ಪಾಲಿಕೆ ನಾಮನಿರ್ದೇಶಿತ ಸದಸ್ಯರಾಗಿ ಶಿವಮೂರ್ತಿ

| Published : Aug 03 2024, 12:33 AM IST

ಸಾರಾಂಶ

ಮಹಾನಗರ ಪಾಲಿಕೆಗೆ ಅಧಿಕಾರೇತರ ಸದಸ್ಯರಾಗಿ ಎಸ್‌.ಶಿವಮೂರ್ತಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

- ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ - - - ದಾವಣಗೆರೆ: ಮಹಾನಗರ ಪಾಲಿಕೆಗೆ ಅಧಿಕಾರೇತರ ಸದಸ್ಯರಾಗಿ ಎಸ್‌.ಶಿವಮೂರ್ತಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಮಹಾ ನಗರ ಪಾಲಿಕೆಗಳ ಅಧಿನಿಯಮ, 1976ರ ಕಲಂ 7(1)(ಬಿ)ರಡಿ ಪ್ರದತ್ತವಾದ ಅಧಿಕಾರದ ಅನ್ವಯ ಪಾಲಿಕೆಗೆ ಅಧಿಕಾರೇತರ ಸದಸ್ಯರನ್ನಾಗಿ ರಾಜ್ಯಪಾಲರ ಆಜ್ಞಾನುಸಾರ, ರಾಜ್ಯಪಾಲರ ಹೆಸರಿನಲ್ಲಿ ನಗರಾಭಿವೃದ್ಧಿ ಇಲಾಖೆ (ಮಹಾನಗರ ಪಾಲಿಕೆ-2)ಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ನಾಗೇಶ ಆದೇಶ ಹೊರಡಿಸಿದ್ದಾರೆ.

ದಾವಣಗೆರೆಯ ಪ್ರಸಿದ್ಧ ಸುರಭಿ ಸ್ಟುಡಿಯೋ ಮಾಲೀಕ, ಜಿಲ್ಲಾ ಛಾಯಾಗ್ರಾಹಕರ ಸಂಘ ಅಧ್ಯಕ್ಷ, ಜೆಸಿ ಸಂಸ್ಥೆ, ಲಯನ್ಸ್‌ ಕ್ಲಬ್, ಲಯನ್ಸ್ ಟ್ರಸ್ಟ್‌ ಹಾಗೂ ಸಿನಿಮಾ ಸಿರಿ ಸಂಸ್ಥೆಗೆ 2 ಸಲ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಕಡೆಗೂ ಉತ್ತಮ ಅವಕಾಶ ಲಭಿಸಿದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಆಪ್ತ ಛಾಯಾಗ್ರಾಹಕ, ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿರುವ ಅವರು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಎಸ್.ಶಿವಮೂರ್ತಿ (ಸುರಭಿ ಎಸ್.ಶಿವಮೂರ್ತಿ) ಜನಾನುರಾಗಿ ವ್ಯಕ್ತಿತ್ವಕ್ಕೆ ಪಕ್ಷ, ಸರ್ಕಾರ ಅವಕಾಶ ಕಲ್ಪಿಸಿದೆ.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಶಿಫಾರಸಿನ ಮೇರೆಗೆ ಪಾಲಿಕೆಗೆ ನಾಮ ನಿರ್ದೇಶಿತ ಸದಸ್ಯರಾಗಿ ಸುರಭಿ ಎಸ್.ಶಿವಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.

- - - -2ಕೆಡಿವಿಜಿ3: ಎಸ್.ಶಿವಮೂರ್ತಿ