ಸಾರಾಂಶ
ಹಾವೇರಿ ವಿಶ್ವವಿದ್ಯಾಲಯದ ಕ್ರೀಡಾಮಂಡಳಿ ಸಮಿತಿಗೆ ಹಿರಿಯ ಕಬಡ್ಡಿ ಕ್ರೀಡಾಪಟು ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ ಮತ್ತು ಸ್ಥಳೀಯ ಬಿಇಎಸ್ ಕಾಲೇಜಿನ ಕಬಡ್ಡಿ ಆಟಗಾರ್ತಿ ಅರ್ಪಿತಾ ಮಡಿವಾಳರ ಆಯ್ಕೆಯಾಗಿದ್ದಾರೆ.
ಬ್ಯಾಡಗಿ: ಹಾವೇರಿ ವಿಶ್ವವಿದ್ಯಾಲಯದ ಕ್ರೀಡಾಮಂಡಳಿ ಸಮಿತಿಗೆ ಹಿರಿಯ ಕಬಡ್ಡಿ ಕ್ರೀಡಾಪಟು ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ ಮತ್ತು ಸ್ಥಳೀಯ ಬಿಇಎಸ್ ಕಾಲೇಜಿನ ಕಬಡ್ಡಿ ಆಟಗಾರ್ತಿ ಅರ್ಪಿತಾ ಮಡಿವಾಳರ ಆಯ್ಕೆಯಾಗಿದ್ದಾರೆ.ಈ ಕುರಿತು ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳು ಅಧಿಸೂಚನೆ ಹೊರಡಿಸಿದ್ದು, ಕಬಡ್ಡಿ ಸಂಸ್ಥೆಯ ಮೂಲಕ ಪಂದ್ಯಾವಳಿ ಸಂಘಟಿಸುವುದರ ಜೊತೆಗೆ ಕಳೆದ 26 ವರ್ಷಗಳಿಂದ ಜಿಲ್ಲೆಯಲ್ಲಿನ ನೂರಾರು ಕಬಡ್ಡಿ ಕ್ರೀಡಾಪಟುಗಳಿಗೆ ತರಬೇತಿ ನೀಡಿ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಕಬಡ್ಡಿ ಬೆಳವಣಿಗೆಗೆ ಶಿವಾನಂದ ಮಲ್ಲನಗೌಡ್ರ ಸಹಕರಿಸಿದ್ದಾರೆ. ಇವರ ಜೊತೆಗೆ ಹಿರೇಕೆರೂರ ತಾಲೂಕು ಕಚವಿ ಗ್ರಾಮದ ಹಾಗೂ ಪ್ರಸ್ತುತ ಬಿಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕಬಡ್ಡಿ ಆಟಗಾರ್ತಿ ಅರ್ಪಿತಾ ಮಡಿವಾಳರ ಅವರೂ ಸಹ ಸಮಿತಿಗೆ ಆಯ್ಕೆಯಾಗಿದ್ಧಾರೆ.
ಅಭಿನಂದನೆ: ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಶಿವಕುಮಾರ ಉದಾಸಿ, ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರ, ಹಿರೇಕೆರೂರ ಶಾಸಕ ಯು.ಬಿ.ಬಣಕಾರ, ಬಿಇಎಸ್ ಕಾಲೇಜಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆಯ ಪದಾಧಿಕಾರಿಗಳು, ತೀರ್ಪುಗಾರರು ಮಂಡಳಿ ಸದಸ್ಯರು ಜಿಲ್ಲೆಯ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.