ಆದರ್ಶಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಬದಲಾವಣೆ ತರುವ ಒಂದು ಸಣ್ಣ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ

ಕನ್ನಡಪ್ರಭವಾರ್ತೆ ತಿಪಟೂರು

ಅಕ್ಕಮಹಾದೇವಿ ೧೨ನೇ ಶತಮಾನದ ಆದರ್ಶ ಮಹಿಳೆಯಾಗಿದ್ದು ಅವರ ಹೆಸರಿನಲ್ಲಿ ಸಮಾಜದ ಎಲ್ಲ ಮಹಿಳೆಯರು ಪ್ರತಿ ತಿಂಗಳು ಒಂದೆಡೆ ಸೇರಿ ಪ್ರಾರ್ಥನೆಯೊಂದಿಗೆ ಅವರ ಆದರ್ಶಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಬದಲಾವಣೆ ತರುವ ಒಂದು ಸಣ್ಣ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಶ್ರೀ ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಜಿ.ಜಯಶೀಲಾ ಗುರುಬಸಪ್ಪ ತಿಳಿಸಿದರು.

ನಗರದ ಜಯದೇವಾ ಹಾಸ್ಟಲ್ ಸಭಾಂಗಣದಲ್ಲಿ ನೂತನ ವರ್ಷದ ಪ್ರಥಮ ಸಭೆಯಲ್ಲಿ ಎಲ್ಲ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು ನೂತನ ವರ್ಷವನ್ನು ವಿಶೇಷವಾಗಿ ಆಚರಿಸಲು ನಮ್ಮ ಸಂಘದ ಎಲ್ಲ ಸದಸ್ಯರಿಗೆ ಆಯೋಜಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ೧೫ಜನರಿಗೆ ಬಹುಮಾನವನ್ನು ವಿತರಿಸಲಾಗುತ್ತಿದೆ ಎಂದರು.ಅಕ್ಕಮಹಾದೇವಿ ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಸಮಾಜದ ಉಪಾಧ್ಯಕ್ಷರಾದ ಸುಮಂಗಲ ನಾಗಭೂಷಣ್ ಮತ್ತು ಶೋಭ ಮಂಜುನಾಥ್, ಕಾರ್ಯದರ್ಶಿ ಸುಮಾ ಪ್ರಭು, ಖಜಾಂಚಿ ಮುಕ್ತ ತಿಪ್ಪೇಶ್ ಹಾಗೂ ನಿರ್ಧೇಶಕರಾದ ಆರ್.ಎಂ.ನಾಗರತ್ನ, ವೇದಾ ಸುರೇಶ್, ಪಂಕಜ, ರತ್ನ ವಿಜಯಶಂಕರ್, ಗಾಯಿತ್ರಿ ಬಸವರಾಜು ಹಾಗೂ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು. ಸುಮಾ ಪ್ರಭು ನಿರೂಪಿಸಿ, ಶೋಭ ಮಂಜುನಾಥ್ ಸ್ವಾಗತ, ಮುಕ್ತಾತಿಪ್ಪೇಶ್ ವಂದನಾರ್ಪಣೆ ಸಲ್ಲಿಸಿದರು. ಎಲ್ಲ ಸದಸ್ಯರಿಂದ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಲಾಗಿತ್ತು.