ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ರಾಜಕೀಯವನ್ನು ಎಲ್ಲಾ ಸಂದರ್ಭಗಳಲ್ಲೂ ಮಾಡದೆ ಚುನಾವಣೆ ವೇಳೆ ಮಾಡಿ ತಮ್ಮ ಶಕ್ತಿ ತೋರಿಸಬೇಕು. ಉಳಿದ ಸಮಯದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.ಸಮೀಪದ ಮೆಳ್ಳಹಳ್ಳಿಯಲ್ಲಿ ಕನಕಭವನ ಕಾಂಪೌಂಡ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪಕ್ಷದಲ್ಲಿ ಯಾರು ಇರುತ್ತಾರೋ, ಹೋಗುತ್ತಾರೋ ಎಂಬುದು ಮುಖ್ಯವಲ್ಲ. ಚುನಾವಣೆ ಬಂದಾಗ ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ ಎಂದರು.
ಜನಪರ ಕಾರ್ಯಕ್ರಮಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪಕ್ಷದ ಶಾಸಕನಾಗಿ ಶಿಸ್ತಿನಿಂದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಸರ್ಕಾರ ಕಳೆದ ಎರಡು ಕಾಲು ವರ್ಷದಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸಗಳು ಆಗುತ್ತವೆ ಎಂದರು.
ಸಿಎಂ, ಡಿಸಿಎಂ ನೇತೃತ್ವದ ಕಾಂಗ್ರೆಸ್ ರಾಜ್ಯದಲ್ಲಿ ಸದೃಢವಾಗಿದೆ. 5 ವರ್ಷ ಉತ್ತಮ ಆಡಳಿತ ನೀಡಲಿದೆ. ನಮ್ಮ ಶಕ್ತಿ ಏನೆಂಬುದು ಕಳೆದ ವಿಧಾನಸಭೆ ಚುನಾವಣೆಯಿಂದ ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ಗೊತ್ತಾಗಿದೆ ಎಂದರು.ಮೆಳ್ಳಹಳ್ಳಿ ಗ್ರಾಮಸ್ಥರು ಕನಕಭವನದ ಸುತ್ತಾ ಕಾಂಪೌಂಡ್ ನಿರ್ಮಾಣಕ್ಕೆ ಮನವಿ ಮಾಡಿದ್ದರು. ಅದರಂತೆ 9 ಲಕ್ಷ ರು.ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಬಳಿಕ ಗ್ರಾಪಂ ಸದಸ್ಯ ವಿನಯ್ ಹೊನ್ನೇಗೌಡ ಮಾತನಾಡಿ, ಮೆಳ್ಳಹಳ್ಳಿ ಗ್ರಾಮದಲ್ಲಿ ಕನಕಭವನದ ಕಾಂಪೌಂಡ್ ನಿರ್ಮಾಣಕ್ಕೆ ಎಂಎಲ್ಸಿ ಮಧು.ಜಿ.ಮಾದೇಗೌಡ ಅವರು ಅನುದಾನ ನೀಡಿದ್ದು, ಅವರು ಮೆಳ್ಳಹಳ್ಳಿ ಗ್ರಾಮದ ಮೇಲೆ ಇಟ್ಟಿರುವ ಪ್ರೀತಿ ಸಾಕ್ಷಿಯಾಗಿದ್ದು ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ನೀಡಿ ಎಂದು ಕೋರಿದರು.ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯರಾದ ಬಿ.ಗಿರೀಶ್, ಭರತೇಶ್, ಮುಖಂಡರಾದ ಅಣ್ಣೂರು ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್ ಬಸವೇಗೌಡ, ಗ್ರಾಪಂ ಅಧ್ಯಕ್ಷೆ ಸೌಭಾಗ್ಯ ರಾಮಣ್ಣ, ಉಪಾಧ್ಯಕ್ಷೆ ಸುವರ್ಣ, ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್, ವಿನಯ್ ಹೊನ್ನೇಗೌಡ, ಮಿಥುನ್, ರವಿಚಂದ್ರ, ಮಂಜುನಾಥ್, ಪಿಡಿಒ ಸುಧಾ, ಮುಖಂಡರಾದ ಎಂ.ಕೆ.ಹೊನ್ನೇಗೌಡ, ಹಾಗಲಹಳ್ಳಿ ಪುಟ್ಟಸ್ವಾಮಿ, ಬಿ.ರೇವಣ್ಣ, ನಾಡಗೌಡ ತಮ್ಮಣ್ಣ, ಕರಿಯಪ್ಪ, ಪೂಜಾರಿ ಶಿವಣ್ಣ, ಕೆ. ರೇವಣ್ಣ, ಕಂಡಕ್ಟರ್ ಕೃಷ್ಣ, ಸೇರಿದಂತೆ ಮತ್ತಿತರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))