ಸಾರಾಂಶ
ಬ್ರಹ್ಮದೇವರಹಳ್ಳಿ ಗ್ರಾಪಂನ ಹಿಂದಿನ ಅಧ್ಯಕ್ಷ ಬಿ.ಸಿ.ವೆಂಕಟೇಶ್ ಮತ್ತು ಉಪಾಧ್ಯಕ್ಷೆ ಸವಿತ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದು ಅಧ್ಯಕ್ಷೆ ಸ್ಥಾನಕ್ಕೆ ಶಿವಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇ.ಎನ್.ಉಮೇಶ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಪಂ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿತ ಸಾಮಕಹಳ್ಳಿ ಶಿವಮ್ಮ ಮತ್ತು ಇಜ್ಜಲಘಟ್ಟ ಗ್ರಾಮದ ಇ.ಎನ್.ಉಮೇಶ್ ಅವಿರೋಧವಾಗಿ ಆಯ್ಕೆಯಾದರು.15 ಮಂದಿ ಸದಸ್ಯ ಬಲ ಇದ್ದು, ಗ್ರಾಪಂನ ಹಿಂದಿನ ಅಧ್ಯಕ್ಷ ಬಿ.ಸಿ.ವೆಂಕಟೇಶ್ ಮತ್ತು ಉಪಾಧ್ಯಕ್ಷೆ ಸವಿತ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದು ಅಧ್ಯಕ್ಷೆ ಸ್ಥಾನಕ್ಕೆ ಶಿವಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇ.ಎನ್.ಉಮೇಶ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ ತಾಪಂ ಇಓ ಚಂದ್ರಮೌಳಿ ಪ್ರಕಟಿಸಿದರು.
ನೂತನ ಅಧ್ಯಕ್ಷೆ ಶಿವಮ್ಮ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಪಂಚಾಯ್ತಿ ವ್ಯಾಪ್ತಿಯ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.ಅವಿರೋಧ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಗ್ರಾಪಂ ಮುಂಭಾಗದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷ ಮೊಳಗಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಕೊಣನೂರು ರವಿ, ಸವಿತ, ತಾರಾ, ಪುಟ್ಟರಾಜು, ವೆಂಕಟೇಶ್, ಜಯಮ್ಮ, ಲಕ್ಷ್ಮಮ್ಮ, ಪಾರ್ವತಿ, ಮಹದೇವಮ್ಮ, ಕಾಂಗ್ರೆಸ್ ಮುಖಂಡರಾದ ಉಮೇಶ್, ಹರೀಶ್, ಟಮೋಟೊ ಚಂದ್ರು, ಮರೀಗೌಡ, ರಾಜಣ್ಣ, ಕುಮಾರ್, ಬೊಮ್ಮೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ಸಿ.ಚೇತನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಯಮ್ಮ ಆಯ್ಕೆ
ಕೆ.ಆರ್.ಪೇಟೆ: ತಾಲೂಕಿನ ಬಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಯಮ್ಮ ಆಯ್ಕೆಯಾದರು. ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಅಧ್ಯಕ್ಷರಾಗಿ ಜಯಮ್ಮ, ಉಪಾಧ್ಯಕ್ಷರಾಗಿ ವೆಂಕಟರಾಜೇಗೌಡ ಆಯ್ಕೆಯಾದರು. ಈ ವೇಳೆ ನಿರ್ದೇಶಕರಾದ ರೇವಣ್ಣ, ಸತೀಶ್, ಪರಮೇಶ್, ಕಾಂತೇಗೌಡ, ವೆಂಕಟೇಶ್, ರೂಪಾ, ಚಿನ್ನಸೋಮಾಚಾರಿ, ನಾಗರಾಜು, ಸಂಘದ ಸಿಇಓ ಅರುಣ್ ಕುಮಾರ್, ಮೇಲ್ವಿಚಾರಕ ರಾಘವೇಂದ್ರ , ಮುಖಂಡರಾದ ಬಿ.ಸಿ.ರಮೇಶ್, ಪ್ರಸನ್ನ ಕುಮಾರ್, ಬಿ.ವಿ.ಮಾದವ, ಸಿಬ್ಬಂದಿ ನಾಗರಾಜು, ಸುಧಾಕರ್, ಜವರೇಗೌಡ ಸೇರಿದಂತೆ ಗ್ರಾಮಸ್ಥರು ಹಾಜರಿದ್ದು ಅಭಿನಂದಿಸಿದರು.