ಶ್ರಮದಾನ ಮಾಡಿದ ಈ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ದೇವಾಲಯದ ಎದುರಿನ ಶಿಲಾಶಾಸನದ ಪ್ರಕಾರ ಇದು ಹೊಯ್ಸಳರ 2ನೇ ವೀರ ಬಲ್ಲಾಳನ ಕಾಲದ್ದು. ಅಂದರೆ ಕ್ರಿ.ಶ. 1206 ರದ್ದು. ಆಗ ಇದನ್ನು ಬಲ್ಲೇಶ್ವರ ದೇವಾಲಯ ಎಂದು ಕರೆಯುತ್ತಿದ್ದರು. ದಿಡಗವು ಆಗ ''''ಕಳ್ಕನಿ ನಾಡಿನ ದಿಡುಗಿನ ವೃತ್ತಿ'''' ಎಂಬ ಆಡಳಿತ ಕೇಂದ್ರವಾಗಿತ್ತು. ವಿಶ್ವಾಮಿತ್ರ ಗೋತ್ರದ ಎಡವ ಜಕ್ಕಯ್ಯ ಎಂಬುವವನು ತನ್ನ ತಂದೆತಾಯಿಯ ಪುಣ್ಯಕ್ಕಾಗಿ 21 ಗದ್ಯಾಣ ಮತ್ತು ಭತ್ತದ ಗದ್ದೆಗಳನ್ನು ದಾನ ನೀಡಿದ್ದಾಗಿ ಶಾಸನದಲ್ಲಿ ಇದೆ. ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ಶಿವಲಿಂಗ, ಹೊಯ್ಸಳರ ತಿರುಗು ಕಂಬಗಳು ಮತ್ತು ಬಾಗಿಲ ಮೇಲಿನ ಲಲಾಟದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಕೆತ್ತನೆ ಇದರ ವಿಶೇಷ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ದಿಡಗ ಗ್ರಾಮದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಗಾಂಧಿ ತತ್ವ ಪರಿಣಿತ ಯುವಜನ ಶಿಬಿರದ ವಿದ್ಯಾರ್ಥಿಗಳು, ಗ್ರಾಮದಲ್ಲಿರುವ ಪಾಳುಬಿದ್ದ 800 ವರ್ಷಗಳಷ್ಟು ಪುರಾತನ ಬಲ್ಲೇಶ್ವರ ದೇವಾಲಯವನ್ನು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.

ರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಎನ್‌ಎಸ್‌ಎಸ್, ಯುವ ಸಬಲೀಕರಣ ಇಲಾಖೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ದಿಡಗ ಇವರ ಸಂಯುಕ್ತ ಆಶ್ರಯದಲ್ಲಿ ಸೆ. 5ರಿಂದ 11ರವರೆಗೆ ಈ ಶಿಬಿರ ನಡೆಯುತ್ತಿದೆ.

800 ವರ್ಷದ ಇತಿಹಾಸ:

ಶ್ರಮದಾನ ಮಾಡಿದ ಈ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ದೇವಾಲಯದ ಎದುರಿನ ಶಿಲಾಶಾಸನದ ಪ್ರಕಾರ ಇದು ಹೊಯ್ಸಳರ 2ನೇ ವೀರ ಬಲ್ಲಾಳನ ಕಾಲದ್ದು. ಅಂದರೆ ಕ್ರಿ.ಶ. 1206 ರದ್ದು. ಆಗ ಇದನ್ನು ''''ಬಲ್ಲೇಶ್ವರ ದೇವಾಲಯ''''ಎಂದು ಕರೆಯುತ್ತಿದ್ದರು. ದಿಡಗವು ಆಗ ''ಕಳ್ಕನಿ ನಾಡಿನ ದಿಡುಗಿನ ವೃತ್ತಿ'' ಎಂಬ ಆಡಳಿತ ಕೇಂದ್ರವಾಗಿತ್ತು. ವಿಶ್ವಾಮಿತ್ರ ಗೋತ್ರದ ಎಡವ ಜಕ್ಕಯ್ಯ ಎಂಬುವವನು ತನ್ನ ತಂದೆತಾಯಿಯ ಪುಣ್ಯಕ್ಕಾಗಿ 21 ಗದ್ಯಾಣ ಮತ್ತು ಭತ್ತದ ಗದ್ದೆಗಳನ್ನು ದಾನ ನೀಡಿದ್ದಾಗಿ ಶಾಸನದಲ್ಲಿ ಇದೆ. ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ಶಿವಲಿಂಗ, ಹೊಯ್ಸಳರ ತಿರುಗು ಕಂಬಗಳು ಮತ್ತು ಬಾಗಿಲ ಮೇಲಿನ ಲಲಾಟದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಕೆತ್ತನೆ ಇದರ ವಿಶೇಷ.

ಕಾಲನ ವಶಕ್ಕೆ ಸಿಕ್ಕಿ ನಲುಗಿರುವ ಈ ದೇವಾಲಯದ ಆವರಣ, ಮೆಟ್ಟಿಲುಗಳ ತುಂಬಿದ್ದ ಗಿಡ-ಗಂಟಿಗಳನ್ನು ತೆಗೆದು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು. ''''''''ಸ್ಮಾರಕ ಉಳಿದರೆ ಇತಿಹಾಸ ಉಳಿದಂತೆ'''''''' ಎಂಬ ಧ್ಯೇಯದೊಂದಿಗೆ ಈ ಕಾರ್ಯ ಮಾಡಿದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿ ಹಾರನಹಳ್ಳಿ ಚಿನ್ಮಯ ಭಾರದ್ವಾಜ್ ಮಾತನಾಡಿ, ನಮ್ಮ ನಾಡಿನ ಇತಿಹಾಸ ತಿಳಿಸುವುದು ಶಿಲಾಶಾಸನ, ಪುರಾತನ ದೇವ ಮಂದಿರಗಳು. ಆದರೆ ಹೊಯ್ಸಳ ಕಾಲದ ದೇವಾಲಯ ಪಾಳು ಬಿದ್ದಿದೆ. ಸುಂದರ ಶಿವಲಿಂಗವಿದೆ. ನಮ್ಮ ತಂಡದ ಶಿಬಿರಾರ್ಥಿಗಳು ಶ್ರಮದಾನ ಮಾಡಿ ಸ್ವಚ್ಛತಾ ಕಾರ್ಯ ಮಾಡಿದ್ದೇವೆ. ಈ ದೇವಾಲಯವನ್ನು ಸಂರಕ್ಷಣೆ ಮಾಡಿ ಹೊಯ್ಸಳ ಕಾಲದ ದೇಗುಲ ಉಳಿಸಿ ಬೆಳೆಸುವ ಕೆಲಸವಾಗಲಿ'''''''' ಎಂದು ಹೇಳಿದರು.

ಪುರಾತತ್ವ ಇಲಾಖೆಯವರು ಕೂಡಲೇ ಇದನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿ ಜೀರ್ಣೋದ್ಧಾರ ಮಾಡಬೇಕು ಎಂದು ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಮನವಿ ಮಾಡಿದ್ದಾರೆ.

_