ಸಾರಾಂಶ
ಬಂಟ್ವಾಳ ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆಕನ್ನಡಪ್ರಭ ವಾರ್ತೆ ಬಂಟ್ವಾಳ
ಜನ್ಮದಿನದ ಸಂದರ್ಭದಲ್ಲಿ ಗಿಡನೆಡುವ ಮೂಲಕ ಮಕ್ಕಳು ಸಂಭ್ರಮಾಚರಣೆಯಲ್ಲಿಯೂ ಪರಿಸರ ಕಾಳಜಿ ಮೆರೆಯಬೇಕು ಎಂದು ಬಂಟ್ವಾಳ ವಲಯ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಕೃಷ್ಣ ನಾಯ್ಕ್ ಹೇಳಿದ್ದಾರೆ.ಕನ್ನಡಪ್ರಭ ಪತ್ರಿಕೆಯ ಆಶ್ರಯದಲ್ಲಿ ಬಿ.ಸಿ.ರೋಡು ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಬಂಟ್ವಾಳ ವಲಯ ಅರಣ್ಯ ಇಲಾಖೆ ಹಾಗೂ ಬಂಟ್ವಾಳ ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ಆಯೋಜಿಸಲಾದ ಬಂಟ್ವಾಳ ತಾಲೂಕುಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪರಿಸರ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಮರಗಳ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಜೊತೆಗೆ ಪರಿಸರವನ್ನು ಶುಚಿಯಾಗಿಡುವುದು ಪ್ರತಿಯೊಬ್ಬರ ಕರ್ತವ್ಯ. ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರ ಸಹಕಾರ ಅಗತ್ಯ. ಚಿತ್ರಕಲಾ ಸ್ಪರ್ಧೆಯಿಂದ ಮಕ್ಕಳಲ್ಲಿ ಪರಿಸರದ ಮೇಲಿನ ಪ್ರೀತಿ ವೃದ್ಧಿಯಾಗುತ್ತದೆ ಎಂದರು.ರೋಟರಿ ವಲಯ 5ರ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಅಬ್ದುಲ್ ರಜಾಕ್ ಕಬಕಕಾರ್ಸ್ ಮಾತನಾಡಿ, ಕನ್ನಡಪ್ರಭ ದಿನಪತ್ರಿಕೆ, ರಾಜ್ಯವ್ಯಾಪಿ ಮಕ್ಕಳಿಗೆ ಚಿತ್ರ ಸ್ಪರ್ಧೆ ಏರ್ಪಡಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಎತ್ತಿಹಿಡಿಯುವ ಕಾರ್ಯಮಾಡಿದೆ ಎಂದರು.
ಕನ್ನಡಪ್ರಭ ಪತ್ರಿಕೆಯ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಪ್ರಶಾಂತ್ ನಿಡ್ಲೆ, ತೀರ್ಪುಗಾರರಾದ ಕಾರ್ತಿಕ್ ವಿಟ್ಲ, ದಿನೇಶ್ ವಿಶ್ವಕರ್ಮ, ತಾರಾನಾಥ್ ಕೈರಂಗಳ, ಚೈತ್ರಾ ಧನರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉದ್ಘಾಟನಾ ಸಂಭ್ರಮ:
ಬೆಳಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾದ ಪ್ರಶಾಂತ್ ಪೂಂಜಾಲಕಟ್ಟೆ, ಬಿಳಿ ಹಾಳೆಯಲ್ಲಿ ಚಿತ್ತಾರ ಸೃಷ್ಟಿಸುವ ಮೂಲಕ ಚಿತ್ರಸ್ಪರ್ಧೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಕ್ಷೇತ್ರ ಶಿಕ್ಷಣ ಸಂಯೋಜಕರಾದ ರಮಾನಂದ ನೂಜಿಪ್ಪಾಡಿ, ಬಂಟ್ವಾಳ ರೋಟರಿ ಕ್ಲಬ್ ಕಾರ್ಯದರ್ಶಿ ಯಾಸಿರ್ ಕಲ್ಲಡ್ಕ, ಇನ್ಫೆಂಟ್ ಜೀಸಸ್ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ಸುನಿಲ್ ಉಪಸ್ಥಿತರಿದ್ದರು.ಕನ್ನಡಪ್ರಭ ಪತ್ರಿಕೆಯ ಜಿಲ್ಲಾ ವರದಿಗಾರ ಆತ್ಮಭೂಷಣ್, ಉಪಸಂಪಾದಕ ಸಂತೋಷ್ ವರ್ಕಾಡಿ, ಸಂಸಾರ ಜೋಡುಮಾರ್ಗ ತಂಡದ ಪೃಥ್ವಿರಾಜ್ ಕೊಕ್ಕಪುಣಿ, ಯಶವಂತ್, ಅರಣ್ಯ ಇಲಾಖೆಯ ಗಸ್ತು ವನಪಾಲಕ ಅನಿತಾ, ರೇಖಾ, ಮಹಮ್ಮದ್ ಹನೀಫ್, ಬಿ.ಸಿ.ರೋಡು ಮೈಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಮಾನಸ, ಯಶೋದಾ, ಸುಹೈರಾ, ಮನಾರ್ ಹಾಗೂ ಹರಿಣಿ ಸಹಕರಿಸಿದರು.
ಕನ್ನಡಪ್ರಭ ಪತ್ರಿಕೆಯ ಉಪ ಸುದ್ದಿ ಸಂಪಾದಕ ಕೃಷ್ಣಮೋಹನ ತಲೆಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ವರದಿಗಾರ ಮೌನೇಶ ವಿಶ್ವಕರ್ಮ, ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.---------ಚಿತ್ರಸ್ಪರ್ಧೆಗೆ ಆಗಮಿಸಿದ್ದ ಮಕ್ಕಳನ್ನು ಗೊಂಬೆ ಕುಣಿತದ ಮೂಲಕ ಸ್ವಾಗತಿಸಲಾಯಿತು.
ತಾಲೂಕಿನ 34 ಶಾಲೆಗಳ 157 ಮಕ್ಕಳು ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಅರಣ್ಯ ಇಲಾಖೆಯ ಸಿಬ್ಬಂದಿಗಳೂ ಸ್ವಯಂ ಸೇವಕರಂತೆ ಕಾರ್ಯಕ್ರಮದುದ್ದಕ್ಕೂ ತೊಡಗಿಸಿಕೊಂಡರು.
ವಿಜೇತ ವಿದ್ಯಾರ್ಥಿಗಳಿಗೆ ಫಲಕ, ಪ್ರಮಾಣಪತ್ರದ ಜೊತೆಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.-------------ಚಿತ್ರಕಲಾ ಸ್ಪರ್ಧೆ ಫಲಿತಾಂಶ:ಸ್ಪರ್ಧೆಯಲ್ಲಿ 34 ಶಾಲೆಗಳ 157 ಸ್ಪರ್ಧಿಗಳು ಪಾಲ್ಗೊಂಡಿದ್ದರು.4, 5ನೇ ತರಗತಿ ವಿಭಾಗ: ಪ್ರಥಮ- ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ನಿಹಾರಿಕಾ ಎಂ., ದ್ವಿತೀಯ- ಮಜಿ ವೀರಕಂಭ ಶಾಲೆಯ ಭುವಿ ವಿ., ತೃತೀಯ- ಬಂಟ್ವಾಳ ಎಸ್‌ವಿಎಸ್ ವಿದ್ಯಾಕೇಂದ್ರದ ಲಕ್ಷ್ ಆರ್., ಸಮಾಧಾನಕರ-ವಿದ್ಯಾಗಿರಿ ಎಸ್‌ವಿಎಸ್ ವಿದ್ಯಾಕೇಂದ್ರದ ವೈಭವಿ ಎಸ್. ಹಾಗೂ ಜೇಸಿಸ್ ವಿದ್ಯಾಕೇಂದ್ರದ ಶೋಯಿಕ್ ಎಂ.ಜೆ.
6,7ನೇ ತರಗತಿ ವಿಭಾಗ: ಪ್ರಥಮ- ಕುಕ್ಕಾಜೆ ಪ್ರಗತಿ ವಿದ್ಯಾ ಕೇಂದ್ರದ ಆದ್ಯಾ ಪಿ.ಬಿ., ದ್ವಿತೀಯ-ವಿಟ್ಲ ಪಿಎಂಶ್ರೀ ಸರ್ಕಾರಿ ಶಾಲೆಯ ಧನ್ವಿ ಕೆ., ತೃತೀಯ-ಬಂಟ್ವಾಳ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಧನ್ವಿನ್ ಜಿ.ಪಿ., ಸಮಾಧಾನಕರ- ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಂಚನ್ ಹಾಗೂ ಬಂಟ್ವಾಳ ಬಿಆರ್‌ಎಂಪಿ ಶಾಲೆಯ ದಿತ್ವಿ ಅಜಿಲ.8, 9, 10ನೇ ತರಗತಿ ವಿಭಾಗ: ಕಾವಳಕಟ್ಟೆ ಸರ್ಕಾರಿ ಪ್ರೌಢಶಾಲೆಯ ಪೂರ್ವಿಕಾ ಎಂ.ಡಿ. ಪ್ರಥಮ, ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ನಿನಾದ್ ಕೈರಂಗಳ ದ್ವಿತೀಯ, ಬಂಟ್ವಾಳ ವಿದ್ಯಾಗಿರಿ ಎಸ್‌ವಿಎಸ್ ವಿದ್ಯಾಕೇಂದ್ರದ ಸ್ಪಂದನ ಜೆ. ಶೆಟ್ಟಿ ತೃತೀಯ, ಮೊಡಂಕಾಪು ಇನ್ಫಾಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ದಿಶಾ ಹಾಗೂ ಬಂಟ್ವಾಳ ಬಿಆರ್‌ಎಂಪಿ ಶಾಲೆಯ ಮೌಲ್ಯ ಶೆಟ್ಟಿ ಸಮಾಧಾನಕರ.;Resize=(128,128))
;Resize=(128,128))
;Resize=(128,128))
;Resize=(128,128))