ಸಾರಾಂಶ
ಮುಂದಿನ ಜನವರಿ ತಿಂಗಳಲ್ಲಿ ಪ್ರಥಮ ಬಾರಿಗೆ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಶನಿವಾರ ಪರ್ಯಾಯ ಸ್ವಾಗತ ಸಮಿತಿಯ ಸಭೆ ಉಡುಪಿ ವಿದ್ಯೋದಯ ಶಾಲೆಯ ಸಭಾಭವನದಲ್ಲಿ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಮುಂದಿನ ಜನವರಿ ತಿಂಗಳಲ್ಲಿ ಪ್ರಥಮ ಬಾರಿಗೆ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಶನಿವಾರ ಪರ್ಯಾಯ ಸ್ವಾಗತ ಸಮಿತಿಯ ಸಭೆ ಉಡುಪಿ ವಿದ್ಯೋದಯ ಶಾಲೆಯ ಸಭಾಭವನದಲ್ಲಿ ನಡೆಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕ ಯಶ್‌ಪಾಲ್ ಸುವರ್ಣ ಅವರು, ಈ ಹಿಂದೆಯೂ ಶಿರೂರು ಮಠದ ಪರ್ಯಾಯೋತ್ಸವಗಳು ಅತ್ಯಂತ ವೈಶಿಷ್ಟಪೂರ್ಣವಾಗಿ ನಡೆಯುತ್ತಿದ್ದವು, ಈ ಬಾರಿಯ ಶೀರೂರು ಪರ್ಯಾಯವನ್ನು ಮನೆ - ಮನಗಳ ತಲುಪುವಂತಾಗಬೇಕು. ಪರ್ಯಾಯೋತ್ಸವವನ್ನು ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿಸಲು ಸ್ವಾಗತ ಸಮಿತಿ ಸಂಕಲ್ಪ ಮಾಡಿದೆ. ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವವನ್ನು ಅತ್ಯಂತ ವೈಭವವಾಗಿ ನೇರವೇರಿಸಲು ಸಮಸ್ತ ಹಿಂದೂ ಸಮಾಜ ಜೊತೆಗೂಡುಬೇಕು ಎಂದು ಕರೆ ನೀಡಿದರು. ಹಿರಿಯ ಹಿಂದು ಸಮಾಜದ ನಾಯಕ ಎಂ. ಬಿ. ಪುರಾಣಿಕರು ಮಾತನಾಡಿ ಶೀರೂರು ಮಠ ತಮಗೆಲ್ಲರಿಗೂ ಗುರುಮಠ. ಈ ಪರ್ಯಾಯೋತ್ಸವವನ್ನ ನಾಡ ಹಬ್ಬವಾಗಿ ಎಲ್ಲಾ ಹಿಂದೂ ಬಾಂಧವರು ಒಂದಾಗಿ ಆಚರಿಸೋಣ ಎಂದರು. ಸಭೆಯಲ್ಲಿ ಶಿರೂರು ಮಠದ ದಿವಾನರಾದ ಉದಯ ಸರಳತ್ತಾಯ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ ಕೆದ್ಲಾಯ, ಪ್ರಮುಖರಾದ ಜಯಕರ ಶೆಟ್ಟಿ ಇಂದ್ರಾಳಿ ಮುಂತಾದವರು ಮಾತನಾಡಿದರು.;Resize=(128,128))
;Resize=(128,128))