ಸಾರಾಂಶ
ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ೨೬ ಅಭ್ಯರ್ಥಿಗಳ ಪೈಕಿ ೧೯ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರವಾಗಿದ್ದು, ಮಾಜಿ ಸಂಸದ ಮಂಜುನಾಥ ಕುನ್ನೂರ ಸೇರಿ ೭ ನಾಮಪತ್ರ ತಿರಸ್ಕೃತವಾಗಿದೆ.ಸೋಮವಾರ ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, ೨೬ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ ೪೬ ನಾಮಪತ್ರಗಳ ಪೈಕಿ ೭ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. ೧೯ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿವೆ. ಅ. ೩೦ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.೧೯ ನಾಮಪತ್ರ ಅಂಗೀಕಾರ:ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದಖಾನ ಪಠಾಣ, ಸೋಸಿಯಾಲಿಸ್ಟ್ ಪಾರ್ಟಿ (ಇಂಡಿಯಾ) ಅಭ್ಯರ್ಥಿ ಖಾಜಾಮೊದ್ದೀನ್ ಗುಡಗೇರಿ, ಹಿಂದೂಸ್ತಾನ ಜನತಾ ಪಕ್ಷದ ಅಭ್ಯರ್ಥಿ ತಳವಾರ ಶಿವಕುಮಾರ, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ, ಟಿಪ್ಪು ಸುಲ್ತಾನ ಪಾರ್ಟಿ ಅಭ್ಯರ್ಥಿ ಶೌಖತ ಅಲಿ ಬಂಕಾಪುರ, ಪಕ್ಷೇತರ ಅಭ್ಯರ್ಥಿಗಳಾದ ಡಾ.ಜಿ.ಎಚ್. ಇಮ್ರಾಪುರ, ಗುರುಸಿದ್ದಗೌಡ್ರ, ಜಿತೇಂದ್ರ ಕನವಳ್ಳಿ, ನಬಿಸಾಬ್ ಅಲ್ಲಿಸಾಬ್ ಮೆಳ್ಳೆಗಟ್ಟಿ, ಮಕ್ತುಮಸಾಬ ಜಾಫರ್‌ಸಾಬ್ ಮುಲ್ಲಾ, ರಾಜು ಅನಂತಸಾ ನಾಯಕವಾಡಿ, ವೀರಯ್ಯ ಓದಿಸುವಮಠ, ಶಿದ್ದಪ್ಪ ಹೊಸಳ್ಳಿ, ಶಿವಪುತ್ರ ಶಾಮರಾವ್ ಪಾಟೀಲ್, ಶಂಕ್ರಪ್ಪ ಹುಲಸೋಗಿ, ಶ್ರೀಕಾಂತಗೌಡ ಪೊಲೀಸಗೌಡ್ರ, ಸಾತಪ್ಪ ನೀಲಪ್ಪ ದೇಸಾಯಿ ಹಾಗೂ ಸೈಯದ ಅಜ್ಜಂಪೀರ್ ಖಾದ್ರಿ ಅವರ ನಾಮಪತ್ರಗಳು ಅಂಗೀಕರಿಸಲಾಗಿದೆ.೭ ನಾಮಪತ್ರ ತಿರಸ್ಕೃತ: ಉತ್ತಮ ಪ್ರಜಾಕೀಯ ಪಕ್ಷದ ಸಚಿನಕುಮಾರ ಕರ್ಜೆಕಣ್ಣನವರ, ಪಕ್ಷೇತರ ಅಭ್ಯರ್ಥಿಗಳಾದ ಶಾಮಾಚಾರಿ ಕಮ್ಮಾರ, ಉಮೇಶ ದೈವಜ್ಞ, ಜಿ.ಅಂಜನ್‌ಕುಮಾರ್, ಮಾಜಿ ಸಂಸದ ಮಂಜುನಾಥ ಕುನ್ನೂರ, ಲಾಲಸಾಬ ನದಾಫ್, ಅಂಬ್ರೋಸ್ ಮೆಲ್ಲೊ ಅವರ ನಾಮಪತ್ರ ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.