ರಾಸುಗಳಿಗೆ ವಿಮೆ ಮಾಡಿಸುವ ಯೋಜನೆಗೆ ಶಿವಕುಮಾರ್ ಚಾಲನೆ

| Published : Sep 06 2025, 01:00 AM IST

ಸಾರಾಂಶ

ತಾಲೂಕಿನಲ್ಲಿ ಸುಮಾರು13 ಸಾವಿರಕ್ಕೂ ಅಧಿಕ ರಾಸುಗಳಿವೆ, ಆದರೆ, 9- 10 ಸಾವಿರ ರಾಸುಗಳಿಗೆ ಮಾತ್ರ ವಿಮೆ ಮಾಡಿಸುತ್ತಿದ್ದಾರೆ. ಈ ಬಾರಿ ಶೇ.100ರಷ್ಟು ರಾಸುವಿಮೆ ಆಗಬೇಕು, ರಾಸುವಿಮೆಗೆ ಒಕ್ಕೂಟ ಶೇ.50ರಷ್ಟು ನೀಡಲಿದೆ, ಉಳಿದ ಶೇ.50ರಷ್ಟು ಹಣವನ್ನು ಉತ್ಪಾದಕರು ನೀಡಬೇಕು.

ಪಾಂಡವಪುರ: ಮನ್ಮುಲ್ ಒಕ್ಕೂಟದ ವತಿಯಿಂದ ರಾಸುಗಳಿಗೆ ವಿಮೆ ಮಾಡಿಸುವ ಯೋಜನೆಗೆ ನಿರ್ದೇಶಕ ಸಿ.ಶಿವಕುಮಾರ್ ಚಾಲನೆ ನೀಡಿದರು.

ತಾಲೂಕಿನ ಚಿನಕುರಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ರಾಸುಗಳಿಗೆ ವಿಮೆ ಯೋಜನೆಯ ಓಲೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ರಾಸುಗಳ ವಿಮೆ ಯೋಜನೆಯೂ ಸಾಕಷ್ಟು ಮಹತ್ವದ್ದಾಗಿದೆ. ವಿಮೆ ಮಾಡಿಸಿದ ರಾಸುಗಳು ಅಕಾಲಿಕ ಮರಣಕ್ಕೆ ತುತ್ತಾದರೆ ರೈತರಿಗೆ ವಿಮಾ ಪರಿಹಾರ ದೊರೆಯುತ್ತದೆ ಎಂದರು.

ವಿಮೆ ಮಾಡಿಸದ ರಾಸುಗಳು ಮರಣ ಹೊಂದಿದರೆ ಪರಿಹಾರ ದೊರೆಯುವುದಿಲ್ಲ. ಹಾಗಾಗಿ ತಾಲೂಕಿನ ಎಲ್ಲಾ ರೈತರು ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಸುಮಾರು13 ಸಾವಿರಕ್ಕೂ ಅಧಿಕ ರಾಸುಗಳಿವೆ, ಆದರೆ, 9- 10 ಸಾವಿರ ರಾಸುಗಳಿಗೆ ಮಾತ್ರ ವಿಮೆ ಮಾಡಿಸುತ್ತಿದ್ದಾರೆ. ಈ ಬಾರಿ ಶೇ.100ರಷ್ಟು ರಾಸುವಿಮೆ ಆಗಬೇಕು, ರಾಸುವಿಮೆಗೆ ಒಕ್ಕೂಟ ಶೇ.50ರಷ್ಟು ನೀಡಲಿದೆ, ಉಳಿದ ಶೇ.50ರಷ್ಟು ಹಣವನ್ನು ಉತ್ಪಾದಕರು ನೀಡಬೇಕು ಎಂದರು.

ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಡಾ.ಸಂತೋಷ್, ಪ್ರಕಾಶ್, ಡೈರಿ ಉಪಾಧ್ಯಕ್ಷ ಸಿ.ಆರ್.ರಮೇಶ್, ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕ ಆರ್.ವರದರಾಜು, ಸಿ.ಎಂ.ರಮೇಶ್, ಸಿ.ಎಸ್.ಲೋಕೇಶ್, ಸಿ.ಎಸ್.ಕೆಂಪೇಗೌಡ, ಸಿ.ಎ.ಮಂಜುನಾಥ್, ಸಿ.ಬಿ.ನಾರಾಯಣಾಚಾರಿ, ಯೋಗೇಂದ್ರ, ವರಲಕ್ಷ್ಮೀ, ಸಿ.ಡಿ.ಸೋಮು, ಯಶೋಧಮ್ಮ ಲೋಕೇಶ್, ಹೇಮಪುಟ್ಟಯ್ಯ, ಗ್ರಾಪಂ ಸದಸ್ಯ ಸಿ.ಎ.ಲೋಕೇಶ್, ಕಾರ್ಯದರ್ಶಿ ಲೋಕೇಶ್ ಸೇರಿ ಸಿಬ್ಬಂದಿ ಹಾಜರಿದ್ದರು.