ವಿಜೃಂಭಣೆಯ ಶ್ರೀ ಶಿವಭವಾನಿ ಜಯಂತ್ಯುತ್ಸವ

| Published : Feb 15 2024, 01:33 AM IST

ಸಾರಾಂಶ

ಪಟ್ಟಣದ ಕ್ಷತ್ರೀಯ ಮರಾಠಾ ಸಮಾಜ ಬಾಂಧವರ ಕುಲದೇವತೆ ಶ್ರೀ ಶಿವಭವಾನಿ ಮಂದಿರದ ೨೫ನೇ ವರ್ಧಂತಿ ರಜತ ಮಹೋತ್ಸವ ಹಾಗೂ ಜಯಂತ್ಯುತ್ಸವವನ್ನು ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ಕ್ಷತ್ರೀಯ ಮರಾಠಾ ಸಮಾಜ ಬಾಂಧವರ ಕುಲದೇವತೆ ಶ್ರೀ ಶಿವಭವಾನಿ ಮಂದಿರದ ೨೫ನೇ ವರ್ಧಂತಿ ರಜತ ಮಹೋತ್ಸವ ಹಾಗೂ ಜಯಂತ್ಯುತ್ಸವವನ್ನು ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಮಂದಿರದಲ್ಲಿ ಬೆಳಿಗ್ಗೆ 7ಗಂಟೆಯಿಂದಲೇ ಶ್ರೀ ಶಿವಭವಾನಿ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ನಡೆಸಲಾಯಿತು. ಬಳಿಕ, ಪಟ್ಟಣದಲ್ಲಿ ಶ್ರೀ ಶಿವಭವಾನಿ ದೇವಿಯ ಭವ್ಯ ಮೆರವಣಿಗೆಯನ್ನು ವಿವಿಧ ವಾದ್ಯ ಹಾಗೂ ಕುಂಭ ಮೇಳದೊಂದಿಗೆ ಪಲ್ಲಕ್ಕಿ ಕಳಸದ ಉತ್ಸವ ರಾಜವಾಡೆಯಿಂದ ಪ್ರಾರಂಭವಾಗಿ ನಂತರ ಭೀಮನಭಾವಿಯಲ್ಲಿ ಗಂಗಸ್ಥಳ ನೆರವೇರಿಸಲಾಯಿತು. ನಂತರ ಮೆರವಣಿಗೆಯು ನಾಗರಕಲ್ಲ ಬಡಾವಣೆ, ಶಿವಾಜಿ ಮಹಾರಾಜರ ಚೌಕ್, ಶ್ರೀ ವಿಠ್ಠಲ ಮಂದಿರ ರಸ್ತೆ, ಶ್ರೀ ಬಾಲಾಜಿ ಮಂದಿರ ರಸ್ತೆ, ಕತ್ರಿ ಬಜಾರ, ಶ್ರೀ ಬಸವೇಶ್ವರ ಬಡಾವಣೆಗಳಲ್ಲಿ ಸಾಗಿ ದೇವಸ್ಥಾನ ತಲುಪಿತು. ಧಾರ್ಮಿಕ ವಿಧಿವಿಧಾನಗಳು ಅರ್ಚಕ ವೇ.ಸಂತೋಷ ಭಟ್ ಜೋಶಿ ನೇತೃತ್ವದಲ್ಲಿ ವೇ.ರಾಘವೇಂದ್ರ ಉಡುಪಿ, ವೇ.ಗುಂಡುಭಟ್ ಜೋಶಿ, ವೇ.ಪ್ರತೀಕ ಭಟ್, ವೇ.ಅಶೋಕ ಜೋಶಿ, ವೇ.ಸಂಜೀವಾಚಾರ್ಯ ಗ್ರಾಂಪೊರೋಹಿತ, ಹಾಗೂ ದಂಪತಿಗಳಾದ ಸಂಬಾಜಿ ವಾಡಕರ್, ವಿಠ್ಠಲ ಸಾಳುಂಕೆ ಅವರಿಂದ ನಡೆದವು. ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ಸಮಾಜದ ಅಧ್ಯಕ್ಷ ಸಂಬಾಜಿ ವಾಡಕರ, ಉಪಾಧ್ಯಕ್ಷ ಅಣ್ಣಾಜಿ ಜಗತಾಪ, ಕಾರ್ಯದರ್ಶಿ ಕಾಶಿರಾಯ ಮೋಹಿತ, ಬಸವಂತ್ರಾಯ ಸುಬೇದಾರ, ಜಿ.ಟಿ.ಘೋರ್ಪಡೆ, ಸಂಬಾಜಿ ಡಿಸಲೆ, ಗುಂಡುರಾವ್ ಜಗತಾಪ, ಶಶಿಧರ ಡಿಸಲೆ, ವಿಷ್ಣು ಸಾಳುಂಕೆ, ಪುಂಡಲಿಕ ಮೋಹಿತೆ, ಸಂಜೀವ ಕದಂ, ಸುಭಾಸ ಘಾವಡೆ, ಮಾರುತಿ ಘಾಟಗೆ, ನಾರಾಯಣ ಸುಭೇದಾರ, ಪಾಂಡು ಕದಂ, ವಿಠ್ಠಲ ಶೇವಳಕರ, ವಿಠ್ಠಲ ಘಾಯಕವಾಡ, ಶ್ರೀನಿವಾಸ ಶೇವಳಕರ, ವಿಠ್ಠಲ ಮೋಹಿತೆ, ಪ್ರವೀಣ್ ಘೋರ್ಪಡೆ, ರಾಘವೇಂದ್ರ ಮಾನೆ, ಪಾಂಡು ಕದಂ, ರಮೇಶ ಮೋಹಿತೆ, ಲಕ್ಷ್ಮಣ ಶೇವಳಕರ, ಪರಶುರಾಮ ಶೇವಳಕರ, ರಾಮು ಜಗತಾಪ, ಗಣಪತಿ ಚವ್ಹಾಣ, ಮಹಾದೇವ ಚವ್ಹಾಣ, ಕಾಶೀನಾಥ ಪಾಟೀಲ, ರಮೇಶ ಜಾಧವ, ಅಪ್ಪಾಜಿ ಮಾನೆ, ಸುಭಾಸ ಕಾಮಟೆ, ಅಂಬಾಜಿ ಪವಾರ, ಗೋಪಾಲ ಜಾಧವ, ನಾಗೇಶ ಲೋಕಂಡೆ, ಶಿವಾಜಿ ನವಲೆ, ತಾನಾಜಿ ಭೋಸಲೆ, ಸಂತೋಷ ಪಂದೆ, ದತ್ತು ಶಿಂಧೆ, ಸಂತೋಷ ಡಿಸಲೆ, ಅಂಬಾಜಿ ಘೋರ್ಪಡೆ, ನವೀನ್ ಡಿಸಲೆ, ಮೊದಲಾದವರು ಭಾಗವಹಿಸಿದ್ದರು.