ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನ ದೊಡ್ಡೇರಿ ಹೋಬಳಿ ಶಿವನಗೆರೆ ಗ್ರಾಮದ ಪುರಾಣ ಪ್ರಸಿದ್ಧ ವನಮನವರ ಶ್ರೀ ಹೊನ್ನೇಶ್ವರ ಸ್ವಾಮಿ ಪುನರ್ ಪ್ರತಿಷ್ಠಾಪನಾ ಹಾಗೂ ನೂತನ ದೇವಸ್ಥಾನ ಲೋಕಾರ್ಪಣೆ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಫೆಗೆ ಪಾತ್ರರಾಗುವಂತೆ ಶ್ರೀ ಹೊನ್ನೇಶ್ವರಸ್ವಾಮಿ ಜೀರ್ಣೋದ್ಧಾರ ಸೇವಾ ಸಮಿತಿ ಸಮಿತಿ ಟ್ರಸ್ಟ್ ಅಧ್ಯಕ್ಷ ಮುದಿಮಡು ಮಂಜುನಾಥ್ ಮನವಿ ಮಾಡಿದರು.

ಭಾನುವಾರ ದೇಗುಲದ ಆವರಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.27 ಶುಕ್ರವಾರ ಬೆಳಿಗ್ಗೆ 5.30ಕ್ಕೆ ಜಲದಿ ನಡೆಯಲಿದೆ. ಆ ದಿನದ ಕಾರ್ಯಕ್ರಮದಲ್ಲಿ ಹೊಸದುರ್ಗದ ಕುಂಚಗಿರಿ ಮಠದ ಶ್ರೀ ಶಾಂತವೀರಮಹಾಸ್ವಾಮೀಜಿ ,ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ರಾಜ್ಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಎಂಎಲ್‌ಸಿ ಚಿದಾನಂದ ಎಂ ಗೌಡ, ಶಾಸಕ ಸುರೇಶ್ ಗೌಡ, ಮಾಜಿ ಶಾಸಕ ರಾಜೇಶ್ ಗೌಡ ಭಾಗವಹಿಸುವರು.

28ರ ಶನಿವಾರ ಬೆಳಿಗ್ಗೆ 8ಕ್ಕೆ ಮಹಾಗಣಪತಿ ಪ್ರಾರ್ಥನೆ, ಕಳಸ ಸ್ಥಾಪನೆ, ಶತರುದ್ರ ಪರಾಯಣ ದೇವತಾ ಕಾರ್ಯಗಳು ನಡೆಯಲಿವೆ. ವಿಶೇಷ ಆಹ್ವಾನಿತರಾಗಿ ಎಲೆರಾಂಪುರ ಮಠದ ಶ್ರೀ ಡಾ,ಹನುಮಂತನಾಥಸ್ವಾಮೀಜಿ,ಮಾಜಿ ಪ್ರಧಾನಿಗಳಾದ ಎಚ್‌.ಡಿ.ದೇವೇಗೌಡ, ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ,ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಭಾಗವಹಿಸುವರು.

ಫೆ.1ರ ಬೆಳಿಗ್ಗೆ 5ಕ್ಕೆ ಮಹಾಗಣಪತಿ ಪೂಜೆ, ಪ್ರಾಣ ಪ್ರತಿಷ್ಠೆ ಹಾಗೂ ಮತ್ತಿತರೆ ಪೂಜಾ ಕಂಕೈರ್ಯಗಳು ನಡೆಯಲಿವೆ, ಅಂದಿನ ಧಾರ್ಮಿಕ ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಾಲಾನಂದಸ್ವಾಮೀಜಿ ,ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷ ಡಾ.ಶ್ರೀನಂದಾವಧೂತಸ್ವಾಮೀಜಿ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಭಾಗವಹಿಸುವರು.


ಸುಮಾರು 800 ವರ್ಷಗಳಷ್ಟು ಐತಿಹಾಸಿಕವುಳ್ಳ ಈ ದೇಗುಲ, ಇದನ್ನು ವನಮನವರ ಕುಲದ ಹಿರಿಯರು ಉಳಿಸಿ ಬೆಳಸಿ ಕೊಂಡು ಬಂದಿದ್ದಾರೆ. ಅವರ ಹಾದಿಯಲ್ಲಿ ನಾವುಗಳು ಒಂದು ಹೆಜ್ಜೆ ಮುಂದಿಟ್ಟು ಈ ನೂತನ ದೇವಸ್ಥಾನ ಪುನರ್ ನಿರ್ಮಾಣಮಾಡಿದ್ದೇವೆ. ಈ ದೇವತಾ ಕಾರ್ಯಕ್ಕೆ ಶಿವನಗೆರೆ ಗ್ರಾಮಸ್ಥರು, ಕರ್ನಾಟಕ,ತಮಿಳುನಾಡು ಹಾಗೂ ಆಂದ್ರ ಪ್ರದೇಶದಲ್ಲಿನ ನಮ್ಮ ಸಮುದಾಯದ ಬಂಧುಗಳು ಸಹಕಾರ ನೀಡಿದ್ದಾರೆ. ಈ ಧಾರ್ಮಿಕ ಕಾರ್ಯಕ್ಕೆ ಸುಮಾರು 6 ಸಾವಿರಕ್ಕೂ ಅಧಿಕ ಭಕ್ತರು ಸೇರಲಿದ್ದು, ಎಲ್ಲರೂ ಕೈ ಜೋಡಿಸಿ ಯಶಸ್ವಿಗೊಳಿಸುವಂತೆ ಮಂಜುನಾಥ್ ಮನವಿ ಮಾಡಿದರು.

ಟ್ರಸ್ಟ್ ಉಪಾಧ್ಯಕ್ಷ ಎಚ್‌.ಶಿವರಾಮ್ ಮಾತನಾಡಿ, ನೂತನ ದೇವಸ್ಥಾನದ ನಿರ್ಮಾಣಕ್ಕೆ ಸುಮಾರು 2.5 ಕೋಟಿ ಖರ್ಚು ಮಾಡಲಾಗಿದೆ. ಇದು ಸಂಪೂರ್ಣ ಕಲ್ಲಿನಿಂದ ನಿರ್ಮಿಸಲಾಗಿದೆ. ವನಮನವರ ಕುಲಬಾಂಧವರು ರಾಜ್ಯದಲ್ಲಿ 3 ಸಾವಿರಕ್ಕೂ ಅಧಿಕ ಜನರಿದ್ದು, ನಮ್ಮಲ್ಲಿ 40 ಕುಲಗಳಿವೆ ಮೂರು ದಿನಗಳ ಕಾಲ ನಡೆಯುವ ಶ್ರೀ ಹೊನ್ನೇಶ್ವರಸ್ವಾಮಿ ದೇವತಾ ಕಾರ್ಯದಲ್ಲಿ ಭಕ್ತಾದಿಗಳು ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಕಿತ್ತಗಳಿ ಮಂಜುನಾಥ್, ಸಹ ಕಾರ್ಯದರ್ಶಿ ದೀಪಕ್ ಹೊನ್ನಾಪುರ ,ಖಜಾಂಚಿ ಚಲಪತಿ, ಪದಾಧಿಕಾರಿಗಳಾದ ಡಾ.ಕೆ.ಶ್ರೀಧರ್, ಡಿ.ಕೆ.ನಾಗೇಂದ್ರಪ್ಪ, ಸಜ್ಜೇಹೊಶಹಳ್ಳಿ ರಾಮಚಂದ್ರಪ್ಪ,ಪ್ರಸಾದ್,ಜಗದೀಶ್ ಬಾಬು,ಈಶ್ವರಪ್ಪ,ರಾಜಣ್ಣ,ಕುಲಗುರು ತಿಪ್ಪೇಸ್ವಾಮಿ ,ರಾಮಚಂದ್ರಪ್ಪ ಇತರರಿದ್ದರು.