ಸಾರಾಂಶ
ಬೀರೂರು: ‘ಶ್ರಮಿಕ ವರ್ಗ ದೇಶದ ಅಡಿಪಾಯವಾಗಿದ್ದು ಜಾತಿ, ಧರ್ಮದ ಹಂಗಿಲ್ಲದೆ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದೆ’ ಎಂದು ಶಾಸಕ ಕೆ.ಎಸ್. ಆನಂದ್ ಬಣ್ಣಿಸಿದರು.ಪಟ್ಟಣದ ಸವಿತಾ ಸಮಾಜದಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,
ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸವಿತಾ ಸಮಾಜದವರು ತಮ್ಮ ಬಂಧು ವರ್ಗದಲ್ಲಿಯೇ ಹಣದ ಸಹಕಾರ ಪಡೆದು ಅದನ್ನು ಹೂಡಿಕೆ ಮಾಡಿ ಜಮೀನು ಖರೀದಿಸಿದ್ದಲ್ಲದೆ, ನಿವೇಶನವಾಗಿ ಪರಿವರ್ತಿಸಿಕೊಂಡು ತಮ್ಮ ಸಮುದಾಯದ ವಸತಿ ರಹಿತರಿಗೆ ನೀಡುತ್ತಿರುವುದು ಉಳಿದ ಸಮುದಾಯಗಳಿಗೆ ಮಾದರಿಯಾಗಿದೆಎಂದರು.ಬೀರೂರು ಸವಿತಾ ಸಮಾಜ ಅಧ್ಯಕ್ಷ ರಾಜು ಮಾತನಾಡಿ, ‘ಶಾಸಕ ಆನಂದ್ ಸಮುದಾಯಗಳ ಸಮಸ್ಯೆ ಹೇಳುವ ಮುನ್ನವೇ ಅರ್ಥೈಸಿಕೊಂಡು ಸಮಾಜದ ಅಭಿವೃದ್ಧಿಗೆ ಬೇಕಾಗುವ ಸೌಲಭ್ಯ ಕಲ್ಪಿಸುವ ದೊಡ್ಡ ಗುಣ ಹೊಂದಿದ್ದಾರೆ’ ಎಂದರು.ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಪಿಎಸ್ಐ ಸಜಿತ್ ಕುಮಾರ್ ಜಿ.ಆರ್, ಕಾಂಗ್ರೆಸ್ ಮುಖಂಡ ಕೆ.ಎನ್. ವಿನಾಯಕ್, ಎಚ್. ಹಾಲಪ್ಪ, ಕಡೂರು ಸವಿತಾ ಸಮಾಜದ ಅಧ್ಯಕ್ಷ ವೆಂಕಟೇಶ್ ಮಾತನಾಡಿದರು. ಬೀರೂರು ಸವಿತಾ ಸಮಾಜದ ಉಪಾಧ್ಯಕ್ಷ ಕೃಷ್ಣ, ಸಂಚಾಲಕ ಅಭಿನಂದನ್, ಕಾರ್ಯದರ್ಶಿ ಜಿ.ದೇವರಾಜ್, ಪದಾಧಿಕಾರಿ ಟಿ.ಎಂ.ಗಣೇಶ್, ಟಿ.ಎನ್.ಸುಬ್ರಮಣಿ, ಮಂಜುನಾಥ್, ಮುರುಗೇಶ್ ಹಾಗೂ ಸವಿತಾ ಸಮಾಜದ ಸದಸ್ಯರು ಭಾಗವಹಿಸಿದ್ದರು.19 ಬೀರೂರು 1ಬೀರೂರಿನ ಸವಿತಾ ಸಮಾಜದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಆನಂದ್ ಅವರನ್ನು ಸನ್ಮಾನಿಸಲಾಯಿತು. ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಬೀರೂರು ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಸವಿತಾ ಸಮಾಜದ ಅಧ್ಯಕ್ಷ ರಾಜು, ಕಾಯದರ್ಶಿ ಜಿ.ದೇವರಾಜ್, ಮಂಜುನಾಥ್, ಪಿಎಸ್ಐ ಸಜಿತ್ ಕುಮಾರ್ ಇದ್ದರು