ಶಿಗ್ಗಾಂವಿ ಪುರಸಭೆ-₹2677 ಲಕ್ಷ ಆದಾಯ ನಿರೀಕ್ಷೆ

| Published : Mar 30 2025, 03:05 AM IST

ಶಿಗ್ಗಾಂವಿ ಪುರಸಭೆ-₹2677 ಲಕ್ಷ ಆದಾಯ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ಪಟ್ಟಣದ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅವರು ೨೦೨೫-೨೬ನೇ ಸಾಲಿನ ಬಜೆಟ್‌ ಮಂಡಿಸಿದರು. ₹೨೬೭೭.೨೫ ಲಕ್ಷಗಳ ಆದಾಯ ನಿರೀಕ್ಷಿಸಿ, ₹೨೬೫೪.೭೫ ಲಕ್ಷ ವೆಚ್ಚವನ್ನು ಅಂದಾಜಿಸಿ ₹೨೨.೫೦ ಲಕ್ಷಗಳ ಉಳಿತಾಯ ಬಜೆಟ್‌ನ್ನು ಪುರಸಭೆಯಲ್ಲಿ ಮಂಡಿಸಿದರು.

ಶಿಗ್ಗಾಂವಿ: ಪಟ್ಟಣದ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅವರು ೨೦೨೫-೨೬ನೇ ಸಾಲಿನ ಬಜೆಟ್‌ ಮಂಡಿಸಿದರು.

₹೨೬೭೭.೨೫ ಲಕ್ಷಗಳ ಆದಾಯ ನಿರೀಕ್ಷಿಸಿ, ₹೨೬೫೪.೭೫ ಲಕ್ಷ ವೆಚ್ಚವನ್ನು ಅಂದಾಜಿಸಿ ₹೨೨.೫೦ ಲಕ್ಷಗಳ ಉಳಿತಾಯ ಬಜೆಟ್‌ನ್ನು ಪುರಸಭೆಯಲ್ಲಿ ಮಂಡಿಸಿದರು.

ರಾಜಸ್ವ ಖಾತೆಯಲ್ಲಿ ₹೧೦೫೩.೩೫ ಲಕ್ಷಗಳನ್ನು, ಬಂಡವಾಳ ಖಾತೆಯಲ್ಲಿ ₹೧೩೦೩ ಹಾಗೂ ಅಸಾಧಾರಣ ಖಾತೆಯಲ್ಲಿ ₹೩೨೧.೯೦ ಲಕ್ಷಗಳೊಂದಿಗೆ ₹೨೬೭೭.೨೫ ಲಕ್ಷಗಳ ಸ್ವೀಕೃತಿ ನಿರೀಕ್ಷಿಸಲಾಗಿದೆ. ಅದೇ ರೀತಿ ರಾಜಸ್ವ ಖಾತೆಯಲ್ಲಿ ೯೨೪.೬೫ ಲಕ್ಷ, ವೆಚ್ಚ ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ ₹೧೪೦೮.೨೦ ಲಕ್ಷಗಳನ್ನು ವೆಚ್ಚಕ್ಕಾಗಿ ಮೀಸಲಿರಿಸಿ, ಅಸಾಧಾರಣ ಖಾತೆಯಲ್ಲಿ ₹೩೨೧.೯೦ ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ ಎಂದರು.

ರಾಜಸ್ವ ಆದಾಯ ಮತ್ತು ಬಂಡವಾಳ ಆದಾಯಗಳಲ್ಲಿ ಮುಖ್ಯವಾಗಿ ಸರ್ಕಾರದಿಂದ ಮುಕ್ತ ನಿಧಿ ಅನುದಾನ ₹೧೦೦ ಲಕ್ಷ, ೧೫ನೇ ಹಣಕಾಸು ಯೋಜನೆಯಲ್ಲಿ ₹೨೫೦ ಲಕ್ಷ ಅನುದಾನ, ವಿಶೇಷ ಅನುದಾನ ₹೧೦೦೦ ಲಕ್ಷ, ವೇತನ ಅನುದಾನ ₹೩೧೦ ಲಕ್ಷ, ವಿದ್ಯುತ್ ಶಕ್ತಿ ಅನುದಾನದಿಂದ ₹೨೫೦ ಲಕ್ಷ ಹಾಗೂ ನೀರು ಸರಬರಾಜು ವ್ಯವಸ್ಥೆಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ₹೧೦ ಲಕ್ಷಗಳನ್ನು ನಿರೀಕ್ಷಿಸಲಾಗಿದೆ.

ಪಟ್ಟಣದ ರಸ್ತೆಗಳ ನಿರ್ವಹಣೆ ಸೇರಿದಂತೆ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ₹೧೦೦ ಲಕ್ಷ, ಹೊಸ ರಸ್ತೆ ನಿರ್ಮಾಣಕ್ಕಾಗಿ ₹೨೫೦ ಲಕ್ಷ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹೨೪೦ ಲಕ್ಷ, ಹೊಸ ಚರಂಡಿ ನಿರ್ಮಾಣಕ್ಕಾಗಿ ₹೧೮೦ ಲಕ್ಷ, ಸಿಬ್ಬಂದಿ ವರ್ಗದ ವೇತನ ಹಾಗೂ ಕಲ್ಯಾಣ ವೆಚ್ಚಕ್ಕಾಗಿ ₹೩೧೦ ಲಕ್ಷ, ಪೌರ ಕಾರ್ಮಿಕರ ಉಪಾಹಾರದ ವೆಚ್ಚ ₹೭.೧೦ ಲಕ್ಷ, ಪ್ರಿಂಟಿಂಗ್, ಸ್ಟೇಶನರಿಗಾಗಿ ₹೧೮ ಲಕ್ಷ, ಆಡಳಿತ ಮಂಡಳಿ ಗೌರವಧನ ₹೫.೫೦ ಲಕ್ಷ, ಸಿಬ್ಬಂದಿಯ ಅಧ್ಯಯನ ಪ್ರವಾಸಕ್ಕಾಗಿ ₹೧೫ ಲಕ್ಷ, ವಾಹನಗಳ ದುರಸ್ತಿಗಾಗಿ ₹೧೨.೫೫ ಲಕ್ಷ, ವಾಹನಗಳ ಇಂಧನಕ್ಕಾಗಿ ಆಸ್ತಿ ತೆರಿಗೆ ಆದಾಯದಿಂದ ₹೧೨೫ ಲಕ್ಷ, ಅಭಿವೃದ್ಧಿ ಮತ್ತು ಕಟ್ಟಡದ ಅನುಮತಿ ಶುಲ್ಕದಿಂದ ₹೪೫ ಲಕ್ಷ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ ₹೧೮ ಲಕ್ಷ, ಅಂಗಡಿಗಳ ಲೈಸೆನ್ಸ್ ₹೮ ಲಕ್ಷ, ಮಾರುಕಟ್ಟೆ ಶುಲ್ಕದಿಂದ ₹೧೫ ಲಕ್ಷ, ಘನ ತ್ಯಾಜ್ಯ ನಿರ್ವಹಣೆ ಶುಲ್ಕದಿಂದ ₹೧೨ ಲಕ್ಷ, ನೀರು ಸರಬರಾಜು ₹೭೦ ಲಕ್ಷ, ಉತಾರ, ಖಾತಾ ಬದಲಾವಣೆ ಇತ್ಯಾದಿಗಳಿಂದ ₹೨೪.೫೦ ಲಕ್ಷಗಳ ಆದಾಯ ನಿರೀಕ್ಷಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷರು ತಿಳಿಸಿದರು.

₹೨೦ ಲಕ್ಷ, ಕಾನೂನು ವೆಚ್ಚ ₹೨.೮೫ ಲಕ್ಷ, ಸಮಲೋಚನ ₹೫ ಲಕ್ಷ, ಜಾಹೀರಾತು ಹಾಗೂ ಪ್ರಚಾರಕ್ಕಾಗಿ ₹೧೦ ಲಕ್ಷ, ಸಂಪರ್ಕ ವೆಚ್ಚಕ್ಕಾಗಿ ₹೫.೫೦ ಲಕ್ಷ, ಹೊರಗುತ್ತಿಗೆ ಕಾರ್ಮಿಕರ ವೇತನ ₹೬೫ ಲಕ್ಷ ಕಾಯ್ದಿರಿಸಲಾಗಿದೆ.

ಪಟ್ಟಣದ ಬೀದಿ ದೀಪ ನಿರ್ವಹಣೆ ಮತ್ತು ಹೊಸ ಬಡಾವಣೆಗಳಿಗೆ ಬೀದಿ ದೀಪದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ₹೧೫೦ ಲಕ್ಷ, ಘನತ್ಯಾಜ್ಯ ಘನತ್ಯಾಜ್ಯ ನಿರ್ವ ನಿರ್ವಹಣೆ ₹೧೦೦ ಲಕ್ಷ, ಪಟ್ಟಣದಲ್ಲಿ ನೀರು ಸರಬರಾಜು ವಿತರಣಾ ವ್ಯವಸ್ಥೆ ವಿಸ್ತರಿಸಲು ₹೧೬೦ ಲಕ್ಷ, ಬೀದಿದೀಪಗಳ ವಿದ್ಯುತ್ ಶುಲ್ಕ ಪಾವತಿಸಲು ₹೨೫೦ ಲಕ್ಷ, ಪಟ್ಟಣದ ಸೌಂದರ್ಯ ಹೆಚ್ಚಿಸುವ ವಿವಿಧ ಕಾರ್ಯಕ್ರಮಕ್ಕಾಗಿ ₹೬.೫೫ ಲಕ್ಷ, ಕೆರೆಗಳ ಅಭಿವೃದ್ಧಿಗಾಗಿ ₹೧೪೦ ಲಕ್ಷ ವೆಚ್ಚ ಹೊಂದಲಾಗಿದೆ.

ಹಿಂದುಳಿದ ವರ್ಗದ ಹಾಗೂ ವಿಶೇಷಚೇತನರ ಆರ್ಥಿಕ ಸ್ವಾವಲಂಬನೆ ಹಾಗೂ ಅಭಿವೃದ್ಧಿಗಾಗಿ ₹೬.೧೩ ಲಕ್ಷ ವ್ಯಯಿಸುವ ಗುರಿ ಹೊಂದಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್ ಆರ್., ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ ನಡೂರ, ಸುಭಾಸ ಚವ್ಹಾಣ, ಶ್ರೀಕಾಂತ ಬುಳ್ಳಕ್ಕನವರ, ದಯಾನಂದ ಅಕ್ಕಿ, ಪರಶುರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ, ಗೌಸಖಾನ ಮುನಸಿ, ಜಾಫರಖಾನ ಪಠಾಣ, ರೂಪಾ ಬನ್ನಿಕೊಪ್ಪ, ಶೇಖವ್ವ ವಡ್ಡರ, ವಸಂತಾ ಬಾಗೂರ, ಸಂಗೀತಾ ವಾಲ್ಮೀಕಿ, ಸುಲೇಮಾನಬಾನು ತರ್ಲಘಟ್ಟ, ಮುಸ್ತಾಕ ಅಹ್ಮದ್‌ ತಹಶೀಲ್ದಾರ ಇತರರಿದ್ದರು.