ಶಿಗ್ಗಾಂವಿ: ಪಟ್ಟಣದ ಪುರಸಭೆಯ ೨೦೨೪-೨೫ನೇ ಸಾಲಿನ ವಾಸ್ತವಿಕ ಆಯವ್ಯಯ ಲೆಕ್ಕ ಹಾಗೂ ೨೦೨೫-೨೬ನೇ ಸಾಲಿನ ಪರಿಷ್ಕೃತ ಆಯವ್ಯಯದೊಂದಿಗೆ ೨೦೨೬-೨೭ನೇ ಸಾಲಿನ ಆರ್ಥಿಕ ಮುನ್ನೋಟದ ಆಯ-ವ್ಯಯವನ್ನು ಪುರಸಭೆ ಆಡಳಿತಾಧಿಕಾರಿಗಳಾದ ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಮಂಡಿಸಿದರು.
ಸನ್ ೨೦೨೬-೨೭ನೇ ಸಾಲಿನಲ್ಲಿ ರಾಜಸ್ವ ಖಾತೆಯಲ್ಲಿ ₹೧೦.೪೧ ಕೋಟಿಗಳ ಬಂಡವಾಳ ಖಾತೆಯಲ್ಲಿ ₹೧೨.೪೭ ಕೋಟಿ ಹಾಗೂ ಅಸಾಧಾರಣ ಖಾತೆಯಲ್ಲಿ ₹೩.೪೪ ಕೋಟಿ ಒಟ್ಟು ₹೨೬.೩೨ ಕೋಟಿ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ.ಅದೇ ರೀತಿ ರಾಜಸ್ವ ಖಾತೆಯಲ್ಲಿ ₹೯.೬೦ ಕೋಟಿ ರಾಜಸ್ವ ವೆಚ್ಚ ನಿರೀಕ್ಷಿಸಿ, ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ ₹೧೨.೯೩ ಕೋಟಿಗಳನ್ನು ವೆಚ್ಚಕ್ಕಾಗಿ ಮೀಸಲಿರಿಸಿದೆ. ಅಸಾಧಾರಣ ಖಾತೆಯಲ್ಲಿ ೩.೪೪ ಕೋಟಿ ಅಸಾಧಾರಣ ವೆಚ್ಚ ನಿರೀಕ್ಷಿಸಿದೆ. ಒಟ್ಟಾರೆ ₹೨೬.೩೨ ಕೋಟಿ ಸ್ವೀಕೃತಿ ನಿರೀಕ್ಷಿಸಿದೆ. ₹೨೫.೯೮ ಕೋಟಿ ವೆಚ್ಚ ಅಂದಾಜಿಸಿ, ₹೩೪.೫೦ ಲಕ್ಷ ಉಳಿತಾಯ ಅಂದಾಜು ಅಯ-ವ್ಯಯ ನಿರೀಕ್ಷಿಸಿದೆ.
ಆದಾಯ ವಿವರ: ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ) ₹೧ ಕೋಟಿ, ೧೫ನೇ ಹಣಕಾಸು ಯೋಜನೆ ಅನುದಾನ ₹೨ ಕೋಟಿ, ವಿಶೇಷ ಅನುದಾನ ₹೧೦ ಕೋಟಿ, ವೇತನ ಅನುದಾನ ₹೩.೧೦ ಕೋಟಿ, ಲೈಸನ್ಸ್ ಫೀ ಶುಲ್ಕ ₹೮ ಲಕ್ಷ, ಸಂತೆ ಶುಲ್ಕ ₹೧೪ ಲಕ್ಷ, ನಲ್ಮ/ ಡೇ-ನಲ್ಮ ಅನುದಾನ ₹೨೦ ಲಕ್ಷ, ವಿದ್ಯುತ್ ಶಕ್ತಿ ಅನುದಾನ ₹೨.೫೦ ಕೋಟಿ, ಆಸ್ತಿ ತೆರಿಗೆ ₹೧.೪೫ ಕೋಟಿ, ನೀರಿನ ತೆರಿಗೆ ₹೬೫ ಲಕ್ಷ, ಮಳಿಗೆ ಬಾಡಿಗೆ ₹೧೮ ಲಕ್ಷ, ಖಾತಾ ಬದಲಾವಣೆ, ಬೋಜಾ ಇತರ ಶುಲ್ಕಗಳು ₹೨೭.೧೫ ಲಕ್ಷ ಹೂಡಿಕೆಗಳಿಂದ ಬಂದ ಬಡ್ಡಿ ₹೨೨ ಲಕ್ಷ, ಇತರ ಯೋಜನೆಗಳು ₹೬೫ ಲಕ್ಷ, ಘನತ್ಯಾಜ್ಯ ವಿಲೇವಾರಿ ಅನುದಾನ ₹೧ ಕೋಟಿ, ಕಟ್ಟಡ ಪರವಾನಗಿ ಇತರ ಶುಲ್ಕಗಳು ₹೩೦ ಲಕ್ಷ, ಅಸಾಮಾನ್ಯ ಆದಾಯ ಮತ್ತು ವೆಚ್ಚ ಖಾತೆ ₹೨.೪೩ ಕೋಟಿ, ಕುಡಿಯವ ನೀರಿನ ಅನುದಾನ ₹೧೫ ಲಕ್ಷ, ಒಟ್ಟು ₹೨೬.೩೨ ಕೋಟಿ.ಖರ್ಚಿನ ವಿವರ: ಕಟ್ಟಡ ನಿರ್ಮಾಣ ₹೨ ಕೋಟಿ. ವಾಹನ ಖರೀದಿಗಾಗಿ ₹೫೦ ಲಕ್ಷ, ಕೆರೆ ಮತ್ತು ಉದ್ಯಾನ ಅಭಿವೃದ್ಧಿ ₹೧.೫ ಕೋಟಿ, ರಸ್ತೆ ನಿರ್ಮಾಣಕ್ಕಾಗಿ ₹೨.೪೦ ಕೋಟಿ, ಚರಂಡಿ ನಿರ್ಮಾಣ ₹೯೨.೬೫ ಲಕ್ಷ, ಅಭಿವೃದ್ಧಿ ಕಾಮಗಾರಿಗಳು ₹೨.೨೦ ಕೋಟಿ, ಬೀದಿ ದೀಪ ನಿರ್ವಹಣೆ, ಸಾಮಗ್ರಿ ₹೧.೫೦ ಕೋಟಿ, ಸಿಡಿ ನಿರ್ಮಾಣ ₹೧.೨೦ ಕೋಟಿ, ನೀರು ಸರಬರಾಜು ಸಾಮಗ್ರಿ ಖರೀದಿ ಮತ್ತು ನಿರ್ವಹಣೆ ₹೧.೫೦ ಕೋಟಿ, ಡಿನಲ್ಮ್ ಯೋಜನೆಗಳ ವೆಚ್ಚ ₹೨೦ ಲಕ್ಷ, ಇತರ ಯೋಜನೆಗಳು ₹೬೫ ಲಕ್ಷ, ಹೊರಗುತ್ತಿಗೆ ನೌಕರರ ವೆಚ್ಚ ₹೮೫ ಲಕ್ಷ. ರಸ್ತೆ, ಚರಂಡಿ, ಸಿಡಿ ಇತ್ಯಾದಿ ನಿರ್ವಹಣೆ ₹೫೬.೪೮ ಲಕ್ಷ, ಡೀಸೆಲ್ ಬಿಲ್ಲು, ವಾಹನ ದುರಸ್ತಿ ನಿರ್ವಹಣೆ ₹೩೦ ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಯೋಜನಾ ವೆಚ್ಚ ₹೩೫.೫೧ ಲಕ್ಷ, ಇತರ ಸಾಮಾನ್ಯ ವರ್ಗದ ಯೋಜನಾ ವೆಚ್ಚ ₹೮.೮೭ ಲಕ್ಷ, ಅಂಗವಿಕಲರ ವರ್ಗದ ಯೋಜನಾ ವೆಚ್ಚ ₹೬.೧೨ ಲಕ್ಷ, ಅಸಾಮಾನ್ಯ ಆದಾಯ ಮತ್ತು ವೆಚ್ಚದ ಖಾತೆ ₹೨.೪೩ ಕೋಟಿ, ವೇತನ ಅನುದಾನ ವೆಚ್ಚ ₹೩.೧೦ ಕೋಟಿ, ವಿದ್ಯುತ್ ಶಕ್ತಿ ಯೋಜನಾ ವೆಚ್ಚ ₹೨.೫೦ ಕೋಟಿ, ಕುಡಿಯುವ ನೀರು ಅನುದಾನ ವೆಚ್ಚ ₹೧೫ ಲಕ್ಷ, ಘನತ್ಯಾಜ್ಯ ವಿಲೇವಾರಿ ಯೋಜನಾ ವೆಚ್ಚ ₹೧ ಕೋಟಿ, ಒಟ್ಟಾರೆ ಖರ್ಚು ₹೨೫.೯೮ ಕೋಟಿ ವೆಚ್ಚದ ಬಜೆಟ್ ಮಂಡಿಸಿದ ಆಡಳಿತಾಧಿಕಾರಿಗಳು, ₹೩೪.೫೦ ಲಕ್ಷ ಉಳಿತಾಯ ಬಜೆಟ್ ನೀಡಿದ್ದಾರೆ.
ಮುಖ್ಯಾಧಿಕಾರಿ ಮಲ್ಲೇಶ್ ಆರ್., ಖಜಾಂಚಿ ರಾಜೇಶ ಕಹಾರ್ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.