ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಎಲ್ಲ ಜನರು ತಮ್ಮ ದುಡಿಮೆಯ ಸ್ವಲ್ಪ ಭಾಗ ಸಮಾಜದ ಅಭಿವೃದ್ಧಿಗೆ ಮೀಸಲಾಗಿಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದಲ್ಲಿ ಶಿವಸಿಂಪಿ ಸಮಾಜ ಕಲ್ಯಾಣ ಸಂಘದ ನೇತೃತ್ವದಲ್ಲಿ ಶಿವದಾಸಿಮಯ್ಯ ಜಯಂತ್ಯೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿಯ ಪ್ರಾಮಾಣಿಕ, ಕ್ರಿಯಾಶೀಲತೆ ಹಾಗೂ ಉತ್ತಮ ಹಿನ್ನೆಲೆ ಕಾರಣ. ಆಡಳಿತ ಮಂಡಳಿ ಉತ್ತಮವಾಗಿದ್ದರೆ ಸಮಾಜದಿಂದ ಮತ್ತು ಜನ ಪ್ರತಿನಿಧಿಗಳಿಂದ ದೇಣಿಗೆ ಸಹಾಯ ಸಹಕಾರ ದೊರೆಯುತ್ತದೆ. ಯಾವುದೇ ಒಂದು ಸಮಾಜವು ಎಲ್ಲ ಸ್ಥರದಲ್ಲಿ ಬೆಳೆಯಬೇಕಾದರೆ ಸಮಾಜದ ಹಿರಿಯರ ಪ್ರೋತ್ಸಾಹ ಅವಶ್ಯಕ ಎಂದರು. ಬೆಳ್ಳರೆ ಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ಸಮಾಜಕ್ಕೆ ಒಳಿತು ಮಾಡುವ ಮನೋಭಾವನೆ ಉಳ್ಳವರಾಗಬೇಕು ಎಂದರು. ಸಾನ್ನಿಧ್ಯ ಕಾತ್ರಾಳ ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮಿಗಳು, ಬೋಳ ಚಿಂಚೋಳಿ ಸಿದ್ದರಾಮೇಶ್ವರ ಪಟ್ಟದ ದೇವರು ವಹಿಸಿದ್ದರು. ವಿದ್ಯಾ ಸಂತೋಷ ಕಲ್ಯಾಣಶೆಟ್ಟಿ, ಗಂಗಾಧರ ಯಾವಗಲ್, ಶಿವಶಂಕರ ಸಿಂದಗಿ, ಎಂ.ಬಿ ಕನ್ನೂರ, ಅಪ್ಪು ಕಲ್ಯಾಣಶೆಟ್ಟಿ, ಶಿವಕುಮಾರ ಭುಯಾರ, ವೀರಭದ್ರ ಮೇತ್ರಿ, ಯುವರಾಜ ಚೋಳಕೆ, ಗುಂಡೇಶ್ವರ ಹಳಕಟ್ಟಿ, ಅನಿಲ್ ಭೂಸನೂರ, ಪಿ.ಎಂ.ಗಲಗಲಿ, ಪ್ರಸಾದ್ ಶಿವಸಿಂಪಿ, ಎಸ್.ಕೆ ಗೌಡರು ಮುಂತಾದವರು ಇದ್ದರು. ಪ್ರತಿಭಾನ್ವಿತ 30 ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸತ್ಕರಿಸಲಾಯಿತು.