ಆಹಾರ ಪ್ರಿಯರ ಆಕರ್ಷಿಸಿದ ಶೆಟ್ಟರ ಸಂತೆ

| Published : Jun 03 2024, 12:31 AM IST

ಸಾರಾಂಶ

ವೈವಿಧ್ಯಮಯ ತಿಂಡಿ ತಿನಿಸು ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಒಂದೇ ಸೂರಿನಡಿ ಎಲ್ಲಾದರೂ ಬೊಂಬಾಟ್ ತಿಂಡಿ ಸಿಗುತ್ತೆ ಅಂದ್ರೆ ಬಿಡೋದಕ್ಕಾಗುತ್ತಾ. ಅದರಲ್ಲೂ ಒಂದೇ ಸೂರಿನಡಿ ಎಲ್ಲಾದರೂ ಶೆಟ್ಟರ ಮನೆಯ ಬೊಂಬಾಟ್ ತಿಂಡಿ ಸಿಗುತ್ತೆ ಅಂದ್ರೆ ಇದಕ್ಕಿಂತ ತಿಂಡಿ ಪ್ರಿಯರಿಗೆ ಬೇರೇನು ಬೇಕು. ಇನ್ನು ಮನೆಯಲ್ಲಿ ತಯಾರಾದ ಬಟ್ಟೆ, ಬ್ಯಾಗು, ಚಕ್ಕುಲಿ ಕೋಡಬಳೆ, ನಿಪ್ಪಟ್ಟು, ನಿಪ್ಪಟ್ಟು ಮಸಾಲೆ, ಬೋಟಿ ಮಸಾಲೆ, ಪಾನಿಪುರಿ, ರವೆ ಉಂಡೆ ಸೇರಿ ಆರ್ಯವೈಶ್ಯರ ವಿಶಿಷ್ಟ ಖಾದ್ಯಗಳು ಮತ್ತಿತರೆ ತಿನಿಸುಗಳು ತಿಂಡಿ ಪ್ರಿಯರ ಕೈ ಬೀಸಿ ಕರೆಯುತ್ತಿದ್ದವು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳು, ಕಂಡಲ್ಲೆಲ್ಲ ಘಮ ಘಮಿಸುವ ತರಾವರಿ ಖಾದ್ಯ ಆಹಾರ ಪ್ರಿಯರ ಕೈ ಬೀಸಿ ಕರೆಯುತ್ತಿದ್ದವು.

ನಗರದ ವಿನಾಯಕ ನಗರದಲ್ಲಿರುವ ನವ್ಯಶ್ರೀ ಸಭಾಂಗಣದಲ್ಲಿ ಆರ್ಯವೈಶ್ಯ ಮಹಾಜನ ಸಮಿತಿ ನೂರು ವರ್ಷ ಪೂರೈಸಿದ ಹಿನ್ನೆಲೆ ಭಾನುವಾರ ಆಯೋಜಿಸಿದ್ದ ವಿಭಿನ್ನ ರುಚಿ ಪರಿ ಶುದ್ಧವಾದ ಮನೆಯ ತಿಂಡಿಗಳ ಶೆಟ್ಟರ ಸಂತೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ನೂರಾರು ಜನರು ಮುಗಿಬಿದ್ದು ಖಾದ್ಯಗಳ ಸವಿಯನ್ನ ಸವಿದು ಸಂತಸ ವ್ಯಕ್ತಪಡಿಸಿದ್ದಾರೆ.

ವೈವಿಧ್ಯಮಯ ತಿಂಡಿ ತಿನಿಸು ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಒಂದೇ ಸೂರಿನಡಿ ಎಲ್ಲಾದರೂ ಬೊಂಬಾಟ್ ತಿಂಡಿ ಸಿಗುತ್ತೆ ಅಂದ್ರೆ ಬಿಡೋದಕ್ಕಾಗುತ್ತಾ. ಅದರಲ್ಲೂ ಒಂದೇ ಸೂರಿನಡಿ ಎಲ್ಲಾದರೂ ಶೆಟ್ಟರ ಮನೆಯ ಬೊಂಬಾಟ್ ತಿಂಡಿ ಸಿಗುತ್ತೆ ಅಂದ್ರೆ ಇದಕ್ಕಿಂತ ತಿಂಡಿ ಪ್ರಿಯರಿಗೆ ಬೇರೇನು ಬೇಕು. ಇನ್ನು ಮನೆಯಲ್ಲಿ ತಯಾರಾದ ಬಟ್ಟೆ, ಬ್ಯಾಗು, ಚಕ್ಕುಲಿ ಕೋಡಬಳೆ, ನಿಪ್ಪಟ್ಟು, ನಿಪ್ಪಟ್ಟು ಮಸಾಲೆ, ಬೋಟಿ ಮಸಾಲೆ, ಪಾನಿಪುರಿ, ರವೆ ಉಂಡೆ ಸೇರಿ ಆರ್ಯವೈಶ್ಯರ ವಿಶಿಷ್ಟ ಖಾದ್ಯಗಳು ಮತ್ತಿತರೆ ತಿನಿಸುಗಳು ತಿಂಡಿ ಪ್ರಿಯರ ಕೈ ಬೀಸಿ ಕರೆಯುತ್ತಿದ್ದವು. ಜನರು ಬಹಳ ಉತ್ಸಾಹದಿಂದ ಆಹಾರ ಮೇಳದ ಕಡೆಗೆ ನುಗ್ಗುತ್ತಿದ್ರು, ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ವಿವಿಧ ಜನಾಂಗದ ಜನರಿಂದ ರುಚಿ ಸಂತೆ ತುಂಬಿತ್ತು. ಆರ್ಯವೈಶ್ಯ ಜನಾಂಗದ ಸಾಂಪ್ರದಾಯಿಕ ಅಡುಗೆ ಶೈಲಿಯ ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಈ ಶೆಟ್ಟರ ಸಂತೆಗೆ ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಅಂತಾರೆ ಆಯೋಜಕರು.

ಶೆಟ್ಟರ ಸಂತೆ ಉದ್ಘಾಟಿಸಿದ ಶಾಸಕ ಚನ್ನಬಸಪ್ಪ:

ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಶೆಟ್ಟರ ಸಂತೆಯ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವ್ಯಾಪಾರಿ ಧರ್ಮ ನಿರ್ವಹಣೆ ಮಾಡುತ್ತಾ ಇಡೀ ಸಮಾಜದ ಹಿತ ಆರ್ಯವೈಶ್ಯ ಸಮಾಜ ಕಾಪಾಡಿಕೊಂಡು ಬಂದಿದೆ. ಹೊಸತನ ಯೋಚಿಸುತ್ತಾ, ಸಮಾಜಮುಖಿ, ಸರ್ವ ಸ್ಪರ್ಶವಾಗಿ ಕೆಲಸ ಮಾಡುವ ಸಮಾಜ ಇದಾಗಿದೆ. ನಮ್ಮತನ ಉಳಿಸಿಕೊಂಡು‌ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಸಕಾಲಿಕವಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್ ಮಾತನಾಡಿ, ನೂರು ವರ್ಷ ಹಿಂದಿನ ಕಲ್ಪನೆ ಇದಾಗಿದೆ. ದೇವಸ್ಥಾನ ಕಟ್ಟಬೇಕು. ಸಂಘ ಮಾಡಬೇಕೆಂಬುದು. ನಾವೀಗ ನೂರು ವರ್ಷದ ಕಾರ್ಯಕ್ರಮ ಮಾಡುತ್ತಿರುವ ನಾವೇ ಭಾಗ್ಯಶಾಲಿಗಳು, ಈ ವರ್ಷ ಶೆಟ್ಟರ ಸಂತೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡದಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಆರ್ಯವೈಶ್ಯ ಮಹಾಜನ ಸಮಿತಿ ಛೇರ್ಮನ್‌ ಪ್ರತಿಭಾ ಅರಣ್‌, ಪ್ರಮುಖರಾದ ಅಶ್ವತ್ಥ ನಾರಾಯಣ, ವಾಗೇಶ್, ವಿದ್ಯಾ ಸುದರ್ಶನ್‌, ಎಂ.ಜೆ.ಮಂಜುನಾಥ್‌, ನರೇಶ್‌, ನಾಗರಾಜ್‌ ಮತ್ತಿತರರಿದ್ದರು.