿದ ವಾತಾವರಣ ಇದೆ ಎಂದು ಪ್ರಶ್ನಿಸಿದರು.ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಬಿಟ್ಟು ಎಲ್ಲಿಯೂ ಹೋರಾಟ ಮಾಡಿಲ್ಲ, ಯಡಿಯೂರಪ್ಪ ಅಂತಹ ನಾಯಕರು ಬಿಜೆಪಿ ಕಟ್ಟಿದರು ಇವರು ಏನೂ ಕಟ್ಟಿಲ್ಲ, ಈಶ್ವರಪ್ಪ ಅವರ ರೀತಿ ಹಿಂದುಳಿದ ವರ್ಗದ ಪರ ಹೋರಾಟ ಸಮಾಜ ಕಟ್ಟಿದ ನಾಯಕರಲ್ಲ, ಬಿಜೆಪಿಗೂ ಇವರ ಕೊಡುಗೆ ಏನೂ ಇಲ್ಲ. ಎಲ್ಲ ಸ್ಥಾನಮಾನ ನೀಡಿದ ಬಿಜೆಪಿ ಬಿಟ್ಟು ಹೋದ ಶೆಟ್ಟರ್ ಬಗ್ಗೆ ಜನಎಂತಹ ರಾಜಕಾರಣಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಶೆಟ್ಟರ ಸ್ಥಾನಧಾರಿತ ನಾಯಕ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ನಿಂಗಪ್ಪ ಗಸ್ತಿ, ಶ್ರೀನಿವಾಸ ಬಳ್ಳಾರಿ, ರಾಜು ಮನ್ನಿಕೇರಿ, ಕುತುಬುದ್ದೀನ್ ಖಾಜಿ ಇದ್ದರು.