ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು
ಇಲ್ಲಿಗೆ ಸಮೀಪದ ಬೊಳ್ಳುರು ಗ್ರಾಮದ ಮುನೇಶ್ವರ ದೇವಸ್ಥಾನಲ್ಲಿ ಶಿವರಾತ್ರಿ ಮಹಾ ಪೂಜೆ ನಡೆಯಿತು.ಪ್ರತಿವರ್ಷ ಶಿವರಾತ್ರಿಯ ಮರುದಿನ ಇಲ್ಲಿ ಪೂಜೆ ನಡೆಸಲಾಗುತ್ತಿದೆ. 25 ನೇ ವರ್ಷದ ಮಹಾಪೂಜೆ ನಡೆಯಿತು. ಈ ಸಂದರ್ಭ ಗಣಪತಿ ಹೋಮ ಮತ್ತು ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಿತು.
ಪೂಜಾಕಾರ್ಯವನ್ನು ಸೋಮಶೇಖರ್ ಭಟ್ ತಂಡದವರು ನೆರವೇರಿಸಿದರು. ಈ ಸಂದರ್ಭ ದೇವಸ್ಥಾನಕ್ಕೆ ಸ್ಥಳ ದಾನ ಮಾಡಿದ ಸ್ಥಳೀಯ ದಾನಿಗಳಾದ ಸರೋಜ ನಾರಾಯಣ ದಂಪತಿ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶಶಿಕುಮಾರ್ ಮತ್ತು ಕಾರ್ಯದರ್ಶಿ ಕುಡೆಕಲ್ಲು ಗುರುಪ್ರಸಾದ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಅಲ್ಲಿನ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷರಾದಬಿ.ಸಿ. ಮಲ್ಲಿಕಾರ್ಜುನ ಮತ್ತು ಗ್ರಾಮದ ಹಿರಿಯರಾದ ಕೆ.ಎಲ್.ರಾಮಣ್ಣ ಮತ್ತು ಸಮಿತಿ ಸದಸ್ಯರು ಹಾಜರಿದ್ದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.