ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಬೆಂಗಳೂರಿನ ಅವಸರ್ ಎಚ್.ಆರ್. ಸರ್ವೀಸಸ್ ಅವರು ನಡೆಸಿದ ಕ್ಯಾಂಪಸ್ ಪ್ಲೇಸ್‌ಮೆಂಟ್‌ನ ಸಂದರ್ಶನದಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿ.ಸಿ.ಎ ವಿಭಾಗದ ೭೫ ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆ ಕಲ್ಪಿಸಲಾಯಿತು.ಅವಸರ್ ಎಚ್.ಆರ್. ಸರ್ವೀಸಸ್ ಇದರ ನೇಮಕಾತಿ ಕಾರ್ಯ ನಿರ್ವಾಹಕ ನಿತೇಶ್ ಮೇಟಿ ಅವರು ಲಭ್ಯವಿರುವ ಉದ್ಯೋಗ ಅವಕಾಶಗಳ ಕುರಿತು ಅರಿವು ಮೂಡಿಸಿ, ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಬದ್ಧತೆ ಹಾಗೂ ಕೌಶಲ್ಯ ಉದ್ಯೋಗದ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ, ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ತಯಾರು ಮಾಡುವ ಬೃಹತ್ ಕಂಪೆನಿಗಳಾದ ಫಾಕ್ಸ್‌ಕಾನ್, ಟಾಟಾ ವಿಸ್ಟ್ರಾನ್, ಧೂತ್ ಒಳಗೊಂಡಂತೆ ಅಮೇಜಾನ್, ಫ್ಲಿಪ್‌ಕಾರ್ಟ್‌ನಂತಹ ಅಂತರ್ಜಾಲ ಗ್ರಾಹಕ ಸೇವಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಲು ಅವಕಾಶಗಳು ಹೇರಳವಾಗಿವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಸೂಕ್ತವಾದ ಉದ್ಯೋಗ ದೊರಕಿ ತನ್ಮೂಲಕ ಜೀವನ ಕಟ್ಟಿಕೊಳ್ಳುವ ಸೌಕರ್ಯ ಇಂದಿನ ದಿನಮಾನದಲ್ಲಿ ತುಂಬಾ ಅವಶ್ಯಕ, ಇಂತಹ ಒಂದು ಸಂದರ್ಭ ಕಾಲೇಜಿನಲ್ಲಿ ತೃತೀಯ ಪದವಿ ವಿದ್ಯಾರ್ಥಿಗಳಿಗೆ ದೊರಕಿರುವುದು ಸಂತಸ ತಂದಿದೆ ಎಂದರು. ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಂಯೋಜಕರಾದ ಹೇಮಲತಾ ಶೆಟ್ಟಿ ಸ್ವಾಗತಿಸಿದರು. ರಶ್ಮಿ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))