ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸು ಕಂಡ ಶಿವಶರಣರು

| Published : Sep 27 2024, 01:25 AM IST

ಸಾರಾಂಶ

12ನೇ ಶತಮಾನದ ಶಿವಶರಣರು ಸಮಾಜದ ಸುಧಾರಕರಾಗಿ ಸಮಾಜವನ್ನು ತಿದ್ದುವ ಆದರ್ಶ ಕಾರ್ಯ ಮಾಡುವ ಮೂಲಕ ಅಂದಿನ ಸಮಾಜದ ಮೌಢ್ಯಗಳನ್ನು ಕಿತ್ತೊಗೆದು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಕನಸನ್ನು ಕಂಡಿದ್ದರು ಎಂದು ಸಬಲಾ ಸಂಸ್ಥೆಯ ಸಂಸ್ಥಾಪಕಿ ಡಾ.ಮಲ್ಲಮ್ಮ ಯಾಳವಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

12ನೇ ಶತಮಾನದ ಶಿವಶರಣರು ಸಮಾಜದ ಸುಧಾರಕರಾಗಿ ಸಮಾಜವನ್ನು ತಿದ್ದುವ ಆದರ್ಶ ಕಾರ್ಯ ಮಾಡುವ ಮೂಲಕ ಅಂದಿನ ಸಮಾಜದ ಮೌಢ್ಯಗಳನ್ನು ಕಿತ್ತೊಗೆದು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಕನಸನ್ನು ಕಂಡಿದ್ದರು ಎಂದು ಸಬಲಾ ಸಂಸ್ಥೆಯ ಸಂಸ್ಥಾಪಕಿ ಡಾ.ಮಲ್ಲಮ್ಮ ಯಾಳವಾರ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಸದ್ಗುರು ಭೀಮಾಶಂಕರ ಮಹಾರಾಜರು ವಿಶ್ವರಾಧ್ಯ ಮಠದ ದತ್ತಿ ದತ್ತಿದಾನಿಗಳು ಪರಮಪೂಜ್ಯ ತಪೋರತ್ನಂ ಮಹಾಲಿಂಗೇಶ್ವರ ಅಪ್ಪನವರು ವಿಶ್ವರಾಧ್ಯಮಠ ಬೋರಗಿ ಪುರದಾಳ, ವಿಷಯ ಅನುಭವ ಸಾಹಿತ್ಯದ ಕುರಿತು ಹಾಗೂ ದಿ.ಗೌರವ್ವ ಗುರುಬಸಪ್ಪ ಮೋಟಗಿ ಹಾಗೂ ದಿ.ಗುರುಬಸಪ್ಪ ಭೋಜಪ್ಪ ಮೋಟಗಿ ದತ್ತಿ ದತ್ತಿದಾನಿಗಳು ಸಿದ್ರಾಮಪ್ಪ ಗುರುಬಸಪ್ಪ ಮೋಟಗಿ, ವಿಷಯ: ಶರಣ ಸಂಸ್ಕೃತಿಯ ಕುರಿತು ಏರ್ಪಡಿಸಿದ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮ ಸಮಾಜದ ನಿರ್ಮಾಣವೇ ಶರಣರ ಮೂಲ ಆಶಯವಾಗಿತ್ತು ಎಂದು ಅಭಿಪ್ರಾಯಪಟ್ಟರು.ಡಾ.ಸುರೇಶ ಹರನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಮೂಲಕ ದತ್ತಿ ದಾನಿಗಳಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅನುಭವ ಜನ್ಯ, ಚಿಂತನಾತ್ಮಕ ಉಪನ್ಯಾಸಗಳನ್ನು ಏರ್ಪಡಿಸಿ ಸಾಹಿತ್ಯಾಸಕ್ತರ ಮನಸೂರೆಗೊಳ್ಳುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದರು.

ಅನುಭಾವ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದ ಕವಿಯತ್ರಿ ಅಂಬಿಕಾ ಕರಕಪ್ಪಗೋಳ ಮಾತನಾಡಿ, ಅರಿವಿನಿಂದ ಮತ್ತು ಆಚರಣೆಗಳಿಂದ ಶರಣರು ತಮ್ಮ ಅನುಭಾವ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಅರಿತರೆ ಶರಣ ಮರೆತರೆ ಮಾನವ ಎಂಬುದನ್ನು ತಿಳಿಸಿಕೊಟ್ಟು ಹೋಗಿದ್ದಾರೆ. ಇಂದು ನಾವೆಲ್ಲರೂ ಅದನ್ನು ಅರ್ಥೈಸಿಕೊಂಡು ಹೋಗುವುದು ಅನಿವಾರ್ಯ ಎಂದರು.

ಶರಣ ಸಂಸ್ಕೃತಿಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಶಾಂತಾ ಪಾಟೀಲ ಮಾತನಾಡಿ, ಸಾಮಾಜಿಕ ಸಮಾನತೆ, ಮರ್ತ್ಯ ಲೋಕದ ಹಿರಿಮೆ, ಆತ್ಮ ವಿಮರ್ಶೆ, ನಡೆ- ನುಡಿಗಳಲ್ಲಿ ಒಂದಾಗುವ ಮನೋಭಾವ, ವೈಚಾರಿಕತೆ, ಸವ೯ರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬುವುದನ್ನು ಶರಣ ಸಂಸ್ಕೃತಿ ಪ್ರತಿಪಾದಿಸುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸಿದ್ರಾಮಪ್ಪ ಮೋಟಗಿ, ಬಸವರಾಜ ನವಲಿ, ಅಪ್ಪಸಾಹೇಬ್‌ ಮಡಗೊಂಡ, ಲಾಡ್ಲೇಮಶಾಕ ನಾಯ್ಕೋಡಿ, ರವಿ ಬೈಚಬಾಳ ಉಪಸ್ಥಿತರಿದ್ದು ಮಾತನಾಡಿದರು.ಪ್ರಾರ್ಥನೆಯನ್ನು ಶಶಿಕಲಾ ನಾಯ್ಕೋಡಿ ನೆರವೇರಿಸಿದರು. ಸ್ವಾಗತ ಮತ್ತು ಶರಣು ಸಮರ್ಪಣೆಯನ್ನು ಪರವೀನ ಶೇಖ ನಡೆಸಿಕೊಟ್ಟರು. ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಕೀನಾ ನದಾಫ್ ಕಾರ್ಯಕ್ರಮವನ್ನು ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸನ್ಮಾನಿತರನ್ನು ಪರಿಚಯಿಸುವ ಮೂಲಕ ಪರಿಷತ್ತಿನ ಪರವಾಗಿ ಡಾ.ಮಾಧವ ಗುಡಿ ಗೌರವ ಪುರಸ್ಕಾರ ಸಮಾರಂಭ ನೆರವೇರಿಸಿಕೊಟ್ಟರು. ಶಿಕ್ಷಕರಾದ ಮೆಹತಾಬ್‌ ಕಾಗವಾಡ ತತ್ವಪದವನ್ನು ಹಾಡುವ ಮೂಲಕ ರಂಜಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಸಲ್ಲಿಸಿದ ಅಶೋಕ ಗಾಯಕವಾಡ, ಪರಮಾನಂದ ಚಾಂದಕವಟೆ, ನೀಲಾಂಬಿಕಾ ಆಲೂರ, ಸಂಗನಬಸವ ಬುರ್ಲಿ, ಡಾ.ಅನಿಲ ಕುಮಾರ ಇರಾಜ, ಜಗದೀಶ ಸಾಲಳ್ಳಿ, ಅಹಮ್ಮದ ವಾಲಿಕಾರ, ಡಾ.ಮಹಿಬೂಬ್‌ ಮಾಲಬಾವಡಿ ಮುಂತಾದ ಗಣ್ಯರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವಿಸಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಸಂಗಮೇಶ ಮೇತ್ರಿ, ಎಸ್.ಎಂ.ಕಣಬೂರ, ಬಸವರಾಜ ಅಜೂರ, ಅಶೋಕ ಕೋಳಾರಿ, ರಾಜೇಸಾಬ ಶಿವನಗುತ್ತಿ, ಶಿಲ್ಪಾ ಗಾಣಿಗೇರ, ಅಜೀಜ ಡವಳಗಿ, ಕಮಲಾ ಮುರಾಳ, ಅಹಮ್ಮದ್‌ ವಾಲಿಕಾರ, ಅರ್ಜುನ ಶಿರೂರ, ಜಿ.ಎಸ್.ಬಳ್ಳೂರ, ಟಿ.ಆರ್‌.ಹಾವಿನಾಳ, ಕೆ.ಎಸ್.ಹಣಮಾಣಿ, ಜೆ.ಎಸ್.ಮೋಟಗಿ, ಸುರೇಶ ಕೋರಳ್ಳಿ, ವಿ.ಎಸ್.ಖಾಡೆ, ಬಸನಗೌಡ ಬಿರಾದಾರ, ಸುಖದೇವಿ ಅಲಬಾಳಮಠ, ಶಾಂತಪ್ಪ ರಾಣಾಗೋಳ, ಅಲಿಸಾಬ್‌ ಖಡಕೆ, ಶ್ರೀಕಾಂತ ನಾಡಗೌಡ, ಜ್ಯೋತಿ ದೇಸಾಯಿ, ಭಾಗರಥಿ ಸಿಂದೆ, ದೇವಕಾಂತ ಬಿಜ್ಜರಗಿ, ಭೀಮಣ್ಣ ನಾಯ್ಕರ, ಎಂ.ಎಂ.ವಾಲೀಕಾರ, ಬಸವರಾಜ ಕಂಕಣವಾಡಿ, ಡಾ.ಕರಿಯಪ್ಪ, ಎಸ್.ಎಂ.ಡಾಂಗೆ, ಸ್ನೇಹಾ ಸಾರಂಗಮಠ ಉಪಸ್ಥಿತರಿದ್ದರು.