ಸಾರಾಂಶ
ಪಟ್ಟಣದ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ಕೋಸ್) ಸಂಸ್ಥೆ ನೂತನ ಅಧ್ಯಕ್ಷರಾಗಿ ಎಚ್.ಎಸ್. ಶಿವಕುಮಾರ್ ಬುಧವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು.
ಚನ್ನಗಿರಿ: ಪಟ್ಟಣದ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ಕೋಸ್) ಸಂಸ್ಥೆ ನೂತನ ಅಧ್ಯಕ್ಷರಾಗಿ ಎಚ್.ಎಸ್. ಶಿವಕುಮಾರ್ ಬುಧವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು.
ಸಂಘದಲ್ಲಿ ಒಟ್ಟು 15 ನಿರ್ದೇಶಕರಿದ್ದಾರೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎಚ್.ಎಸ್. ಶಿವಕುಮಾರ್ ಅವರೊಬ್ಬರಿಂದ ಮಾತ್ರವೇ ನಾಮಪತ್ರ ಸಲ್ಲಿಕೆಯಾಯಿತು. ಆದ್ದರಿಂದ ಎಚ್.ಎಸ್. ಶಿವಕುಮಾರ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಮಂಜುಳಾ ಘೋಷಣೆ ಮಾಡಿದರು.ಸಂಸ್ಥೆಯ ಚುನಾವಣೆ ಮತದಾನವು ಫೆ.9ರಂದು ನಡೆದಿತ್ತು. ಅದೇ ದಿನ ಸಂಜೆ ಮತಗಳ ಎಣಿಕೆ ಮಾಡಲಾಗಿತ್ತು. ಆದರೆ, ನ್ಯಾಯಾಲಯ ಅದೇಶದಂತೆ ಮಾ.10ರಂದು ಫಲಿತಾಂಶ ಘೋಷಣೆ ಮಾಡಿ, ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಮಾ.19ರಂದು ನಡೆಸಲಾಯಿತು ಎಂದು ಚುನಾವಣಾಧಿಕಾರಿ ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ನೂತನ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಸೇರಿದಂತೆ ಆಯ್ಕೆಯಾದ ಎಲ್ಲ ನಿರ್ದೇಶಕರಿಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.ನಿರ್ದೇಶಕರಾದ ವಿಜಯಕುಮಾರ್, ಟಿ.ವಿ.ರಾಜು, ಎಂ.ಮಂಜುನಾಥ್, ಎಚ್.ಎಸ್. ಮಂಜುನಾಥ್, ಬಿ.ಎಸ್.ಬಸವರಾಜ್, ಕೆ.ಎನ್. ಪ್ರಭುಲಿಂಗಪ್ಪ, ಬಿ.ಚನ್ನಬಸಪ್ಪ, ಎಂ.ಎನ್. ಗಂಗಾಧರಪ್ಪ, ಕೆ.ಜಿ. ಓಂಕಾರಮೂರ್ತಿ, ಎಂ.ಈ. ಮೀನಾಕ್ಷಿ, ರಘು, ಎನ್.ಲೋಕೇಶ್ವರ್, ಎಲ್.ವಿ. ಶೋಭಾ, ಅಭಿಮಾನಿಗಳು, ಅಡಕೆ ಬೆಳೆಗಾರರು, ಸಂಸ್ಥೆ ಸಿಬ್ಬಂದಿ ಹಾಜರಿದ್ದರು.
- - - -19ಕೆಸಿಎನ್‌ಜಿ1.ಜೆಪಿಜಿ: