ಸಾರಾಂಶ
ಜಿಲ್ಲೆ ಹಾಗೂ ತಾಲೂಕಿನ ಕೀರ್ತಿ ಹೆಚ್ಚಿಸಿರುವ ಹೆಮ್ಮೆಯ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ತರಬೇತುದಾರ ಮಿಥುನ್ ಡಿ.ಬಿ. ಹಾಗೂ ಜಿಲ್ಲಾ ಜೂಡೋ ಸಂಸ್ಥೆ ಅಧ್ಯಕ್ಷ ಲಿಂಗರಾಜ್ ಮತ್ತು ಕಾರ್ಯದರ್ಶಿ ನಾಗರಾಜ್ ಪುಷ್ಪಾಶ್ರಮದ ಫಾದರ್ ಆಂತೋನಿ ಪೀಟರ್ ಅಭಿನಂದಿಸಿದ್ದಾರೆ.
ಶಿಕಾರಿಪುರ: ಕರ್ನಾಟಕ ಜೂಡೋ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಜೆ.ಪಿ. ನಗರದಲ್ಲಿ ನಡೆದ 41ನೇ ಕರ್ನಾಟಕ ಮಿನಿ ಮತ್ತು ಸಬ್ ಜೂನಿಯರ್ ಜೂಡೋ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಶಿಕಾರಿಪುರದ ಏಕಲವ್ಯ ಜೂಡೋ ಕ್ಲಬ್ ವಿದ್ಯಾರ್ಥಿ ಗಣೇಶ, ಕೀರ್ತನ್, ವೈಷ್ಣವಿ ಚಿನ್ನದ ಪದಕ ಹಾಗೂ ಜೈಲಕ್ಷ್ಮಿ ಬೆಳ್ಳಿ ಪದಕ ಮತ್ತು ಮೋಕ್ಷ ಕೆ., ಸಾಯಿನಾಗ್ ಎಂ. ಕಂಚಿನ ಪದಕವನ್ನು ಪಡೆದಿದ್ದಾರೆ. ಆ ಮೂಲಕ ಸಂಸ್ಥೆ ಸತತ 6ನೇ ವರ್ಷ ಚಾಂಪಿಯನ್ ಟ್ರೋಫಿ ಗಳಿಸಿದೆ.
ಜಿಲ್ಲೆ ಹಾಗೂ ತಾಲೂಕಿನ ಕೀರ್ತಿ ಹೆಚ್ಚಿಸಿರುವ ಹೆಮ್ಮೆಯ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ತರಬೇತುದಾರ ಮಿಥುನ್ ಡಿ.ಬಿ. ಹಾಗೂ ಜಿಲ್ಲಾ ಜೂಡೋ ಸಂಸ್ಥೆ ಅಧ್ಯಕ್ಷ ಲಿಂಗರಾಜ್ ಮತ್ತು ಕಾರ್ಯದರ್ಶಿ ನಾಗರಾಜ್ ಪುಷ್ಪಾಶ್ರಮದ ಫಾದರ್ ಆಂತೋನಿ ಪೀಟರ್ ಅಭಿನಂದಿಸಿದ್ದಾರೆ.- - -
-13ಕೆ.ಎಸ್.ಕೆ.ಪಿ3: