ಬೇಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿ.ಬಿ. ಶಿವರಾಜ್ ನೇತೃತ್ವದ ತಂಡ ಜಯಗಳಿಸಿದ್ದು ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಬಿ.ಬಿ. ಶಿವರಾಜ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್. ಲಕ್ಷ್ಮಣ್, ಖಜಾಂಚಿಯಾಗಿ ಲೋಹಿತ್ ಹಾಗೂ ನೂತನ ಪದಾಧಿಕಾರಿಗಳು ಮತ್ತು ನಿರ್ದೇಶಕರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿ.ಬಿ. ಶಿವರಾಜ್ ನೇತೃತ್ವದ ತಂಡ ಜಯಗಳಿಸಿದ್ದು ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಬಿ.ಬಿ. ಶಿವರಾಜ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್. ಲಕ್ಷ್ಮಣ್, ಖಜಾಂಚಿಯಾಗಿ ಲೋಹಿತ್ ಹಾಗೂ ನೂತನ ಪದಾಧಿಕಾರಿಗಳು ಮತ್ತು ನಿರ್ದೇಶಕರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಸುರೇಶ್, ಶರಣ್ ಘೋಷಿಸಿದರು. ತಾಲೂಕು ಕಾರ್ಯನಿರತ ‌ಪತ್ರಕರ್ತರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಬಿ.ಶಿವರಾಜ್, ಉಪಾಧ್ಯಕ್ಷರಾಗಿ ಡಾ. ಎಂ.ಸಿ.ಕುಮಾರ್ ಮತ್ತು ಆರ್‌. ವೆಂಕಟೇಶ, ಕಾರ್ಯದರ್ಶಿಗಳಾದ ಬಿ. ಎನ್. ಗಣೇಶ್, ಬೆಳ್ಳವಾರ ದಿನೇಶ್ ಮತ್ತು ನಿರ್ದೇಶಕರಾಗಿ ಇಬ್ಬೀಡು ರಮೇಶ್, ರವಿಹೊಳ್ಳ, ಜಗದೀಶ್, ವಿಜಯಕುಮಾರ್, ಸುನಿಲ್ ಪಡುವಳಲು, ಆರಾದ್ಯ ಮತ್ತು ಚಂದ್ರಶೇಖರ ಅವಿರೋಧವಾಗಿ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಿ.ಎಲ್. ಲಕ್ಷ್ಮಣ್ ಮತ್ತು ಪೈಂಟ್ ರವಿ ಹಾಗೂ ಖಜಾಂಚಿ ಸ್ಥಾನ ಲೋಹಿತ್ ಮತ್ತು ಹರೀಶ್ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಕ್ಕೆ‌ ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ‌ ಬಿ.ಎಲ್. ಲಕ್ಷ್ಮಣ್ ಮತ್ತು ಖಜಾಂಚಿಯಾಗಿ ಲೋಹಿತ್ ಅಧಿಕ ಮತವನ್ನು ಪಡೆದು ಜಯಶೀಲರಾದರು. ಬಳಿಕ ಚುನಾವಣಾಧಿಕಾರಿ ಕೆ.ಜೆ. ಸುರೇಶ್, ಶರಣ್ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಪತ್ರಕರ್ತರ ಹಿತದೃಷ್ಟಿಯಿಂದ ನೂತನ ಅಧ್ಯಕ್ಷರ ತಂಡ ಕೆಲಸ ಮಾಡಲಿ ಎಂದು ಹಾರೈಸಿದರು.ನೂತನ ಅಧ್ಯಕ್ಷ ಬಿ.ಬಿ.ಶಿವರಾಜ್ ಮಾತನಾಡಿ, ಬೇಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯ ಮತ್ತು ಜಿಲ್ಲೆಯಲ್ಲಿ ಉತ್ತಮವಾದ ಹೆಸರು ಪಡೆದಿದೆ. ಇಡೀ ತಂಡದ ಗೆಲುವಿಗೆ ತಾಲೂಕಿನ ಪತ್ರಕರ್ತರು, ಜೊತೆಗೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷರಾದ ಎಚ್. ಬಿ. ಮದನ್ ಗೌಡ, ಜಿಲ್ಲಾಧ್ಯಕ್ಷ ಕೆಂಚೇಗೌಡರು, ಮಾಜಿ ಅಧ್ಯಕ್ಷ ರವಿ ನಾಕಲಗೋಡು, ತಾಲೂಕು ಉಸ್ತುವಾರಿ ಕೆಪಿಎಸ್ ಪ್ರಮೋದ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳಿಗೆ ವಂದನೆ ಸಲ್ಲಿಸಿದರು. ಅಲ್ಲದೇ ಸಾರ್ವಜನಿಕರು ಮತ್ತು ಪತ್ರಕರ್ತರ ನಡುವೆ ಸ್ನೇಹದ ವಾತಾವರಣವನ್ನು ನಿರ್ಮಿಸುವಲ್ಲಿ ಶ್ರಮಿಸಲಾಗುತ್ತದೆ. ಈಗಾಗಲೇ ಸಂಘಕ್ಕೆ ಕ್ಷೇಮಾಭಿವೃದ್ಧಿ ನಿಧಿಯ ಸಂಗ್ರಹಕ್ಕೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಕ್ಷೇಮಾಭಿವೃದ್ಧಿಯನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ ಮುಂದಿನ ದಿನಗಳಲ್ಲಿ ಸಂಘದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕ್ರೀಡಾ ಚಟುವಟಿಕೆಗಳು ಸೇರಿದಂತೆ ಸಂಘ ಜನಪರವಾಗಿ ಕೆಲಸ ಮಾಡಲು ಮುಂದಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿ ಸದಸ್ಯರಿಗೆ ಹಾಸನ ಜಿಲ್ಲಾ‌ ಸಂಘದ ನಿರ್ದೇಶಕ ಮಲ್ಲೇಶ್, ಸಂಘದ ಮಾಜಿ ಅಧ್ಯಕ್ಷರಾದ ಎನ್. ಅನಂತು, ಡಿ.ಬಿ. ಮೋಹನ್ ಕುಮಾರ್, ಎ . ರಾಘವೇಂದ್ರ ಹೊಳ್ಳ, ಹೆಬ್ಬಾಳು ಹಾಲಪ್ಪ, ವೈ.ಆರ್.ಭಾರತೀಗೌಡ ಹಾಗೂ ನಿಕಟಪೂರ್ವ ಅಧ್ಯಕ್ಷ ರಘುನಾಥ್ ಅಭಿನಂದನೆ ಸಲ್ಲಿಸಿದರು. ಈ‌ ಸಂದರ್ಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಸದಸ್ಯರಾದ ಎಚ್. ಎಂ. ದಯಾನಂದ, ಅರುಣ್ ಕುಮಾರ್, ಮಹೇಶ ಗೌಡ, ಮಹೇಶ್, ಕೇಬಲ್ ರಮೇಶ್, ಚಂದ್ರಶೇಖರ, ‌ನಿಂಗರಾಜ್, ನಂದಕುಮಾರ್, ಹೇಮಂತ್, ರಂಜಿತ್, ಸಂತೋಷ, ದೀಪು ಇನ್ನೂ ಮುಂತಾದವರು ಹಾಜರಿದ್ದರು.