ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶ್ರೇಯಸ್ ಪಟೇಲ್‌ ಗೆ ಜಯ

| Published : Jun 05 2024, 12:30 AM IST

ಸಾರಾಂಶ

ಕಡೂರು, ಹಾಸನ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಹಾಸನ ವ್ಯಾಪ್ತಿಗೆ ಒಳಪಡುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನಡೆದ ಜಿದ್ದಾಜಿದ್ದಿ ಪೈಪೋಟಿಯಲ್ಲಿ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶ್ರೇಯಸ್ ಪಟೇಲ್ 74,126ಗಳನ್ನು ಹಾಗು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 76,369 ಮತ ಪಡೆದಿದ್ದಾರೆ.

ಶ್ರೇಯಸ್ ಗೆ 74,126, ಪ್ರಜ್ವಲ್ ರೇವಣ್ಣ 76,369 ಮತ

ಕನ್ನಡಪ್ರಭ ವಾರ್ತೆ, ಕಡೂರು

ಹಾಸನ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಹಾಸನ ವ್ಯಾಪ್ತಿಗೆ ಒಳಪಡುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನಡೆದ ಜಿದ್ದಾಜಿದ್ದಿ ಪೈಪೋಟಿಯಲ್ಲಿ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶ್ರೇಯಸ್ ಪಟೇಲ್ 74,126ಗಳನ್ನು ಹಾಗು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 76,369 ಮತ ಪಡೆದಿದ್ದಾರೆ.

ಹಾಸನ ಲೋಕಸಭೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಂದ 6,70,274 ಮತ ಪಡೆದ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಪ್ರಜ್ವಲ್ ರೇವಣ್ಣ 6,26,536 ಮತ ಪಡೆದು 43,738 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ..ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿದ್ದ ಕಡೂರು ಕ್ಷೇತ್ರವನ್ನು ಉದ್ದೇಶಪೂರ್ವಕವಾಗಿ ಹಾಸನ ಲೋಕಸಭೆಗೆ ಸೇರಿಸಲಾಗಿದೆ ಎಂಬ ದೂರುಗಳು ಇತ್ತಾದರೂ ಕಳೆದ 15 ವರ್ಷಗಳ ಕಾಲ ಜೆಡಿಎಸ್ ಪಕ್ಷದ ಹಿಡಿತದಲ್ಲಿದ್ದ ಹಾಸನ ಲೋಕಸಭೆಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎರಡು ಭಾರಿ ಹಾಗು ಪ್ರಜ್ವಲ್ ರೇವಣ್ಣ ಕಳೆದ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 15 ವರ್ಷಗಳ ಬಳಿಕ ಜೆಡಿಎಸ್ ತೆಕ್ಕೆಯಲ್ಲಿದ್ದ ಹಾಸನ ಕ್ಷೇತ್ರ ಈ ಬಾರಿ ಯುವ ರಾಜಕಾರಣಿಗಳ ಅಬ್ಬರದ ಹೋರಾಟದಲ್ಲಿ ಕಾಂಗ್ರೆಸ್ ನ ಶ್ರೇಯಸ್ 6,70,274 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.ಕ್ಷೇತ್ರದಲ್ಲಿ ಕಡೂರು ಶಾಸಕ ಕೆ.ಎಸ್. ಆನಂದ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ವೈ ಎಸ್ ವಿ ದತ್ತ ಅವರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿತ್ತು. ಇತರೆ ವಿಧಾನಸಭಾ ಕ್ಷೇತ್ರಗಳಿಗಿಂತ ಕಡೂರು ಕ್ಷೇತ್ರದಲ್ಲಿ ಪೆನ್ ಡ್ರೈವ್ ಪ್ರಕರಣ ಪ್ರಭಾವ ಅಷ್ಟಾಗಿ ಬೀರದಿದ್ದರೂ ಬಿಜೆಪಿ- ಜೆಡಿಎಸ್ ನಾಯಕರ ಹೋರಾಟದಿಂದ 76,369 ಮತ ಗಳಿಸಿರುವುದು ಸಾಕ್ಷಿಯಾಗಿದೆ. ಇನ್ನು ಕಾಂಗ್ರೆಸ್ ನಾಯಕರ ಹೋರಾಟದಿಂದ 74,126 ಮತ ಗಳಿಸಿದ್ದು, ಬೇರೆ ಕ್ಷೇತ್ರಗಳ ಹೆಚ್ಚಿನ ಮತ ಗಳಿಕೆಯಿಂದ ಶ್ರೇಯಸ್ ಗೆಲುವಿನ ನಗೆ ಬೀರಿದ್ದಾರೆ.4ಕೆಕಡಿಯು1.

ಶ್ರೇಯಸ್ ಪಟೇಲ್ ಗೆಲುವಿನ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಾಂಗ್ರೆಸ್ ಪಕ್ಷದಿಂದ ಶಾಸಕ ಕೆ.ಎಸ್ .ಆನಂದ್ ನೇತೃತ್ವದಲ್ಲಿ ಕಡೂರು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಲಾಯಿತು.