ಶಿಮಂತೂರು ಶಾಲೆ ಕ್ರೀಡಾ ಪಾರ್ಕ್‌ ಉದ್ಘಾಟನೆ

| Published : Nov 12 2025, 03:15 AM IST

ಸಾರಾಂಶ

ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನಲ್ಲಿ ಮಣಿಪಾಲ್ ಡಾಟ್ ನೆಟ್ ಪ್ರೈ. ಲಿ. ಕೊಡುಗೆಯ, ಒನ್ ಗುಡ್ ಸ್ಟೆಪ್ ಬೆಂಗಳೂರು ಕಾರ್ಯಗತಗೊಳಿಸಿದ ನೂತನ ಪುಟ್ಟ ಮಕ್ಕಳ ಕ್ರೀಡಾ ಪಾರ್ಕ್ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಮೂಲ್ಕಿಮಕ್ಕಳಿಗೆ ಆಟವೇ ಪಾಠವಾಗಿದ್ದು, ವಿದ್ಯೆ ಜೊತೆಗೆ ಕ್ರೀಡಾ ಸೌಲಭ್ಯಗಳು ಮಕ್ಕಳ ಬೌದ್ಧಿಕ, ದೈಹಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಬಹಳ ಅವಶ್ಯಕ. ಶಾಲೆಯು ಮಕ್ಕಳ ಭವಿಷ್ಯ ಕಟ್ಟುವ ನಿಲಯವಾಗಿದ್ದು, ಕ್ರೀಡಾಪಾರ್ಕ್‌ ಮೂಲಕ, ಪ್ರತಿ ಮಗುವಿಗೂ ನಗು, ಸಂತೋಷ ಮತ್ತು ಹೊಸ ಕಲಿಕೆಗಾಗಿ ಅವಕಾಶ ಒದಗುತ್ತದೆ ಎಂದು ಮಣಿಪಾಲ್ ಡಾಟ್ ನೆಟ್ ಪ್ರೈ.ಲಿ. ಮಣಿಪಾಲದ ಉಪಾಧ್ಯಕ್ಷ ಹಾಗೂ ಶಿಮಂತೂರು ಶ್ರೀ ಶಾರದಾ ಹೈಸ್ಕೂಲ್‌ನ ಹಿರಿಯ ವಿದ್ಯಾರ್ಥಿ ನಾಗರಾಜ್ ಶೆಟ್ಟಿಗಾರ್‌ ಹೇಳಿದರು.

ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನಲ್ಲಿ ಮಣಿಪಾಲ್ ಡಾಟ್ ನೆಟ್ ಪ್ರೈ. ಲಿ. ಕೊಡುಗೆಯ, ಒನ್ ಗುಡ್ ಸ್ಟೆಪ್ ಬೆಂಗಳೂರು ಕಾರ್ಯಗತಗೊಳಿಸಿದ ನೂತನ ಪುಟ್ಟ ಮಕ್ಕಳ ಕ್ರೀಡಾ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು.

ಶಿಮಂತೂರಿನ ಶ್ರೀ ಶಾರದಾ ಸೊಸೈಟಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ, ಇಂದಿನ ಮಕ್ಕಳ ಬಾಲ್ಯವನ್ನು ಬಣ್ಣಗೊಳಿಸುವುದು ನಮ್ಮ ಜವಾಬ್ದಾರಿ. ಮೊಬೈಲ್ ಮತ್ತು ಟೆಕ್ನಾಲಜಿಯ ಜಗತ್ತಿನಲ್ಲಿ ಮಕ್ಕಳು ಹೊರಾಂಗಣ ಆಟಗಳಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಇಂತಹ ಉಪಕ್ರಮಗಳು ಮಕ್ಕಳನ್ನು ಪ್ರಕೃತಿಯೊಂದಿಗೆ ಸೇರಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒನ್ ಗುಡ್ ಸ್ಟೆಪ್ ಬೆಂಗಳೂರಿನ ನಿರ್ದೇಶಕ ಭಾಸ್ಕರ್ ಸಿ.ಎನ್., ಯೋಜನಾ ನಿರ್ದೇಶಕಿ ಅಲ್ಕ ಪೈ, ಶ್ರೀ ಶಾರದಾ ಸೊಸೈಟಿಯ ಕೋಶಾಧಿಕಾರಿ ಭುವನಾಭಿರಾಮ ಉಡುಪ ಕೆ., ನಿರ್ದೇಶಕ ಸುರೇಶ್ ರಾವ್ ನೀರಳಿಕೆ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ಸುಮನ ಉಪಸ್ಥಿತರಿದ್ದರು.ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಾಚಾರ್ಯ ಜಿತೇಂದ್ರ ವಿ. ರಾವ್ ಹೆಜಮಾಡಿ ವಂದಿಸಿದರು. ಸಹ ಶಿಕ್ಷಕಿ ಅಮಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.