ಜಿಲ್ಲಾ ರೋಟರಿ ಹೊಯ್ಸಳ ಕ್ಲಬ್ ಮಾಜಿ ಸಹಾಯಕ ರಾಜ್ಯಪಾಲ ಡಾ.ಬಿ.ಎಸ್. ಪ್ರೀತಿ ಮೋಹನ್ ಮಾತನಾಡಿ ರೋಟರಿ ಸಂಸ್ಥೆಯು ಮಾನವೀಯ ಸೇವೆ, ಸಾಮಾಜಿಕ ಕಳಕಳಿ ಮತ್ತು ನಾಯಕತ್ವದ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ರೋಟರಿ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದರು. ಬೇಲೂರು ರೋಟರಿ ಕ್ಲಬ್ ಸಂಸ್ಥೆಯ ಅಧ್ಯಕ್ಷ ಶಿವರಾಜ್ ಮತ್ತು ಕಾರ್ಯದರ್ಶಿಯಾಗಿ ರಾಘವೇಂದ್ರ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಬೇಲೂರು ರೋಟರಿ ಕ್ಲಬ್ ಸಂಸ್ಥೆಯ ಅಧ್ಯಕ್ಷ ಶಿವರಾಜ್ ಮತ್ತು ಕಾರ್ಯದರ್ಶಿಯಾಗಿ ರಾಘವೇಂದ್ರ ಅವರ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಪಟ್ಟಣದ ವಿಆರ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ರೋಟರಿ ಕ್ಲಬ್ ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸದಸ್ಯರನ್ನು ನೋಂದಾಯಿಸಲಾಯಿತು. ಜಿಲ್ಲಾ ರೋಟರಿ ಹೊಯ್ಸಳ ಕ್ಲಬ್ ಮಾಜಿ ಸಹಾಯಕ ರಾಜ್ಯಪಾಲ ಡಾ.ಬಿ.ಎಸ್. ಪ್ರೀತಿ ಮೋಹನ್ ಮಾತನಾಡಿ ರೋಟರಿ ಸಂಸ್ಥೆಯು ಮಾನವೀಯ ಸೇವೆ, ಸಾಮಾಜಿಕ ಕಳಕಳಿ ಮತ್ತು ನಾಯಕತ್ವದ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ರೋಟರಿ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದರು. ನಿಕಟಪೂರ್ವ ಅಧ್ಯಕ್ಷ ರಂಗನಾಥ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ರೋಟರಿ ಕ್ಲಬ್ ಎಲ್ಲಾ ಸದಸ್ಯರ ಸಂಪೂರ್ಣ ಸಹಕಾರದಿಂದ ಹತ್ತಾರು ಸಮಾಜಮುಖಿ ಮತ್ತು ಜನಪರ ಸೇವೆ ಮಾಡಲಾಗಿದೆ. ದಿ. ಗಂಗಯ್ಯ ಹೆಗ್ಗಡೆ ಅವರು ನೀಡಿದ ನಿವೇಶನದಲ್ಲಿ ಸದ್ಯ ಸಮುದಾಯದ ಭವನ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಅಧ್ಯಕ್ಷರಾದ ಬಿ. ಬಿ. ಶಿವರಾಜ್ ಈ ಕಾರ್ಯ ಪೂರೈಸಲು ಎಲ್ಲಾ ಸದಸ್ಯರ ಸಹಕಾರವಿದೆ ಎಂದರು. ನೂತನ ಅಧ್ಯಕ್ಷರಾದ ಶಿವರಾಜ್ ಮಾತನಾಡಿ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಲ್ಲಿ ಆಗ್ರಮಾನ್ಯವಾದ ರೋಟರಿ ಕ್ಲಬ್ ಬೇಲೂರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ನಮಗೆ ಅವಕಾಶ ಲಭಿಸಿದೆ. ರೋಟರಿ ಸಂಸ್ಥೆಗೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲದಿರುವ ಸಂದರ್ಭದಲ್ಲಿ ಕೂಡ ಸಂಸ್ಥೆಯ ಸದಸ್ಯರು ದುಡಿದ ಒಂದು ಭಾಗವನ್ನು ಸಮಾಜಕ್ಕೆ ನೀಡುವ ದೇಣಿಗೆಯಿಂದ ರೋಟರಿ ಸಂಸ್ಥೆಯಲ್ಲಿ ವಿವಿಧ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಸದಸ್ಯತ್ವ ವಿಸ್ತರಣೆ, ಸಮಾಜ ಸೇವೆ ಹಾಗೂ ಹೊಸ ಯೋಜನೆಗಳ ಮೂಲಕ ಕ್ಲಬ್ ಇನ್ನಷ್ಟು ಜನರಿಗೆ ತಲುಪುವಂತೆ ಕಾರ್ಯ ನಿರ್ವಹಿಸಲಾಗುವುದು. ಪ್ರತಿಯೊಬ್ಬ ಸದಸ್ಯರೂ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದು ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬುದು ನಮ್ಮ ಹಂಬಲವಾಗಿದ್ದು ಎಲ್ಲಾ ಸದಸ್ಯರ ಸಹಕಾರದಿಂದ ಹೆಚ್ಚು ಜನಪರ ಕಾರ್ಯಕ್ರಮ ರೂಪಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಸಹಾಯಕ ಗರ್ವನರ್ ಡಾ. ಗಣೇಶ, ರೋಟರಿ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ, ಮಾಜಿ ಕಾರ್ಯದರ್ಶಿ ರಮೇಶ್, ಝೋನಲ್ ಲೆಫ್ಟಿನೆಂಟ್ ವೀರೇಂದ್ರ ಕುಮಾರ್, ಸದಸ್ಯರಾದ ಲೋಕೇಶ್, ಶಂಭುಗೌಡ, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್ ಬಿ ಮದನ್ ಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಚೇಗೌಡ, ವಿ ಆರ್ ಕನ್ವೆನ್ಷನ್ ಹಾಲ್ ಮಾಲೀಕ ಕೌರಿ ವಿಕ್ರಂ ಇತರರು ಹಾಜರಿದ್ದರು.