ಮುಂದಿನ 25 ವರ್ಷಗಳಲ್ಲಿ ಆಹಾರಕ್ಕಾಗಿ ಹಾಹಾಕಾರ: ಪಾಂಡೋಮಟ್ಟಿ ಸ್ಮಾಮೀಜಿ

| Published : Jan 19 2025, 02:15 AM IST

ಮುಂದಿನ 25 ವರ್ಷಗಳಲ್ಲಿ ಆಹಾರಕ್ಕಾಗಿ ಹಾಹಾಕಾರ: ಪಾಂಡೋಮಟ್ಟಿ ಸ್ಮಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಜನ ಸಂಖ್ಯೆಮಾತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಮುಂದಿನ 25 ವರ್ಷಕ್ಕೆ ಈ ದೇಶದಲ್ಲಿ ಆಹಾರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ಮಾಮೀಜಿ ಹೇಳಿದರು. ಚನ್ನಗಿರಿಯಲ್ಲಿ ಬಸವ ತತ್ವ ಸಮ್ಮೇಳನದ ರೈತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವತತ್ವ ಸಮ್ಮೇಳನದ ರೈತ ಸಂಗಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚನ್ನಗಿರಿ

ನಮ್ಮನ್ನಾಳುವ ಸರ್ಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ, ರಸ್ತೆ, ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಇನ್ನು ಅನೇಕ ಉದ್ದೇಶಗಳಿಗೆ ರೈತರ ಜಮೀನುಗಳನ್ನು ಕಸಿದುಕೊಳ್ಳುತ್ತಿದೆ. ಆದರೆ ದೇಶದ ಜನ ಸಂಖ್ಯೆಮಾತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಮುಂದಿನ 25 ವರ್ಷಕ್ಕೆ ಈ ದೇಶದಲ್ಲಿ ಆಹಾರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ಮಾಮೀಜಿ ಹೇಳಿದರು.ಶನಿವಾರ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿರುವ ವಿರಕ್ತ ಮಠದ ಆವರಣದಲ್ಲಿ ಬಸವತತ್ವದ ಮಹಾ ಬೆಳಗಿನಲ್ಲಿ ಬೆಳಗಿದ ಲಿಂಗೈಕ್ಯ ಸಂಗಮನಾಥ ಮಹಾಸ್ವಾಮಿಗಳವರ 63ನೇ ಸ್ಮರಣೋತ್ಸವ, ಲಿಂಗೈಕ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳವರ 18ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳನದ ರೈತ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ದೇಶದಲ್ಲಿ ಸಣ್ಣ ಗುಂಡು ಪಿನ್ನಕ್ಕೂ ಸಹಾ ಬೆಲೆ ಇದೆ ಆದರೆ ಮನುಷ್ಯನ ಜೀವನಕ್ಕೆ ಅವಶ್ಯಕವಾಗಿ ಬೇಕಾದ ದವಸ-ದಾನ್ಯಗಳಿಗೆ ಮಾತ್ರ ಬೆಲೆ ಸಿಗದೆ ಸಂಕಷ್ಟದಲ್ಲಿರುವ ರೈತರು ಒಂದೇ ಬೆಳೆಗೆ ಸೀಮಿತರಾಗಿರದೆ ಬೇರೆ-ಬೇರೆ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಮುಂದಾಗಬೇಕು ಎಂದರು.ಒಂದು ಕಾಲದಲ್ಲಿ ರೈತ ಸಂಘ ಎಂದರೆ ಸರ್ಕಾರಗಳು ಎದುರುವ ಪರಿಸ್ಥಿತಿಯಲ್ಲಿದ್ದವು. ಪ್ರಸ್ತುತವಾಗಿ ಸ್ವ-ಹಿತಕ್ಕಾಗಿ ರೈತಸಂಘಗಳು ಇದ್ದು ಯಾವುದೇ ಸರ್ಕಾರಗಳಿರಲಿ ರೈತ ಸಂಘಗಳು ಸರ್ಕಾರದ ವಿರುದ್ಧ ಬುಸುಗುಡುವ ಕೆಲಸ ಮಾಡಿದಾಗ ಮಾತ್ರ ರೈತನ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಎಂದರು.ರೈತ ಈ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ ಆದರೆ ರೈತನ ಬೆನ್ನೆಲುಬನ್ನು ಮುರಿಯುವ ಕೆಲಸ ನಿರಂತವಾಗಿ ನಡೆಯುತ್ತಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಂತರರಾಷ್ಟ್ರೀಯ ರೈತ ಸಂಘಟಕಿ ಚುಕ್ಕಿ ನಂಜುಂಡಸ್ವಾಮಿ, ಭಾರತದೇಶದ ಕೃಷಿ ಪದ್ಧತಿ ಪ್ರಕೃತಿಯೊಂದಿಗೆ ಸಾಗುವುದಾಗಿತ್ತು. 1960ರಲ್ಲಿ ಹಸಿರುಕ್ರಾಂತಿಯ ಹೆಸರಿನಲ್ಲಿ ಪಾಶ್ಚಿಮಾತ್ಯ ದೇಶಗಳು ನೀಡಿದ ರಸಗೊಬ್ಬರ, ಹೈಬ್ರಿಡ್ ಬೀಜ, ಔಷಧಿಗಳನ್ನು ನೀಡಿ ನಮ್ಮ ದೇಶದ ಭೂಮಿಗೆ ವಿಷ ಉಣಿಸುವ ಕೆಲಸ ಮಾಡಿದ್ದರಿಂದ ಇಂದು ನಾವು ತಿನ್ನುವ ಪ್ರತಿಯೊಂದು ಅನ್ನದಲ್ಲೂ ವಿಷಯುಕ್ತವಾಗಿದೆ ಎಂದರು.ವಿಪರೀತ ರಸಾಯನಿಕ ಗೊಬ್ಬರ, ಬೀಜಗಳ ಬಳಕೆಯಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿದ್ದು, ಕಾಲಕ್ಕೆ ತಕ್ಕಂತೆ ಮಳೆಯಾಗದೆ ಒಂದೇ ಬೆಳೆಗೆ ಸೀಮಿತವಾಗಿದ್ದೇವೆ ಎಂದು ಅವರು, ರೈತರು ವಿಶ್ರಕೃಷಿ ಪದ್ಧತಿಗೆಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಸಮಾರಂಭದಲ್ಲಿ ತಜ್ಞರಾದ ಚಿತ್ರದುರ್ಗದ ದೇವರಾಜರೆಡ್ಡಿ ನೀರಿನ ಸದ್ಬಳಕೆ, ಕೂಡ್ಲುಗಿಯ ಎಚ್.ವಿ.ಸಜ್ಜನ್ ಮರಾಧಾರಿತ ಬೆಳೆಗಳು, ಅಮೇರಿಕಾದ ಡಾ.ವಿಶ್ವನಾಥ್ ಗುಡ್ಡದಾರ್ ಅವರು ಆಹಾರ ಮತ್ತು ಆರೋಗ್ಯ ಎಂಬ ವಿಷಯಗಳ ಬಗ್ಗೆ ಸಮಗ್ರವಾಗಿ ವಿಚಾರ ಮಂಡನೆ ಮಾಡಿದರು.ಟಿ.ನರಸೀಪುರದ ಅಲ್ಲಮಪ್ರಭು ಶೂನ್ಯಪೀಠದ ಶ್ರೀ ಗೌರಿಶಂಕರ ಮಹಾಸ್ವಾಮಿಗಳು, ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಕೊರಟಿಕೆರೆ ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜೆ.ಆರ್.ಷಣ್ಮುಖಪ್ಪ, ಕಾಕನೂರು ಎಂ.ಬಿ.ನಾಗರಾಜ್ ಸೇರಿದಂತೆ ಮೊದಲಾದವರು ಹಾಜರಿದ್ದರು.