ಸಾರಾಂಶ
ಎಲ್.ಕೆ.ಜಿ. ಮತ್ತು ಯು.ಕೆ.ಜಿ ಮಕ್ಕಳಿಗಾಗಿ ಕೃಷ್ಣ ರಾಧೆಯ ಛದ್ಮ ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಶ್ರೀ ನಟರಾಜ ಪಬ್ಲಿಕ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆಯ ಜೊತೆಗೆ ಅಕ್ಷರಭ್ಯಾಸವನ್ನು ಶನಿವಾರ ಮಾಡಿಸಲಾಯಿತು.ಅಲ್ಲದೆ, ಎಲ್.ಕೆ.ಜಿ. ಮತ್ತು ಯು.ಕೆ.ಜಿ ಮಕ್ಕಳಿಗಾಗಿ ಕೃಷ್ಣ ರಾಧೆಯ ಛದ್ಮ ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಮುಖ್ಯ ತೀರ್ಪುಗಾರರಾಗಿ ನಟರಾಜ ಮಹಿಳಾ ಕಾಲೇಜು ಅರ್ಥಶಾಸ್ತ್ರ ವಿಭಾಗದ ರಮ್ಯಾ ಆಗಮಿಸಿದ್ದರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ, ಶಾಲೆಯ ಪ್ರಾಂಶುಪಾಲೆ ಎಂ.ಆರ್. ಪವಿತ್ರಾ, ಬೋಧಕ ಮತ್ತು ಬೋಧಕೇತರರು ಇದ್ದರು.