ಸಾರಾಂಶ
ಸಾವಳಗಿ: ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಬಳಿಕ ದೇಶ-ವಿದೇಶಗಳಲ್ಲೂ ಖ್ಯಾತಿ ಗಳಿಸಿರುವ ಕರ್ನಾಟಕದ ಖ್ಯಾತ ಶಿಲ್ಪಿ ಅರುಣ ಯೋಗಿರಾಜ್ ಕೆತ್ತನೆಯ ನಂದಿ ವಿಗ್ರಹ, ಶಿವನ ಮೂರ್ತಿ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿದೆ.
ಕನ್ನಡಪ್ರಭ ವಾರ್ತೆ ಸಾವಳಗಿ
ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಬಳಿಕ ದೇಶ-ವಿದೇಶಗಳಲ್ಲೂ ಖ್ಯಾತಿ ಗಳಿಸಿರುವ ಕರ್ನಾಟಕದ ಖ್ಯಾತ ಶಿಲ್ಪಿ ಅರುಣ ಯೋಗಿರಾಜ್ ಕೆತ್ತನೆಯ ನಂದಿ ವಿಗ್ರಹ, ಶಿವನ ಮೂರ್ತಿ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿದೆ.ಸಾವಳಗಿಯಿಂದ ಕನ್ನೊಳ್ಳಿ ಮಾರ್ಗವಾಗಿ 2 ಕಿ.ಮೀ ಅಂತರದಲ್ಲಿ ದಿ.ಕೆ.ಕೆ.ಬ್ಯಾಡಗಿ ಅವರ ಕುಟುಂಬಸ್ಥರ ಕೃಷಿ ಭೂಮಿಯಲ್ಲಿ ಶಿವ, ನಂದಿಯ ಮಂಟಪ ಕಾಣಸಿಗುತ್ತದೆ. ಸುತ್ತಮುತ್ತಲ್ಲಿರುವ ಹಚ್ಚ ಹಸುರಿನ ಸಿರಿಯ ಪ್ರಕೃತಿ ಸೌಂದರ್ಯದಿಂದ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.
ವಿಜಯಪುರ ಜ್ಞಾನ ಯೋಗಾಶ್ರಮ ಪರಮ ಪೂಜ್ಯ ಸಿದ್ಧೇಶ್ವರ ಶ್ರೀಗಳ ಅಮೃತ ಹಸ್ತದಿಂದ 17-8-2018ರಂದು ಉದ್ಘಾಟನೆಗೊಂಡ 6 ಅಡಿ ಎತ್ತರ, 8 ಅಡಿ ಉದ್ದದ ಕೃಷ್ಣ ಶಿಲೆಯಲ್ಲಿನ ಸಂದರವಾದ ನಂದಿ ವಿಗ್ರಹ, ಶಿವನ ವಿಗ್ರಹ ನೋಡಲು ಆಕರ್ಷಕವಾಗಿದೆ.