ನ.೧೦ರಂದು ಹಲ್ಲೇಗೆರೆಯಲ್ಲಿ ಶಿವಾರಾಧನಾ ಶರಣ ಸಮ್ಮೇಳನ

| Published : Nov 07 2024, 11:49 PM IST

ಸಾರಾಂಶ

ರಾಜ್ಯ ಪ್ರಶಸ್ತಿ ಪುರಸ್ಕೃತ ಭೈರಮಂಗಲ ರಾಮೇಗೌಡ ಅವರನ್ನು ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅಭಿನಂದಿಸುವರು. ಗಾಯಕ ಪುತ್ತೂರು ನರಸಿಂಹನಾಯಕ ಅವರು ತತ್ವಪದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಶಿವಶರಣೆ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಠಾನದಿಂದ ನ.೧೦ರಂದು ತಾಲೂಕಿನ ಹಲ್ಲೇಗೆರೆ ಗ್ರಾಮದ ಶ್ರೀದಂಡಿನಮ್ಮ ಲಕ್ಷ್ಮೀದೇವಿ ದೇವಸ್ಥಾನದ ಮೈದಾನದಲ್ಲಿ ನಾಲ್ಕನೇ ವರ್ಷದ ವಾರ್ಷಿಕ ಶಿವಾರಾಧನಾ ಶರಣ ಸಮ್ಮೇಳನ, ಜಿಲ್ಲಾ ಮಟ್ಟದ ತತ್ವಪದ ಸ್ಪರ್ಧೆ, ಆಧ್ಯಾತ್ಮರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಹಲ್ಲೇಗೆರೆ ಶಂಕರ್ ತಿಳಿಸಿದರು.

ಅಂದು ಬೆಳಗ್ಗೆ ೧೦ ಗಂಟೆಗೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಬಸವಜ್ಞಾನ ಮಂದಿರ ಅಧ್ಯಕ್ಷೆ ಮಾತೆ ಬಸವಾಂಜಲಿದೇವಿ ಅವರು ಸಮಾರಂಭ ಉದ್ಘಾಟಿಸುವರು. ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಿಲಿಕಲ್ ವೀರಭದ್ರೇಶ್ವರ ಮಠದ ನಂದೀಶ್ವರ ಸ್ವಾಮೀಜಿ ಸಾಹಿತಿ ತ.ನಾ.ಶಿವಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು. ದೇಹವೆಂಬೋ ಡಂಬ ಸಿಡಿಯನ್ನು ಜವನಹಳ್ಳಿ ಮಠದ ಸಂಗಮೇಶ್ವರ ಸ್ವಾಮಿ ಬಿಡುಗಡೆ ಮಾಡುವರು. ಹಲ್ಲೇಗೆರೆ ಶಂಕರ್ ಅವರ ಹಲ್ಲೇಗೆರೆಯ ತತ್ವಪದಗಳು ಭಾಗ-೪ನ್ನು ಕೊಡಗಿನ ವಿರಕ್ತ ಮಠದ ಮಲ್ಲೇಶ್ವರಸ್ವಾಮೀಜಿ ಬಿಡುಗಡೆ ಮಾಡುವರು. ಡಾ.ಪ್ರದೀಪ್‌ಕುಮಾರ್ ಹೆಬ್ರಿಯವರು ಸುಜ್ಞಾನ ಚಿಂತನ ಪುಸ್ತಕವನ್ನು ಧನಗೂರು ವೀರಸಿಂಹಾಸನ ಮಠದ ಮುಮ್ಮುಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡುವರು ಎಂದರು.

ಸಮಾರಂಭದಲ್ಲಿ ವಿವಿಧ ಮಠಾಧೀಶರಾದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಜಯದೇವ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ, ಮಹಾಲಿಂಗ ಶಿವಲಿಂಗ ಸ್ವಾಮೀಜಿ, ಬಸವಭೃಂಗೇಶ್ವರ ಸ್ವಾಮೀಜಿ ಇತರರು ಸಮಾರಂಭದಲ್ಲಿ ಭಾಗವಹಿಸುವರು.

ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತ ಭೈರಮಂಗಲ ರಾಮೇಗೌಡ ಅವರನ್ನು ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅಭಿನಂದಿಸುವರು. ಗಾಯಕ ಪುತ್ತೂರು ನರಸಿಂಹನಾಯಕ ಅವರು ತತ್ವಪದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸುವರು.

ಕರಾವಳಿ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀನಿವಾಸಶೆಟ್ಟಿ, ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಹರ್ಷವರ್ಧನ್, ಬ್ರಹ್ಮಶ್ರೀ ನಾರಾಯಣ ಗುರುಧರ್ಮ ಪರಿಪಾಲನಾ ಸಂಘದ ಸೈದಪ್ಪ ಗುತ್ತೇದಾರ್, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಪ್ರೊ.ಎಚ್.ಎಸ್.ನರಸಿಂಹಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಪ್ರತಿಷ್ಠಾನದ ಉಪಾಧ್ಯಕ್ಷೆ ಸಂಗೀತಾ ಶಂಕರ್, ಗಾಯಕ ಸಿ.ಪಿ. ವಿದ್ಯಾಶಂಕರ್ ಗೋಷ್ಠಿಯಲ್ಲಿದ್ದರು.