ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಛತ್ರಪತಿ ಶಿವಾಜಿ ಮಹಾರಾಜರು ಧರ್ಮ ರಕ್ಷಣೆ ಜೊತೆಗೆ ರಾಷ್ಟ್ರಪ್ರೇಮ ಮೈಗೂಡಿಸಿಕೊಂಡು ಹಿಂದವೀ ಸಾಮ್ರಾಜ್ಯ ಸ್ಥಾಪಿಸಿ ಸಾಮಾಜಿಕ ಹಾಗೂ ನ್ಯಾಯ ಸಮ್ಮತ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಪಟ್ಟಣದಲ್ಲಿ ತಾಲೂಕು ಆಡಳಿತ ಮತ್ತು ಮರಾಠ ಸಮಾಜ ಬಾಂಧವರಿಂದ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರ ಹಾಗೂ ದೇಶದ ಜನರ ಹಿತವನ್ನು ಕಾಪಾಡುವುದರ ಜೊತೆಗೆ ಜನರ ರಕ್ಷಣೆ ಜವಾಬ್ದಾರಿ ವಹಿಸಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ವರ್ತುಳದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು ಎಂದರು.ತಾಲೂಕು ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಶಿಂಧೆ ಮಾತನಾಡಿ, ಪ್ರತಿಯೊಬ್ಬರಿಗೂ ಸಾಮಾಜಿಕ ಬದುಕು ಕಲ್ಪಿಸಿಕೊಟ್ಟು ಧರ್ಮ ರಕ್ಷಣೆ ಹೋರಾಟದ ಮಹಾನ ಪುರುಷರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು, ದೇಶ ಮತ್ತು ಧರ್ಮಕ್ಕಾಗಿ ಇವರು ನೀಡಿದ ಕೊಡುಗೆ ಇಂದು ದೇಶ ಭಕ್ತರಿಗೆ ಚೈತನ್ಯ ಮೂಡಿಸಿದೆ ಎಂದರು.ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಪಡಿಸುವಂತ ಕಾರ್ಯಗಳು ಸಮಾಜದಲ್ಲಿ ನಡೆಯಬೇಕಿವೆ. ದೇಶ ಮತ್ತು ಧರ್ಮದ ಬಗ್ಗೆ ಹೋರಾಟ ಮಾಡಿದ ರಾಷ್ಟ್ರ ಪುರುಷ ಶಿವಾಜಿ ಮಹಾರಾಜರ ಸಾಧನೆಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿವೆ ಎಂದರು.ಮುಂಜಾನೆ ಉದಯಗಿರಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಜ ಬಾಂಧವರು ಮತ್ತು ಸುಮಂಗಲೆಯರಿಂದ ಬಾಲ ಶಿವಾಜಿಯನ್ನು ತೊಟ್ಟಿಲಲ್ಲಿ ಹಾಕಿ ಪೂಜೆ ಸಲ್ಲಿಸಲಾಯಿತು. ನಂತರ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಸಮಸ್ತ ಸಮಾಜ ಬಾಂಧವರು ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ನಡೆದ ಕಾರ್ಯಕ್ರಮದಲ್ಲಿ ಸಕಲರು ಪಾಲ್ಗೊಂಡು ಜಯಂತ್ಯುತ್ಸವಕ್ಕೆ ಮೆರಗು ತಂದರು. ಒಬಿ ಬಾಯ್ಸ್ ಯುವಕರಿಂದ ಕೇಸರಿ ಬಾವುಟಗಳೊಂದಿಗೆ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಸದಸ್ಯ ಅರ್ಜುನ ಅಮ್ಮೋಜಿ, ಗ್ರೇಡ-೨ ತಹಸೀಲ್ದಾರ್ ಎಂ.ಎನ್.ಮಠದ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ಮುರಗೋಡ, ಆರ್.ಆರ್.ಕುಲಕರ್ಣಿ, ಶ್ರೀ ರಾಮಲಿಂಗೇಶ್ವರ ಅರ್ಬನ ಸೊಸೈಟಿ ಅಧ್ಯಕ್ಷ ಪುಂಡಲೀಕ ಭೀ. ಬಾಳೋಜಿ, ಲಿಂಗಾಯತ ಪಂಚಮಸಾಲಿ ಜಾಗೃತಿ ವೇದಿಕೆ ಅಧ್ಯಕ್ಷ ಅಲ್ಲಮಪ್ರಭು ಪ್ರಭುನವರ, ಉಪತಹಸೀಲ್ದಾರ ಶಶಿಕುಮಾರ ವನಕಿ, ವಿ.ಜೆ.ಪವಾರ, ತಾನಾಜಿರಾವ್ ಮುರಂಕರ, ತಾನಾಜಿ ಶಿಂಧೆ, ಬಸವರಾಜ ಕಪ್ಪಣ್ಣವರ, ರವಿ ಗಿರಿಜನ್ನವರ, ಮಂಜು ನಿಕ್ಕಮ, ಲಕ್ಷ್ಮಣ ಕಿಟದಾಳ, ಅಣ್ಣಪ್ಪ ಪವಾರ, ಸುರೇಶ ಬಾಳೋಜಿ, ಮಲ್ಲೇಶ ರಾಜನಾಳ, ಕೇದಾರ ಮೊಕಾಶಿ, ಸಿದ್ದಪ್ಪ ರಾಹುತ, ಮಂಜುನಾಥ ಡಬಕೆ, ರಾವ್‌ಸಾಹೇಬ ಜಾಮದಾರ, ಮಾರುತಿ ಜಾಧವ, ಡಾ.ಹೇಮಂತ ಭಸ್ಮೆ, ಎಫ್.ಎ.ಕರೀಕಟ್ಟಿ, ಎಫ್.ವೈ.ಗಾಜಿ, ಬಸವರಾಜ ಅರಮನಿ, ಸುನೀಲ ತಾರಿಹಾಳ, ಮಂಜು ಪಾಚಂಗಿ, ಅಂದುಸಿಂಗ್ ರಜಪುತ, ಶಿವಾನಂದ ಹೂಲಿಕಟ್ಟಿ, ರಾಜಶೇಖರ ನಿಡವಣಿ, ಅಶೋಕ ಕದಮ, ವಿಠ್ಠಲ ಜಾಮದಾರ, ಅಶೋಕ ಶಿಂಧೆ, ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಮರಾಠ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಶಿವಾನಂದ ತಾರೀಹಾಳ ನಿರೂಪಿಸಿ ವಂದಿಸಿದರು.ರಾಷ್ಟ್ರ ಹಾಗೂ ದೇಶದ ಜನರ ಹಿತವನ್ನು ಕಾಪಾಡುವುದರ ಜೊತೆಗೆ ಜನರ ರಕ್ಷಣೆ ಜವಾಬ್ದಾರಿ ವಹಿಸಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ವರ್ತುಳದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು.
-ವಿಶ್ವಾಸ ವೈದ್ಯ, ಶಾಸಕರು.