ಸಾರಾಂಶ
ತಡಸೂರು ಗ್ರಾಮದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಏ. 30ರಿಂದ ಮೇ. 5ರವರೆಗೆ ನಡೆಯಲಿದೆ.
ತಿಪಟೂರು: ತಾಲೂಕಿನ ತಡಸೂರು ಗ್ರಾಮದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಏ. 30ರಿಂದ ಮೇ. 5ರವರೆಗೆ ನಡೆಯಲಿದೆ. ಏ.30ರಂದು ಅಮ್ಮನವರ ಗಂಗಾಸ್ನಾನ, ಮೇ.1 ಮತ್ತು 2ರಂದು ಮಧುವಣಗಿತ್ತಿ ಶಾಸ್ತ್ರ, 3ರಂದು ಬಿದರೆಗುಡಿ ಬಿದಿರಾಂಬಿಕದೇವಿಯವರ ಆಗಮನ, ನಂತರ ಆರತಿ ಮತ್ತು ಬಾನ, ರಾತ್ರಿ ದೇವಿ ಮಹಾತ್ಮೆ ಮೂಡಲಪಾಯ ಯಕ್ಷಗಾನ ಏರ್ಪಡಿಸಲಾಗಿದೆ. 4ರಂದು ಬಾಯಿ ಬೀಗ ಮತ್ತು ಬೇವಿನ ಉಡುಗೆ ರಾತ್ರಿ ಶ್ರೀ ಚೌಮುಂಡೇಶ್ವರಿ ಹಾಗೂ ಬಿದಿರಾಂಬಿಕದೇವಿಯವರ ಉತ್ಸವ, ಮದ್ದುಗುಂಡಿನ ಪ್ರದರ್ಶನ ನಡೆಯಲಿದೆ. 5ರಂದು ಶ್ರೀ ಚಾಮುಂಡೇಶ್ವರಿ ದೇವಿಯವರ ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರಸ್ವಾಮಿ, ದೂತರಾಯ ಸ್ವಾಮಿಯವರಿಗೆ ಮಣೇವು ಮತ್ತು ಮಹಾಮಂಗಳಾರತಿ, ಓಕಳಿ ನಡೆಯಲಿದೆ. ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಮಂಡಳಿ ತಿಳಿಸಿದೆ.