ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಅನಂತ್ರಾಂ ವೃತ್ತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರೆವೇರಿಸಿದ ಬಳಿಕ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರು ಶ್ರೀರಾಮನ ದೇವಸ್ಥಾನವನ್ನು ನಿರ್ಮಿಸುವುದರ ಮೂಲಕ ಇತಿಹಾಸವನ್ನು ಸೃಷ್ಠಿಸಿದ್ದಾರೆ. ಇಡೀ ದೇಶವೇ ಹಬ್ಬದ ರೂಪದಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಇದೇ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಕೃಷ್ಣ, ಬಿಜೆಪಿ ಹಿರಿಯ ಮುಖಂಡ ಯಮದೂರು ಸಿದ್ದರಾಜು, ಅಪ್ಪಾಜಿಗೌಡ, ಅಶೋಕ್ ಕ್ಯಾತನಹಳ್ಳಿ, ಬಸವರಾಜು, ಪುರಸಭೆ ಸದಸ್ಯ ಕೃಷ್ಣ, ಪುಟ್ಟಸ್ವಾಮಿ, ನಂದಕುಮಾರ್, , ಹೆಬ್ಬಣಿ ಬಸವರಾಜು, ಕೆ.ಸಿ ನಾಗೇಗೌಡ, ಮುದ್ದುಮಲ್ಲು, ಅಕ್ಕಿ ಕೃಷ್ಣ ಸೇರಿದಂತೆ ಇತರರು ಇದ್ದರು. ಸಾರ್ವಜನಿಕರಿಗೆ ಪ್ರಸಾಧ ವಿತರಣೆ ನಡೆಯಿತು.ದೇಗುಲ, ಸಾರ್ವಜನಿಕ ಸ್ಥಳಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪುಜೆ ಸಲ್ಲಿಕೆಮಳವಳ್ಳಿ: ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ದೇಗುಲ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರು, ಭಕ್ತರು ಧನ್ಯತಾ ಮೆರೆದರು.ಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನ, ಗಂಗಾಮತ ಬೀದಿಯ ಅಡ್ಡೆನಿಂಗಯ್ಯನ ಕೇರಿಯ ಸಿದ್ದಪ್ಪಾಜಿ ಸೀತಾ ರಾಮಾನುಂಜಯ, ರಾಘವ ನಂದೀನಿ ಸಭಾ ಮಂದಿರ ಶ್ರೀರಾಮ ಮಂದಿರ, ಭೂಗತಹಳ್ಳಿ, ಕೋರೇಗಾಲ, ರಾಗಿಬೊಮ್ಮನಹಳ್ಳಿ, ಉಪ್ಪಮಹಳ್ಳಿ, ಬಿಜಿಪುರ ಸೇರಿದಂತೆ ವಿವಿದೆಡೆ ರಾಮೋತ್ಸವವು ಭಕ್ತಿ ಪ್ರಧಾನವಾಗಿ ಜರುಗಿತು.ಪಟ್ಟಣದ ರಾಘವನಂದೀನಿ ಸಭಾದಲ್ಲಿ ಮುಂಜಾನೆಯಿಂದಲೇ ಗಣಪತಿ ಹೋಮ, ಚಂಡಿಗ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ಗಾಯಿತ್ರಿ ವಿಪ್ರ ಮಂಡಳಿ ವತಿಯಿಂದ ಶ್ರೀರಾಮನ ಭಜನೆ ಕಾರ್ಯಕ್ರಮ ನಡೆಯಿತು. ನಂತರ ಮಹಾಮಂಗಳಾರತಿ ನಡೆದ ಬಳಿಕ ಪ್ರಸಾದ ವಿನಿಯೋಗ ನಡೆಯಿತು.ಇದೇ ವೇಳೆ ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತ್ಕುಮಾರ್, ಕಾರ್ಯದರ್ಶಿ ಸೋಮಶೇಖರ್, ಪುರೋಹಿತ ಗಿರೀಶ್, ವಕೀಲರಾದ ಸುಬ್ಬ ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.