ಭದ್ರಗಿರಿಯಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಆರಾಧನಾ ಮಹೋತ್ಸವ

| Published : Jan 08 2025, 12:18 AM IST

ಭದ್ರಗಿರಿಯಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಆರಾಧನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮದ್ ಸುಧೀಂದ್ರ ಸ್ವಾಮಿಜಿ ಅವರ 9ನೇ ಪುಣ್ಯತಿಥಿ ಆರಾಧನೆಯನ್ನು ಮಂಗಳವಾರ ದಕ್ಷಿಣ ಪಂಡರಾಪುರ ಖ್ಯಾತಿಯ ಕಲ್ಯಾಣಪುರದ ಭದ್ರಗಿರಿ ಶ್ರೀ ವೀರವಿಠಲ ದೇವಸ್ಥಾನದಲ್ಲಿ ಭಕ್ತಿ ಶ್ರದ್ಧೆಯಿಂದ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮದ್ ಸುಧೀಂದ್ರ ಸ್ವಾಮಿಜಿ ಅವರ 9ನೇ ಪುಣ್ಯತಿಥಿ ಆರಾಧನೆಯನ್ನು ಮಂಗಳವಾರ ದಕ್ಷಿಣ ಪಂಡರಾಪುರ ಖ್ಯಾತಿಯ ಕಲ್ಯಾಣಪುರದ ಭದ್ರಗಿರಿ ಶ್ರೀ ವೀರವಿಠಲ ದೇವಸ್ಥಾನದಲ್ಲಿ ಭಕ್ತಿ ಶ್ರದ್ಧೆಯಿಂದ ನಡೆಸಲಾಯಿತು.ಈ ಶುಭ ಸಂದರ್ಭದಲ್ಲಿ ಶ್ರೀಗಳ ಭಕ್ತಾಭಿಮಾನಿಗಳಿಂದ ಭಜನೆ ಹಾಗೂ ದೇವಸ್ಥಾನದ ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶಿನಾಥ ಭಟ್ ಮತ್ತು ಸಿಂಧು ಕಾಮತ್ ಅವರಿಂದ ಗುರುಗಳ ಗುಣಗಾನ ಮತ್ತು ಪ್ರಭಾಕರ ಭಟ್ ಇವರಿಂದ ಗುರುಸ್ಮರಣಾ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಭದ್ರಗಿರಿ ಪಾಂಡುರಂಗ ಆಚಾರ್ಯ, ಅರ್ಚಕರಾದ ಸದಾನಂದ ಆಚಾರ್ಯ, ಕಾರ್ಯಕ್ರಮದ ಸೇವಾದಾರರಾದ ಸಿಎ ಗಣೇಶ್ ಕಾಮತ್ ಮತ್ತು ಕುಟುಂಬಸ್ಥರು, ತೋನ್ಸೆ ಗೋಕುಲದಾಸ ಪೈ, ತೋನ್ಸೆ ಅಜಿತ್ ಪೈ, ಗೌರವಾಧ್ಯಕ್ಷ ಎನ್. ಮಂಜುನಾಥ ನಾಯಕ್, ವಿಶ್ವಸ್ತ ಮಂಡಳಿಯ ಸದಸ್ಯರಾದ ಗಣೇಶ ಪೈ, ಗಿರಿಧರ ರಾವ್, ಸುರೇಶ ಶೆಣೈ‌, ಭಾಸ್ಕರ ಶೆಣೈ, ಭದ್ರಗಿರಿ ರಘುವೀರ ಆಚಾರ್ಯ ಮತ್ತಿತರ ನೂರಾರು ಭಕ್ತಾದಿಗಳು ಆರಾಧನೆಯಲ್ಲಿ ಭಾಗವಹಿಸಿದ್ದರು.