ವಿಜೃಂಭಣೆಯ ಶ್ರೀ ಗುರು ಗೋರಕ್ಷನಾಥ ಜಾತ್ರೆ

| Published : Mar 14 2024, 02:00 AM IST

ವಿಜೃಂಭಣೆಯ ಶ್ರೀ ಗುರು ಗೋರಕ್ಷನಾಥ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ: ಪ್ರತಿ ವರ್ಷದಂತೆ ಈ ವರ್ಷವು ಶಿವರಾತ್ರಿ ಅಮವಾಸೆಯಂದು ನಗರದಲ್ಲಿ ದತ್ತಾತ್ರೇಯ ಮಂದಿರದಲ್ಲಿ ಗುರು ಗೋರಕ್ಷನಾಥರ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀಗುರು ಗೋರಕ್ಷನಾಥರ ಪಲ್ಲಕ್ಕಿ ಸೇವೆ ಬನಹಟ್ಟಿ ನಗರದ ಮಹಾದೇವ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೂಲಕ ದತ್ತಾತ್ರೆಯ ಮಂದಿರದ ವರೆಗೆ ನಡೆಯಿತು. ನಂತರ ಮಹಾಮಂಗಳಾರತಿ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಮಹಾಪ್ರಸಾದ ನಡೆಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪ್ರತಿ ವರ್ಷದಂತೆ ಈ ವರ್ಷವು ಶಿವರಾತ್ರಿ ಅಮವಾಸೆಯಂದು ನಗರದಲ್ಲಿ ದತ್ತಾತ್ರೇಯ ಮಂದಿರದಲ್ಲಿ ಗುರು ಗೋರಕ್ಷನಾಥರ ಜಾತ್ರೆ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀಗುರು ಗೋರಕ್ಷನಾಥರ ಪಲ್ಲಕ್ಕಿ ಸೇವೆ ಬನಹಟ್ಟಿ ನಗರದ ಮಹಾದೇವ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೂಲಕ ದತ್ತಾತ್ರೆಯ ಮಂದಿರದ ವರೆಗೆ ನಡೆಯಿತು. ನಂತರ ಮಹಾಮಂಗಳಾರತಿ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಮಹಾಪ್ರಸಾದ ನಡೆಯಿತು.

ಈ ವೇಳೆ ರಾವಳ ಸಮಾಜದ ಅಧ್ಯಕ್ಷ ತವನಪ್ಪ ರಾವಳ, ಅಶೋಕ ರಾವಳ, ಗೋರಕನಾಥ ರಾವಳ, ಪರಶುರಾಮ ರಾವಳ, ಮಹಾಂತೇಶ ರಾವಳ, ರವಿ ರಾವಳ, ಯಲ್ಲಪ್ಪ ರಾವಳ, ಉಮೇಶ ರಾವಳ ಸೇರಿದಂತೆ ಶ್ರೀಗೋರಕ್ಷನಾಥ ದೇವಸ್ಥಾನ ಸೇವಾ ಸಮಿತಿಯ ಸರ್ವ ಸದಸ್ಯರು ಇದ್ದರು.