ಸಾರಾಂಶ
- ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಂದ ಪ್ರಶಸ್ತಿ ಸ್ವೀಕಾರ - - - ಕನ್ನಡಪ್ರಭ ವಾರ್ತೆ ಜಗಳೂರು
ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನಡೆದ ಭಜನೆ ಸ್ಪರ್ಧೆಯಲ್ಲಿ ಬಿಳಿಚೋಡಿನ ಶ್ರೀ ಬಸವೇಶ್ವರ ಭಜನಾ ತಂಡಕ್ಕೆ ಪ್ರಥಮ ಪ್ರಶಸ್ತಿ ದೊರಕಿದ್ದು, ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಂದ ಪ್ರಶಸ್ತಿ ಸ್ವೀಕರಿಸಲಾಯಿತು.ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಸ್.ಪಿ.ರಾಜೇಶ್, ಮಾಜಿ ಜಿಪಂ ಸದಸ್ಯರಾದ ಕೆ.ಪಿ.ಪಾಲಯ್ಯ ಇನ್ನಿತರೆ ಗಣ್ಯರು ಶುಭ ಕೋರಿದರು. ತಂಡದ ಮುಖ್ಯಸ್ಥರಾದ ಪಿ.ಜಿ.ಪರಮೇಶ್ವರಪ್ಪ, ದ್ಯಾಮೇಶ್ ಪೂಜಾರ್, ಶಂಕ್ರಪ್ಪ, ಪಿ.ಎಸ್.ಪ್ರಕಾಶ್, ಪಿ.ಎ.ಚಂದ್ರಪ್ಪ, ಜೆ.ಕರಿಬಸಪ್ಪ, ಪಿ.ನಾಗೇಂದ್ರಪ್ಪ ಶಿಕ್ಷಕರು, ಹಿಮಗಿರಿಯಪ್ಪ, ಕೆ.ನಾಗಪ್ಪ, ಜಿ.ರೇವಣ್ಣ, ಪಿ.ಎಂ.ಕರಿಬಸಪ್ಪ, ಪಿ.ಎಸ್.ಸಿದ್ದೇಶ್, ಬಿ.ವಿ.ನಾಗರಾಜು, ಕೆಂಚಪ್ಪ, ಜಿ.ಚೆನ್ನಬಸಪ್ಪ, ಕೆ.ಎಂ.ರವಿ ಇತರರು ಇದ್ದರು.
ತಂಡದ ಸಾಧನೆ:ಕಳೆದ ವರ್ಷ ಕೊಟ್ಟೂರಿನಲ್ಲಿ ನಡೆದ 2024ರ ತರಳಬಾಳು ಹುಣ್ಣಿಮೆ, ಹುಬ್ಬಳ್ಳಿ, ಉಕ್ಕಡಗಾತ್ರಿ ಸೇರಿದಂತೆ ರಾಜ್ಯದ ಹಲವು ಕಡೆ ನಡೆದ ಭಜನಾ ಸ್ಪರ್ಧೆಗಳಲ್ಲಿ 34 ವರ್ಷಗಳಿಂದಲೂ ಸತತವಾಗಿ ಬಿಳಿಚೋಡಿನ ಶ್ರೀ ಬಸವೇಶ್ವರ ಭಜನಾ ತಂಡ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ. ಪ್ರತಿ ವರ್ಷ ಸಿರಿಗೆರೆಯಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಗಳು ನಡೆಯುತ್ತವೆ. ಸಿರಿಗೆರೆಯಲ್ಲಿಯೇ 6 ಬಾರಿ ಭಜನಾ ಪ್ರಶಸ್ತಿ ಬಹುಮಾನ ತಂಡ ಪಡೆದಿದೆ. 2025ರ ಈ ಬಾರಿ ಜಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿಯೂ ಪ್ರಶಸ್ತಿ ಪಡೆಯಲಾಗಿದೆ ಎಂದು ಭಜನಾ ತಂಡದ ಮುಖ್ಯಸ್ಥ, ಮಾಜಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಪಿ.ಜಿ.ಪರಮೇಶ್ವರಪ್ಪ ತಿಳಿಸಿದ್ದಾರೆ. 2019-20ನೇ ಸಾಲಿನಲ್ಲಿ ಬಿಳಿಚೋಡಿನ ಶ್ರೀ ಬಸವೇಶ್ವರ ಭಜನಾ ತಂಡದ ಮುಖ್ಯಸ್ಥ ಪಿ.ಜಿ.ಪರಮೇಶ್ವರಪ್ಪ ಅವರಿಗೆ ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ದೊರಕಿದೆ.
- - - -10ಜೆ.ಜಿ.ಎಲ್.ಚಿತ್ರ1:ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ-2025 ಮಹೋತ್ಸವದ ಭಜನೆ ಸ್ಪರ್ಧೆಯಲ್ಲಿ ಜಗಳೂರು ತಾಲೂಕಿನ ಬಿಳಿಚೋಡಿನ ಶ್ರೀ ಬಸವೇಶ್ವರ ಭಜನಾ ತಂಡ ಸದಸ್ಯರು ಪಾಲ್ಗೊಂಡರು.