ಕೇಂದ್ರ ಸಚಿವ ಅಮಿತ್ ಶಾ ಅವರು ದೇಶದಲ್ಲಿ ವಿದೇಶಿ ಮತದಾರರಿದ್ದಾರೆ. ಅವರನ್ನು ಹೊರಗೆ ಹಾಕುವುದಕ್ಕೆ ಎಸ್ಐಆರ್ ಮಾಡುತಿದ್ದೇವೆ ಎಂದಿದ್ದಾರೆ, ಕುಮಾರಸ್ವಾಮಿ ಅವರು ನಮ್ಮ ರಾಜ್ಯದಲ್ಲಿ ಬಾಂಗ್ಲಾದೇಶಿಯರಿದ್ದಾರೆ ಎಂದಿದ್ದಾರೆ, ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯದಲ್ಲಿ 10 ಲಕ್ಷ ಬಾಂಗ್ಲದೇಶಿಯರಿದ್ದಾರೆ ಎಂದು ನಿಖರ ಅಂಕಿಅಂಶ ಕೊಟ್ಟಿದ್ದಾರೆ, ಈಗ ಎಸ್ಐಆರ್ ಆಗಿದೆ, ಕೇವಲ 771 ವಿದೇಶಿ ಮತದಾರರು ಪತ್ತೆಯಾಗಿದ್ದಾರೆ, ಅದರಲ್ಲೂ 558 ಮಂದಿ ಹೊಟ್ಟೆಪಾಡಿಗಾಗಿ ಬಂದು ಇಲ್ಲೇ ನೆಲೆಸಿರುವ ನೇಪಾಳಿಯರು, 150 ಮಂದಿ ಅನಿವಾಸಿ ಕನ್ನಡಿಗರು, ಹಾಗಿದ್ರೆ ಎಲ್ಲಿದ್ದಾರೆ 10 ಲಕ್ಷ ವಿದೇಶಿಯರು ಅವರು ಈಗ ತೋರಿಸಬೇಕಲ್ಲಾ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ.
ಉಡುಪಿ ; ಕೇಂದ್ರ ಸಚಿವ ಅಮಿತ್ ಶಾ ಅವರು ದೇಶದಲ್ಲಿ ವಿದೇಶಿ ಮತದಾರರಿದ್ದಾರೆ. ಅವರನ್ನು ಹೊರಗೆ ಹಾಕುವುದಕ್ಕೆ ಎಸ್ಐಆರ್ ಮಾಡುತಿದ್ದೇವೆ ಎಂದಿದ್ದಾರೆ, ಕುಮಾರಸ್ವಾಮಿ ಅವರು ನಮ್ಮ ರಾಜ್ಯದಲ್ಲಿ ಬಾಂಗ್ಲಾದೇಶಿಯರಿದ್ದಾರೆ ಎಂದಿದ್ದಾರೆ, ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯದಲ್ಲಿ 10 ಲಕ್ಷ ಬಾಂಗ್ಲದೇಶಿಯರಿದ್ದಾರೆ ಎಂದು ನಿಖರ ಅಂಕಿಅಂಶ ಕೊಟ್ಟಿದ್ದಾರೆ, ಈಗ ಎಸ್ಐಆರ್ ಆಗಿದೆ, ಕೇವಲ 771 ವಿದೇಶಿ ಮತದಾರರು ಪತ್ತೆಯಾಗಿದ್ದಾರೆ, ಅದರಲ್ಲೂ 558 ಮಂದಿ ಹೊಟ್ಟೆಪಾಡಿಗಾಗಿ ಬಂದು ಇಲ್ಲೇ ನೆಲೆಸಿರುವ ನೇಪಾಳಿಯರು, 150 ಮಂದಿ ಅನಿವಾಸಿ ಕನ್ನಡಿಗರು, ಹಾಗಿದ್ರೆ ಎಲ್ಲಿದ್ದಾರೆ 10 ಲಕ್ಷ ವಿದೇಶಿಯರು ಅವರು ಈಗ ತೋರಿಸಬೇಕಲ್ಲಾ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಏನು ಮಾಡಿದರೂ ಕೇಳುವಂತಿಲ್ಲ ಎಂಬ ಕಾನೂನನ್ನೇ ಕೇಂದ್ರ ಸರ್ಕಾರ ತಂದಿದೆ, ಚುನಾವಣಾ ಆಯೋಗದ ಮೂಲಕ ಎಸ್ಐಆರ್ ಮಾಡಿದ್ದೆ ನಮ್ಮ ದೇಶದ ನಿಜವಾದ ಮತದಾರರನ್ನು ತೆಗೆದುಹಾಕುವುದಕ್ಕೆ, ಅದರ ವಿರುದ್ಧ ನಾವು ಹೋರಾಟ ಮಾಡುತಿದ್ದೇವೆ ಎಂದರು.ಹಾಲಿನ ಬೆಲೆ ಈಗಲೂ ಕಡಿಮೆ ಇದೆ !
ರೈತರ ಬೇಡಿಕೆ ಅವರ ಬದುಕನ್ನೂ ಕೂಡ ನಾವು ನೋಡಬೇಕಾಗುತ್ತದೆ, ಈಗ ನಾವು ಹಾಲಿನ ಬೆಲೆ ಏರಿಸದೇ ಇದ್ರೆ ಅವರು ಬೇರೆ ರಾಜ್ಯಗಳಿಗೆ ಹಾಲು ಪೂರೈಕೆ ಮಾಡಲು ಸಿದ್ದರಾಗಿದ್ರು, ಆದ್ದರಿಂದ ಇಲ್ಲಿಗೆ ಹಾಲು ಕೊರತೆಯಾಗಬಾರದು, ರೈತರಿಗೂ ಒಳ್ಳೆಯ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಸ್ವಲ್ಪ ಬೆಲೆಯನ್ನು ಏರಿಸಿದ್ದೇವೆ. ತೆಲಂಗಾಣ, ತಮಿಳುನಾಡು, ಆಂದ್ರಪ್ರದೇಶಗಳಿಗೆ ಹೋಲಿಸಿದರೇ ಈಗಲೂ ನಮ್ಮಲ್ಲಿ ಹಾಲಿನ ಬೆಲೆ ಕಡಿಮೆ ಇದೆ ಎಂದವರು ಹಾಲಿನ ಬೆಲೆ ಏರಿಕೆಗೆ ಸಮಜಾಯಿಶಿ ನೀಡಿದರು.ಬಾಲಿವುಡ್ ನಟರು ಕೋಮವಾದಿಗಳು !ಸಿನೆಮಾ ನಟರು ಕೋಮುವಾದಿಗಳಾಗುತ್ತಿದ್ದಾರೆ ಎಂಬ ತಮ್ಮ ಹೇಳಿಕೆಯ ಬಗ್ಗೆ ಮಾತನಾಡಿದ ಸಚಿವರು, ನಾನು ಹೇಳಿದ್ದು ಬಾಲಿವುಡ್ ನಟರ ಬಗ್ಗೆ, ಸ್ಯಾಂಡಲ್ವುಡ್ ಬಗ್ಗೆ ಅಲ್ಲ, ನಮ್ಮ ನಟರು ಅಷ್ಟರಮಟ್ಟಿಗೆ ಯಾರೂ ಕೋಮುವಾದಿಗಳಲ್ಲ, ಅಂತಹ ತತ್ವಗಳಿಗೆ ನಮ್ಮ ಕನ್ನಡದ ನಟರು ಯಾರೂ ಶರಣಾಗದಿಲ್ಲ, ಆದರೆ ಬಾಲಿವುಡ್ನ ಬಹಳಷ್ಟು ನಟರು ಆ ರೀತಿ ನಡೆದುಕೊಳ್ಳುತ್ತಿದ್ದಾರೆ. ಸಮಾಜವನ್ನು ಒಡೆಯುವ ಸಂದೇಶದ ಸಿನೆಮಾಗಳನ್ನು ತೆಗೆಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಉಡುಪಿ ಆಸ್ಪತ್ರೆ ಬಗ್ಗೆ ನ. 3ರಂದು ಸಭೆಉಡುಪಿ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿ ಉದ್ಘಾಟಿಸುವ ಬಗ್ಗೆ ಆರೋಗ್ಯ ಸಚಿವರೊಂದಿಗೆ ನ.3ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ, ಉಡುಪಿ ಡಿಸಿ ಮತ್ತು ಜನಪ್ರತಿನಿಧಿಗಳನ್ನೂ ಸಭೆಗೆ ಕರೆಯಲಾಗಿದೆ. ಆರೋಗ್ಯ ಸಚಿವರು ಪಕ್ಕದ ಜಿಲ್ಲೆಯವರಾದ್ದರಿಂದ ಅವರಿಗೂ ಸಮಸ್ಯೆ ಗೊತ್ತಿದೆ. ಆದ್ದರಿಂದ ಸಭೆಯಲ್ಲಿ ತೀರ್ಮಾನ ಆಗುತ್ತದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾ ಪ್ರಶಸ್ತಿಗಳಿಗೆ ನೀತಿ - ಸಮಿತಿ ರಚನೆಉಡುಪಿ ಜಿಲ್ಲೆಯಲ್ಲಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿಲ್ಲ, ರಾಜ್ಯದಲ್ಲಿ ಒಂದೆರಡು ಜಿಲ್ಲೆಗಳಲ್ಲಿ ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಕೊಡಲಾಗುತ್ತಿದೆ. ಈ ಪ್ರಶಸ್ತಿಗಳಿಗೆ ಒಂದು ಘನತೆ ಇರಬೇಕು, ರಾಜಕೀಯ ಒತ್ತಡಕ್ಕೆ ಪ್ರಶಸ್ತಿ ಕೊಡಬಾರದು, ಅದಕ್ಕೊಂದು ನೀತಿ ಬೇಕು, ಸಮಿತಿ ರಚಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಿ ಮುಂದಿನ ವರ್ಷಗಳಲ್ಲಿ ಈ ಪ್ರಶಸ್ತಿ ನೀತಿ ತಯಾರಿಸಲಾಗುತ್ತದೆ ಎಂದು ಉಸ್ತುವಾರಿ ಸಚಿವರು ಹೇಳಿದರು.ಉಡುಪಿಯ ವೈದ್ಯರೊಬ್ಬರಿಗೆ ರಾಜ್ಯ ಪ್ರಶಸ್ತಿ ಘೋಷಿಸಿ ಹಿಂದಕ್ಕೆ ಪಡೆದಿರುವುದಕ್ಕೆ ಕಾರಣ ಗೊತ್ತಿಲ್ಲ, ಈ ಬಗ್ಗೆ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಿ ಜೊತೆ ಮಾತನಾಡುತ್ತೇನೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಧ್ಯಕ್ಷ ಅನ್ಸಾರ್ ಅಹಮ್ಮದ್ ನೇತೃತ್ವದಲ್ಲಿ ಸಚಿವರಿಗೆ ಮುತ್ತಿಗೆ ಹಾಕಿ ಜಿಲ್ಲಾ ಪ್ರಶಸ್ತಿಗಳನ್ನು ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.