ಸಾರಾಂಶ
ಶ್ರೀ ವಾದಿರಾಜ ತೀರ್ಥ ಶ್ರೀಪಾದರು ಸುಲಭ ರೀತಿಯಲ್ಲಿ ಭಗವಂತನನ್ನು ಭಜಿಸಲು ರಚಿಸಿಕೊಟ್ಟ ತುಳಸಿ ಸಂಕೀರ್ತನೆ ಶನಿವಾರ ಆಯೋಧ್ಯೆಯಲ್ಲಿಯೂ ನಡೆಯಿತು. ತುಳಸಿ ಸಂಕೀರ್ತನೆ ಇಂದಿಗೂ ತುಳುನಾಡಿನ ನೂರಾರು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಇಂದಿಗೂ ನಡೆಯುತ್ತದೆ.
ಕನ್ನಡಪ್ರಭ ವಾರ್ತೆ ಉಡುಪಿ
ಯುಗಪುರುಷರೆಂದೇ ಪ್ರಸಿದ್ಧರಾದ ಭಾವೀಸಮೀರ ಶ್ರೀ ವಾದಿರಾಜ ತೀರ್ಥ ಶ್ರೀಪಾದರು ಕಾರ್ತಿಕ ಮಾಸದಲ್ಲಿ ತುಳಸಿ ಆರಾಧನೆಯ ಹೊತ್ತಲ್ಲಿ ಅತ್ಯಂತ ಸುಲಭ ರೀತಿಯಲ್ಲಿ ಭಗವಂತನನ್ನು ಭಜಿಸಲು ರಚಿಸಿಕೊಟ್ಟ ತುಳಸಿ ಸಂಕೀರ್ತನೆ ಇಂದಿಗೂ ತುಳುನಾಡಿನ ನೂರಾರು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಇಂದಿಗೂ ನಡೆಯುತ್ತದೆ.ಈ ಸಂಪ್ರದಾಯ ಶನಿವಾರ ಆಯೋಧ್ಯೆಯಲ್ಲಿಯೂ ನಡೆಯಿತು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ರಾಮಮಂದಿರದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದ ಪ್ರಯುಕ್ತ ಪ್ರತಿದಿನ ಸಂಜೆ ಉತ್ಸವ ನಡೆಯುತ್ತಿದ್ದು, ಶನಿವಾರ ಸಂಜೆ ರಾಮಮಂದಿರದ ಅಂಗಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ವಸಂತಮಂಟಪದಲ್ಲಿ ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನಿಟ್ಟು ವಸಂತೋತ್ಸವ ನಡೆಸಿದರು.ಕೃಷ್ಣಮಠದಲ್ಲಿ ಮೂವರ ಸಾಧಕರಿಗೆ ಸನ್ಮಾನ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಮೂವರು ಸಾಧಕರಿಗೆ ವಿಶೇಷ ಸನ್ಮಾನ ಮಾಡಲಾಯಿತು.ದಾಸ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದ ಅನಂದ ತೀರ್ಥಾಚಾರ್ ಪಗಡಾಲ್, ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಪರಿಣತಿ ಹೊಂದಿರುವ ಕೈಮುಖ್ಯಂ ನಾರಾಯಣ ನಂಬೂದರಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರಹ್ಲಾದ ರಾಮ ರಾವ್ ಅವರನ್ನು ಸನ್ಮಾನಿಸಿದರು.