ಶಿವಪುರ ಧ್ವಜ ಸತ್ಯಾಗ್ರಹ ಸೌಧ ಮೂಲ ಸೌಲಭ್ಯಗಳಿಂದ ವಂಚಿತ: ಟಿ.ತಿಮ್ಮೇಗೌಡ ಬೇಸರ

| Published : Jan 27 2025, 12:47 AM IST

ಶಿವಪುರ ಧ್ವಜ ಸತ್ಯಾಗ್ರಹ ಸೌಧ ಮೂಲ ಸೌಲಭ್ಯಗಳಿಂದ ವಂಚಿತ: ಟಿ.ತಿಮ್ಮೇಗೌಡ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧಕ್ಕೆ ತನ್ನದೇ ಆದ ಇತಿಹಾಸವಿದೆ. ಇಂತಹ ಸೌಧವನ್ನು ರಕ್ಷಣೆ ಮಾಡಿ ಒಂದು ಸ್ಮಾರಕವಾಗಿ ಮಾಡುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಮಡಿದ ಮಹನೀಯರ ಬದುಕನ್ನು ಮುಂದಿನ ಪೀಳಿಗೆಯ ಜನರಿಗೆ ಅರಿವು ಮೂಡಿಸಬೇಕಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸ್ವಾತಂತ್ರ್ಯ ಪೂರ್ವ ಹೋರಾಟದ ಕುರುವಾದ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಕೃಷಿ ಫೌಂಡೇಶನ್ ಅಧ್ಯಕ್ಷ ಟಿ.ತಿಮ್ಮೇಗೌಡ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಭಾನುವಾರ ಎಂ.ಎಚ್. ಚನ್ನೇಗೌಡ ವಿದ್ಯಾ ಸಂಸ್ಥೆ, ಎಚ್.ಕೆ.ವೀರಣ್ಣಗೌಡ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆದ 76ನೇ ವರ್ಷದ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧಕ್ಕೆ ತನ್ನದೇ ಆದ ಇತಿಹಾಸವಿದೆ. ಇಂತಹ ಸೌಧವನ್ನು ರಕ್ಷಣೆ ಮಾಡಿ ಒಂದು ಸ್ಮಾರಕವಾಗಿ ಮಾಡುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಮಡಿದ ಮಹನೀಯರ ಬದುಕನ್ನು ಮುಂದಿನ ಪೀಳಿಗೆಯ ಜನರಿಗೆ ಅರಿವು ಮೂಡಿಸಬೇಕಿದೆ ಎಂದರು.

ಸತ್ಯಾಗ್ರಹ ಸೌಧ ಸೌಲಭ್ಯಗಳಿಂದ ವಂಚಿತವಾಗಿ ಕೇವಲ ಒಂದು ಸ್ಮಾರಕವಾಗಿ ಉಳಿದುಕೊಂಡಿದೆ. ಸರ್ಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸತ್ಯಾಗ್ರಹ ಸೌಧದ ಹೆಸರಿನಲ್ಲಿ ಫಸ್ಟ್ ರಚನೆ ಮಾಡಬೇಕು ಎಂದರು.

ನಂತರ ಟ್ರಸ್ಟ್ ಸ್ವಾತಂತ್ರ ಹೋರಾಟಗಾರರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಸತ್ಯಾಗ್ರಹ ಸೌದ ವನ್ನು ಒಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವುದರೊಂದಿಗೆ ಗ್ರಂಥಾಲಯ, ಉದ್ಯಾನವನ ನಿರ್ಮಾಣ, ಶೌಚಾಲಯ, ಕುಡಿಯುವ ನೀರು ಸೌಲಭ್ಯ, ವಿಶ್ರಾಂತಿ ಗೃಹ ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ತಿಮ್ಮೇಗೌಡ ಸಲಹೆ ನೀಡಿದರು.

ಶಾಸಕ ಕೆ.ಎಂ.ಉದಯ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ ಹೋರಾಟಗಾರ ಕೆ.ಟಿ.ಚಂದು, ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ. ಆರ್.ಪ್ರಸನ್ನ ಕುಮಾರ್, ಸದಸ್ಯರಾದ ಲತಾರಾಮು, ಸರ್ವಮಂಗಳ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್, ಕಲ್ಪತರು ಗ್ರಾಮೀಣ ಬ್ಯಾಂಕಿನ ಅಧ್ಯಕ್ಷೆ ಕಲಾವತಿ, ರೋಟರಿ ಇನ್ನರ್ ವೀಲ್ ಅಧ್ಯಕ್ಷ ಪ್ರಭಾ, ಲಯನ್ಸ್ ಕ್ಲಬ್ ಅಧ್ಯಕ್ಷ ಲಿಂಗನ ದೊಡ್ಡಿ ರಾಮಕೃಷ್ಣ, ಭಾರತ್ ವಿಕಾಸ್ ಪರಿಷತ್ ನ ಮಹಾಲಿಂಗಯ್ಯ, ಎಚ್ ಕೆ ವಿ ಕಾಲೇಜಿನ ಕಾರ್ಯದರ್ಶಿ ಸಿ. ಅಪೂರ್ವ ಚಂದ್ರ , ಪ್ರಾಂಶುಪಾಲ ರಾಧಾ ಪ್ರೊ. ಪ್ರಕಾಶ್, ಜಿ.ಸುರೇಂದ್ರ, ಉಪ ಪ್ರಾಂಶುಪಾಲೆ ನಂದಿನಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.