ಸಾರಾಂಶ
ನಗರ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನಲ್ಲಿ ಗುರುವಾರ ‘ಯೂತ್ ಫಾರ್ ನೇಷನ್’ ವತಿಯಿಂದ ಆಯೋಜಿಸಲಾದ ‘ಅಣಕು ಸಂಸತ್ತು’ ಕಾರ್ಯಕ್ರಮವನ್ನು ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರುಪ್ರತಿ ಹಂತದಲ್ಲೂ ನಾಯಕತ್ವವನ್ನು ಪ್ರದರ್ಶಿಸುವ ಕೆಲಸ ನಾವು ಮಾಡಬೇಕು. ಮಾಡುವ ಕೆಲಸಕ್ಕೆ ನ್ಯಾಯವೊದಗಿಸುವ ಪ್ರಯತ್ನವೂ ನಮ್ಮದಾಗಬೇಕು ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ನಗರ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನಲ್ಲಿ ಗುರುವಾರ ‘ಯೂತ್ ಫಾರ್ ನೇಷನ್’ ವತಿಯಿಂದ ಆಯೋಜಿಸಲಾದ ‘ಅಣಕು ಸಂಸತ್ತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದು ವಿಶ್ವದ ಎಲ್ಲ ದೇಶಗಳಿಗೂ ಭಾರತದ ಮಹತ್ವ ಅರಿವಾಗಿದೆ. ಭಾರತವನ್ನು ಕಡೆಗಣಿಸುವ ಸ್ಥಿತಿಯಲ್ಲಿ ಯಾವ ದೇಶವೂ ಇಲ್ಲ. ದೇಶದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯವಾಗಿದ್ದುದೆ. ಜನರ ಮೇಲೆ ಅದನ್ನು ಹೇರಿದವರಿಗೂ ಅದು ತಪ್ಪು ಎಂದು ತಿಳಿಯುವ ಅಗತ್ಯವಿದೆ ಎಂದರು.ದೊಡ್ಡ ಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಒಂದು ದೇಶವನ್ನು ವ್ಯಾಖ್ಯಾನಿಸುವುದು ಅಲ್ಲಿನ ಆಡಳಿತ ವೈಖರಿಯನ್ನು ಅವಲಂಬಿಸಿದೆ. ಇಂದು ಜಗತ್ತು ಭಾರತವನ್ನು ಗೌರವಿಸುತ್ತಿದೆ ಎಂದಾದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಮತ್ತು ಕಾನೂನು ರಚನೆಗಳು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗಿ 50 ವರ್ಷವಾಗಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಯಾವ ಉದ್ದೇಶಕ್ಕೆ ಆಯಿತು ಎಂದು ಪ್ರತಿಯೊಬ್ಬರು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.ಸಹಾಯಕ ಪ್ರಾಧ್ಯಾಪಕಿ ಮತ್ತು ಪ್ರಭಾರ ಪ್ರಾಂಶುಪಾಲೆ ದೀಪಾನಾಯಕ್ ಪಿ. ಅಧ್ಯಕ್ಷತೆ ವಹಿಸಿದ್ದರು.ಯೂತ್ ಫಾರ್ ನೇಷನ್ ಜಿಲ್ಲಾ ಸಂಯೋಜಕರಾದ ನಂದನ್ ಮಲ್ಯ, ವಿಖ್ಯಾತ್ ಶೆಟ್ಟಿ ಇದ್ದರು.ಸಹಾಯಕ ಪ್ರಾಧ್ಯಾಪಕ ಡಾನ್ ಪ್ರಕಾಶ್ ಸ್ವಾಗತಿಸಿದರು. ವಂದನಾ ಪೈ ಮತ್ತು ಮಾನ್ವಿ ಶೆಟ್ಟಿ ಪರಿಚಯಿಸಿದರು. ವಿದ್ಯಾರ್ಥಿನಿ ಉನ್ನತಿ ವಂದಿಸಿದರು. ಸೈಯದ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.---------------